ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ 75,000 ಹುದ್ದೆಗಳಿಗೆ ನೇಮಕಾತಿ: ಮೋದಿ ಸರ್ಕಾರದ ಗುರಿ

|
Google Oneindia Kannada News

Recommended Video

ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ ಮೋದಿ..? | Oneindia Kannada

ನವದೆಹಲಿ, ಜೂನ್ 3: ಕಳೆದ 45 ವರ್ಷಗಳಲ್ಲಿಯೇ ಅತಿ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ತೆರೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ.

ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಲಿದೆ. ಕೇಂದ್ರದ ಎಲ್ಲ ಸಚಿವಾಲಯಗಳಲ್ಲಿ ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಸರ್ಕಾರ, ಮುಂದಿನ ಕೆಲವು ತಿಂಗಳಿನಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಿದ್ದು, ಭರವಸೆ ನೀಡಿದಂತೆ ಉದ್ಯೋಗ ಸೃಷ್ಟಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಕಳೆದ ಅವಧಿಯ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ಭಾರಿ ಟೀಕಾಪ್ರಹಾರ ನಡೆಸಿದ್ದವು. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ನಿರುದ್ಯೋಗದ ಕುರಿತಾದ ವರದಿ ಪ್ರಕಟವಾಗಿದ್ದು, ಸರ್ಕಾರದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.

ಆರಂಭದಲ್ಲಿಯೇ ಮೋದಿ ಸರ್ಕಾರಕ್ಕೆ ಎದುರಾಯಿತು ಬೃಹತ್ ಸವಾಲು ಆರಂಭದಲ್ಲಿಯೇ ಮೋದಿ ಸರ್ಕಾರಕ್ಕೆ ಎದುರಾಯಿತು ಬೃಹತ್ ಸವಾಲು

ಹೀಗಾಗಿ ಉದ್ಯೋಗದ ಬಿಕ್ಕಟ್ಟನ್ನು ನಿವಾರಿಸುವುದನ್ನು ತನ್ನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿ ಸರ್ಕಾರ ತುರ್ತಿನ ಕ್ರಮಕ್ಕೆ ಮುಂದಾಗಿದೆ. ನಿರುದ್ಯೋಗದ ಮಟ್ಟ 45 ವರ್ಷಗಳಲ್ಲಿಯೇ ಹೆಚ್ಚಾಗಿರುವುದರಿಂದ ಬಿಕ್ಕಟ್ಟು ಮತ್ತಷ್ಟು ಹೆಚ್ಚಲು ಹಾಗೂ ವಿರೋಧಿಗಳ ಬಾಯಿಗೆ ಮತ್ತೆ ಆಹಾರವಾಗಲು ಸರ್ಕಾರ ಬಯಸಿಲ್ಲ.

ಆಂತರಿಕ ಸಮಿತಿ ರಚಿಸಲು ಸೂಚನೆ

ಆಂತರಿಕ ಸಮಿತಿ ರಚಿಸಲು ಸೂಚನೆ

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಎಲ್ಲೆಲ್ಲಿ ಉದ್ಯೋಗ ಖಾಲಿ ಉಳಿದಿದೆ, ಬಿಕ್ಕಟ್ಟಿನ ಮೂಲ ಕಾರಣಗಳ ಅಧ್ಯಯನ ಮತ್ತು ಅಂತಹ ಖಾಲಿ ಹುದ್ದೆಗಳ ಸೃಷ್ಟಿಗೆ ಕಾರಣವಾದ ಅಂಶಗಳನ್ನು ನಿವಾರಿಸಲು ತೆಗೆದುಕೊಳ್ಳಬೇಕಾದ ಆರಂಭಿಕ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಲು ಆಂತರಿಕ ಸಮಿತಿಗಳನ್ನು ರಚಿಸುವಂತೆ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚನೆ ನೀಡಿದೆ.

2019ರ ಜೂನ್ 30ರ ಒಳಗೆ ಎಲ್ಲ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿರುವ ಇಲಾಖೆ, ವಿಶೇಷ ನೇಮಕಾತಿ ಪ್ರಕ್ರಿಯೆ ಮೂಲಕ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಲಿದೆ.

ಅರಣ್ಯ ಇಲಾಖೆಯಲ್ಲಿ 3085 ಹುದ್ದೆಗಳ ಭರ್ತಿಗೆ ಒಪ್ಪಿಗೆ ಅರಣ್ಯ ಇಲಾಖೆಯಲ್ಲಿ 3085 ಹುದ್ದೆಗಳ ಭರ್ತಿಗೆ ಒಪ್ಪಿಗೆ

75 ಸಾವಿರ ಸರ್ಕಾರಿ ಹುದ್ದೆ

75 ಸಾವಿರ ಸರ್ಕಾರಿ ಹುದ್ದೆ

ವಿವಿಧ ಸಚಿವಾಲಯಗಳಲ್ಲಿ ಇರುವ ವಿವಿಧ ನೌಕರ ಸ್ಥಾನಗಳ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಮಾಹಿತಿ ದೊರಕಿದೆ. ಎಲ್ಲ ಮಾಹಿತಿಗಳೂ ದೊರಕಿದ ಬಳಿಕ ಅದು ಅಂತಿಮ ವರದಿ ಸಿದ್ಧಪಡಿಸಲಿದೆ. ಮುಂದಿ =ನ ಕೆಲವು ದಿನಗಳಲ್ಲಿ ಸುಮಾರು 75 ಸಾವಿರ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಲಿವೆ. ಪ್ರಮುಖ ನೇಮಕಾತಿ ಸಂಸ್ಥೆಗಳಲ್ಲಿ ಒಂದಾದ ಸ್ಟಾಫ್ ಸೆಲೆಕ್ಷನ್ ಕಮಿಷನ್‌ಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಮತ್ತು ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸುವ ಸಾಧ್ಯತೆ ಇದೆ.

ಬ್ಯಾಂಕುಗಳಿಗೆ ನೇಮಕಾತಿ

ಬ್ಯಾಂಕುಗಳಿಗೆ ನೇಮಕಾತಿ

ವಿವಿಧ ಸಾರ್ವಜನಿಕ ವಲಯದ ಘಟಕಗಳು ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸಾವಿರಾರು ಇತರೆ ಖಾಲಿ ಹುದ್ದೆಗಳಿವೆ. ಈ ವಲಯಗಳಗೂ ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಅತಿ ಮಹತ್ವದ ಮೂಲಸೌಕರ್ಯ ಯೋಜನೆಯಲ್ಲಿ ಹೆದ್ದಾರಿಗಳ ಉದ್ದವನ್ನು ಮುಂದಿನ ಐದು ವರ್ಷಗಳಲ್ಲಿ ಎರಡು ಲಕ್ಷಕ್ಕೆ ದ್ವಿಗುಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊರ ರಸ್ತೆಗಳ ನಿರ್ಮಾಣವಾಗಲಿದೆ, ಸ್ಮಾರ್ಟ್ ಸಿಟಿಗಳ ಸಂಖ್ಯೆ 100ನ್ನೂ ದಾಟಲಿದೆ. ವಿಳಂಬಗೊಂಡಿರುವ ಯೋಜನೆಗಳು ಚುರುಕುಪಡೆಯಲಿವೆ ಎಂದು ಹೇಳಿದ್ದಾರೆ.

ಕೊಪ್ಪಳ : ಅತಿಥಿ ಉಪನ್ಯಾಸಕ, ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನಕೊಪ್ಪಳ : ಅತಿಥಿ ಉಪನ್ಯಾಸಕ, ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಯಾವ ವರ್ಗದಲ್ಲಿ ಎಷ್ಟು ಹುದ್ದೆಗಳು?

ಯಾವ ವರ್ಗದಲ್ಲಿ ಎಷ್ಟು ಹುದ್ದೆಗಳು?

ದೇಶದೆಲ್ಲೆಡೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಮತ್ತು ಸಚಿವಾಲಯಗಳಲ್ಲಿ ಲಕ್ಷಕ್ಕೂ ಅಧಿಕ ಕೆಲಸಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದಂತೆ ಇತ್ತೀಚೆನ ಅಧಿಕೃತ ವರದಿ ಪ್ರಕಾರ, ಮಾರ್ಚ್ 1, 2016ರ ವೇಳೆಗೆ ಕೇಂದ್ರ ಸರ್ಕಾರದ ನಾಗರಿಕ ನೌಕರ ಹುದ್ದೆಗಳಲ್ಲಿ ಬಾಕಿ ಉಳಿದಿರುವ ಹುದ್ದೆಗಳು ಹೀಗಿವೆ. ಗ್ರೂಪ್ ಎ (15,284 ಹುದ್ದೆಗಳು), ಗ್ರೂಪ್ ಬಿ-ಗೆಜೆಟೆಡ್ (26,310), ಗ್ರೂಪ್ ಬಿ ನಾನ್ ಗೆಜೆಟೆಡ್ (49740) ಮತ್ತು ಗ್ರೂಪ್ ಸಿ- ನಾನ್ ಗೆಜೆಟೆಡ್ (321,418) ಹುದ್ದೆಗಳು ಖಾಲಿ ಇವೆ.

English summary
Narendra Modi led NDA government may start recruitment process for nearly government posts in various ministries and departments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X