• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ರಿಪೋರ್ಟ್ ಕಾರ್ಡ್ ಬಗ್ಗೆ ಅರುಣ್ ಜೇಟ್ಲಿ ಬರೆದಿರುವುದು ಏನು?

By ಅರುಣ್ ಜೇಟ್ಲಿ
|

ನರೇಂದ್ರ ಮೋದಿ ನೇತೃತ್ವದ ಸರಕಾರದ ಸಾಧನೆ ಹಾಗೂ ಶ್ರಮವರಿಯದೆ, ಹಗಲು-ಇರುಳೆನ್ನದೆ ದುಡಿಯುತ್ತಿರುವ ಮೋದಿ ಬಗ್ಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿರುವ ಪೋಸ್ಟ್ ನ ಕನ್ನಡ ಅನುವಾದ ಇಲ್ಲಿದೆ. -ಸಂಪಾದಕ

***

ಪ್ರಧಾನಿ ನರೇಂದ್ರ ಮೋದಿ ಕಳೆದ ಐದು ವರ್ಷಗಳಲ್ಲಿ ಆಲಸ್ಯ ಮಾಡದೆ, ಅಕ್ಷರಶಃ ಹಗಲಿರುಳು ಎನ್ನದೆ ದುಡಿದಿದ್ದಾರೆ. ಅವರು ಏನನ್ನಾದರೂ ತುಂಬ ಬೇಗ ಕಲಿಯುತ್ತಾರೆ ಎಂಬುದನ್ನು ಸಾಬೀತು ಕೂಡ ಮಾಡಿದ್ದಾರೆ. ವಿದೇಶಾಂಗ ನೀತಿಗಳನ್ನು ಅಳವಡಿಸಿದ್ದು, ಆರ್ಥಿಕ್ ಹಾಗೂ ವ್ಯೂಹಾತ್ಮಕ ವಿಚಾರಗಳು, ಅವರ ಸ್ಪಷ್ಟತೆ ಹಾಗೂ ದೃಢ ಸಂಕಲ್ಪದಿಂದಾಗಿ ಬಿಕ್ಕಟ್ಟಿನ ವಿಚಾರಗಳಲ್ಲೂ ಶೀಘ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿದೆ.

ನೀತಿ ನಿರೂಪಣೆ ವಿಷಯದಲ್ಲಿ ತಮ್ಮ ತಂಡ, ಸಚಿವರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಜತೆಗೆ ಮೋದಿ ಅವರು ಗಂಟೆಗಟ್ಟಲೆ ಕೂರುತ್ತಾರೆ. ಅವರ ಮಿತಿಗಳನ್ನು ಅವರೇ ಮೀರುವ ಸಲುವಾಗಿ ಗುರಿಗಳನ್ನು ನಿಗದಿ ಮಾಡುತ್ತಾರೆ. ಕೆಲಸಗಾರ ಮೋದಿ ಅವರ ವರ್ಚಸ್ಸನ್ನು ಭಾರತೀಯರು ಬಹುತೇಕರು ಗುರುತಿಸಿದ್ದಾರೆ.

ಮೋದಿಯನ್ನು ಆರಿಸಿ ಇಲ್ಲವೇ ಅರಾಜಕತೆ ಎದುರಿಸಿ: ಅರುಣ್ ಜೇಟ್ಲಿ

ಭಾರತವನ್ನು ವಿಶ್ವದಾದ್ಯಂತ ಗಮನಿಸುತ್ತಿರುವ ಜನರು ದೇಶದ ನಿರ್ಧಾರ ತೆಗೆದುಕೊಳ್ಳುವ ವೇಗವನ್ನು ಹಾಗೂ ಅದು ಅನುಷ್ಠಾನ ಆಗುವ ರೀತಿಯನ್ನು ಬೆರಗುಪಟ್ಟು ನೋಡುತ್ತಿದ್ದಾರೆ. ಆ ಕಾರಣದಿಂದಲೇ ಬಿಜೆಪಿಯಿಂದ ಮುಂದಿನ ಚುನಾವಣೆಗೆ ಆರಿಸಿಕೊಂಡ ಘೋಷಣೆ ಏನೆಂದರೆ, 'ಮೋದಿ ಹೈ ತೋ ಮುಮ್ಕಿನ್ ಹೈ" (ಮೋದಿ ಸಾಧ್ಯ ಮಾಡುತ್ತಾರೆ).

ಈ ದಿಕ್ಕಿನಲ್ಲಿ ಕೆಲವು ಮುಖ್ಯವಾದ ಮೈಲುಗಲ್ಲುಗಳನ್ನು ಒಟ್ಟು ಮಾಡಿ, ಈ ಕೆಳಗೆ ನೀಡಲಾಗಿದೆ:

* ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐದು ವರ್ಷಗಳ ಕಾಲ ಸತತವಾಗಿ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ್ಯ ಆರ್ಥಿಕತೆಯಾಗಿ ಭಾರತ ಗುರುತಿಸಿಕೊಂಡಿದೆ. -ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಸ್ಥಾನದಲ್ಲಿ ನಿಂತಿದೆ.

* ಕಳೆದ ಐದು ವರ್ಷದಲ್ಲಿ ನೇರ ತೆರಿಗೆ ಆಗಲಿ ಅಥವಾ ಪರೋಕ್ಷ ತೆರಿಗೆ ಆಗಲಿ ಏರಿಕೆ ಆಗಿಲ್ಲ. ಅದರ ಬದಲಿಗೆ ಇಳಿಕೆಯಾಗಿದೆ. ಐದು ಲಕ್ಷದವರೆಗಿನ ಆದಾಯ ಇರುವವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಸಿಕ್ಕಿದೆ. ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಕೌನ್ಸಿಲ್ ನ ಪ್ರತಿ ಬಾರಿಯ ಸಭೆಗೆ ಮುನ್ನ ಯಾವುದರ ತೆರಿಗೆ ಇಳಿಕೆ ಆಗಬಹುದು ಎಂದು ದೇಶದ ಜನ ನಿರೀಕ್ಷೆ ಮಾಡುತ್ತಾರೆ. ನಲವತ್ತು ಲಕ್ಷ ರುಪಾಯಿ ಒಳಗಿನ ಆರ್ಥಿಕ ವಹಿವಾಟು ಇರುವ ಸಣ್ಣ ವ್ಯಾಪಾರಿಗಳಿಗೆ ಜಿಎಸ್ ಟಿ ವಿನಾಯಿತಿ ಇದೆ. ಒಂದೂವರೆ ಕೋಟಿ ತನಕ ವಹಿವಾಟು ಇರುವವರು ಒಂದು ಪರ್ಸೆಂಟ್ ಜಿಎಸ್ ಟಿ ಪಾವತಿಸಬಹುದು. ಕೈಗೆಟುಕುವ್ ಮನೆಗೆ ಈಗ ಒಂದು ಪರ್ಸೆಂಟ್ ತೆರಿಗೆ. ತೆರಿಗೆ ಹೊರೆಯನ್ನು ಇಳಿಸುವ ಹೊತ್ತಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಗಿ, ಸಂಗ್ರಹದಲ್ಲಿ ಭಾರೀ ಏರಿಕೆ ಆಗಿದೆ.

ಕಾಶ್ಮೀರಿಗಳ ಮೇಲಾದ ಹಲ್ಲೆಯನ್ನು ಖಂಡಿಸಿದ ಅರುಣ್ ಜೇಟ್ಲಿ

* ಕಳೆದ ಇಪ್ಪತ್ತು ತಿಂಗಳಲ್ಲಿ ಜಿಎಸ್ ಟಿ ಜಾರಿ ತುಂಬ ಸಲೀಸಾಗಿ ಅನುಷ್ಠಾನ ಆಗುತ್ತಿದೆ. ಸಂವಿಧಾನ ತಿದ್ದುಪಡಿ, ತೆರಿಗೆ ಕಾನೂನು ಇದಕ್ಕೆ ಸಹಕಾರಿಯಾಗಿವೆ. ನಿಯಮಗಳು ಹಾಗೂ ದರಗಳನ್ನು ಸಂಸತ್ ನಲ್ಲಿ ಹಾಗೂ ಜಿಎಸ್ ಟಿ ಕೌನ್ಸಿಲ್ ನಲ್ಲಿ ಒಕ್ಕೊರಲಿನಿಂದ ನಿರ್ಧರಿಸಲಾಗಿದೆ. ಭಾರತವು ತೆರಿಗೆ ದರ ಇಳಿಸಬಹುದು ಹಾಗೂ ತೆರಿಗೆ ಸಂಗ್ರಹ ಹೆಚ್ಚಿಸಬಹುದು ಎಂದು ಯಾರೂ ಊಹಿಸಿರಲಿಕ್ಕಿಲ್ಲ.

* ಐದು ವರ್ಷದ ಹಿಂದೆ ದಿನಕ್ಕೆ ಏಳು ಕಿಲೋಮೀಟರ್ ಹೆದ್ದಾರಿ ನಿರ್ಮಾಣ ಆಗುತ್ತಿತ್ತು. ಈಗ ದಿನಕ್ಕೆ ಮೂವತ್ತು ಕಿಲೋಮೀಟರ್ ಆಗಿದೆ. ಅಂದರೆ ಒಂದು ವರ್ಷಕ್ಕೆ ಹತ್ತು ಸಾವಿರ ಕಿಲೋಮೀಟರ್. ಜಗತ್ತಿನಲ್ಲೇ ಅತಿ ದೊಡ್ಡ ಹೆದ್ದಾರಿ ಅಭಿವೃದ್ಧಿ ಮಾಡುತ್ತಿರುವ ದೇಶ ಭಾರತ.

* ಐದು ವರ್ಷಗಳ ಹಿಂದೆ ಶೇಕಡಾ ಮೂವತ್ತೆಂಟರಷ್ಟು ಗ್ರಾಮೀಣ ಭಾಗದ ಮನೆಗಳು ಒಳಚರಂಡಿ ಸಂಪರ್ಕ ಹೊಂದಿದ್ದವು. ಆದರೆ ಈಗ ಶೇಕಡಾ ತೊಂಬತ್ತೊಂಬತ್ತರಷ್ಟು ಮನೆಗಳು ಒಳಚರಂಡಿ ಸಂಪರ್ಕ ಹೊಂದಿವೆ.

* ಹಳ್ಳಿ ರಸ್ತೆಗಳ ಸಂಪರ್ಕ ಇರುವ ಶೇಕಡಾ ತೊಂಬತ್ತೊಂದರಷ್ಟು ಹಳ್ಳಿಗಳಿವೆ. ಹಳ್ಳಿ ರಸ್ತೆಗಳಿಗಾಗಿ ಮಾಡುವ ವೆಚ್ಚ ಮೂರು ಪಟ್ಟು ಹೆಚ್ಚಳವಾಗಿದೆ.

ಪಾಕಿಸ್ತಾನದ ಬೆಂಬಲಕ್ಕೆ ನಿಂತಿವೇ ವಿಪಕ್ಷಗಳು? ಬಿಜೆಪಿ ಲೇವಡಿ

* ಐವತ್ತು ಕೋಟಿ ಮಂದಿ ದೇಶದ ಬಡವರಿಗೆ ಒಂದು ಕುಟುಂಬಕ್ಕೆ ವರ್ಷಕ್ಕೆ ಐದು ಲಕ್ಷದಂತೆ ಆಸ್ಪತ್ರೆ ಖರ್ಚನ್ನು ಭರಿಸಲು ಆಯುಷ್ಮಾನ್ ಭಾರತ್ ಯೋಜನೆ ತರಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಈ ತನಕ ಹದಿನೈದು ಲಕ್ಷಕ್ಕೂ ಹೆಚ್ಚು ಮಂದಿ ಯಾವುದೇ ನಗದು ಪಾವತಿಸದೆ ಚಿಕಿತ್ಸೆ ಪಡೆದಿದ್ದಾರೆ.

* ಎಂಟು ಕೋಟಿ ಬಿಪಿಎಲ್ ಕಾರ್ಡ್ ದಾರರಿಗೆ ಪುಕ್ಕಟೆ ಅಡುಗೆ ಅನಿಲ ಸಿಲಿಂಡರ್ ಹಾಗೂ ಸ್ಟೌ ಒದಗಿಸಲಾಗಿದೆ.

* ಭಾರತದಲ್ಲಿ ಶೇಕಡಾ ನೂರರಷ್ಟು ವಿದ್ಯುದ್ದೀಕರಣ ಆಗಿದೆ.

* ಪ್ರತಿ ಮನೆಯಲ್ಲೂ ಬ್ಯಾಂಕ್ ಖಾತೆ ತೆರೆಯಬೇಕು ಎಂಬ ಕಾರಣದಿಂದ ಶುರುವಾದ ಪ್ರಧಾನಮಂತ್ರಿ ಜನ್ ಧನ್ ಯೋಜನೆ ಅಡಿ ಮೂವತ್ತೈದು ಕೋಟಿಗೂ ಹೆಚ್ಚು ಖಾತೆ ತೆರೆಯಲಾಗಿದೆ. ಇದು ಜಗತ್ತಿನಲ್ಲೇ ಅತಿ ದೊಡ್ಡ ಆರ್ಥಿಕ ಒಳಗೊಳ್ಳುವಿಕೆ ಯೋಜನೆ.

* ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿ ಸ್ವ ಉದ್ಯೋಗ ಪ್ರೋತ್ಸಾಹಕ್ಕಾಗಿ ಮತ್ತು ಉದ್ಯೋಗ ಸೃಷ್ಟಿಗಾಗಿ ಹದಿನಾರು ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ. ಅದರಲ್ಲಿ ಐವತ್ನಾಲ್ಕರಷ್ಟು ಮಂದಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು. ಶೇಕಡಾ ಎಪ್ಪತ್ತೆರಡರಷ್ಟು ಮಹಿಳೆಯರು.

'ಪಾಕ್ ನಲ್ಲಿದ್ದ ಲಾಡೆನ್ ನನ್ನು ಅಮೆರಿಕ ಹೊಡೆದಂತೆ ನಾವ್ಯಾಕೆ ದಾಳಿ ಮಾಡಬಾರದು?'

* ವಾಣಿಜ್ಯ ವಿಮಾನಗಳ ಕಾರ್ಯ ಚಟುವಟಿಕೆಗಳಿಗೆ ಐದು ವರ್ಷದ ಹಿಂದ ಅರವತ್ತೈದು ಕಾರ್ಯನಿರತ ವಿಮಾನ ನಿಲ್ದಾಣಗಳು ಇದ್ದವು. ಈಗ ಆ ಸಂಖ್ಯೆ ನೂರಾ ಒಂದು ಆಗಿದೆ. ಸದ್ಯದಲ್ಲಿ ಇನ್ನೂ ಐವತ್ತು ಹೆಚ್ಚಾಗುವ ಸಾಧ್ಯತೆ ಇದೆ.

* ನೂರಾ ಅರವತ್ತು ಕಿ.ಮೀ. ವೇಗದಲ್ಲಿ ಸಂಚರಿಸುವ ಸೂಪರ್ ಫಾಸ್ಟ್ ರೈಲಿನ ಯುಗದಲ್ಲಿ ನಾವೀಗ ಇದ್ದೇವೆ. ಮತ್ತು ಲೋಕೋಮೋಟಿವ್ ಗಳು ದೇಶೀಯವಾಗಿ ನಿರ್ಮಾಣ ಆಗುತ್ತಿವೆ. ಅತಿ ಶೀಘ್ರದಲ್ಲಿ ಬುಲೆಟ್ ರೈಲು ಸಾಕಾರ ಆಗಲಿದೆ. ರೈಲಿನಲ್ಲಿ ಪ್ರಯಾಣಿಕರಿಗೆ ದೊರೆಯುವ ಸೌಕರ್ಯದ ಗುಣಮಟ್ಟದಲ್ಲೂ ಗಣನೀಯವಾಗಿ ಹೆಚ್ಚಳವಾಗಿದೆ.

* ರೈತರು ಬೆಳೆದ ಇಪ್ಪತ್ತೆರಡು ಬೆಲೆಗೆ ಕನಿಷ್ಠ ಬೆಂಬಲ ಬೆಲೆ ವೆಚ್ಚ ಪ್ಲಸ್ ಐವತ್ತು ಪರ್ಸೆಂಟ್ ಇದೆ. ಇದರ ಹೊರತಾಗಿ ಸಬ್ಸಿಡಿಸಹಿತ ಬೆಳೆ ವಿಮೆ ಯೋಜನೆ, ಹನ್ನೆರಡು ಕೊಟಿ ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕ ಆರು ಸಾವಿರ ರುಪಾಯಿಯನ್ನು ಆದಾಯ ಬೆಂಬಲವಾಗಿ ನೀಡಲಾಗುತ್ತಿದೆ. ಈ ತನಕ ಎರಡೂ ಮುಕ್ಕಾಲು ಕೋಟಿ ರೈತರಿಗೆ ಮೊದಲ ಕಂತಿನ ಹಣ ತಲುಪಿದೆ.

* ರೈತರಿಗೆ ಆದಾಯ ಬೆಂಬಲವಾಗಿ ಎಪ್ಪತ್ತೈದು ಸಾವಿರ ಕೋಟಿ ನೀಡುವ ಜತೆಗೆ ನರೇಗಾಕ್ಕಾಗಿ ಅರವತ್ತು ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಇದರಿಂದ ಗ್ರಾಮೀಣ ಆರ್ಥಿಕತೆಯಲ್ಲಿ ಚೈತನ್ಯ ತುಂಬುತ್ತದೆ.

* ಅಗ್ಗದ ಹಾಗೂ ಸಬ್ಸಿಡಿ ಆಹಾರ ಪದಾರ್ಥವನ್ನು ನೀಡಲು ಒಂದು ಲಕ್ಷದ ಎಂಬತ್ತು ಸಾವಿರ ಕೋಟಿ ಒದಗಿಸಲಾಗುತ್ತಿದೆ. ಇದರಿಂದ ಯಾವ ಭಾರತೀಯ ಉಪವಾಸ ಮಲಗುವುದಿಲ್ಲ.

* ಇನ್ನು ಮೂರು ವರ್ಷಗಳಲ್ಲಿ ಗ್ರಾಮೀಣ ಭಾರತದ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವವರು) ಕುಟುಂಬಗಳಿಗೆ ಮನೆ ಒದಗಿಸುವ ಗುರಿ ಇದೆ. ಪ್ರತಿ ವರ್ಷ ಐವತ್ತು ಲಕ್ಷ ಮನೆ ನಿರ್ಮಾಣ ಮಾಡಲಾಗುವುದು.

* ಯುಪಿಎ ಸರಕಾರ ಇದ್ದ ಅವಧಿಯಲ್ಲಿ ಹಣದುಬ್ಬರ ದರ ಹತ್ತು ಪರ್ಸೆಂಟ್ ಗೂ ಹೆಚ್ಚಿತ್ತು. ಈಗ ಅದು ಎರಡೂವರೆ ಪರ್ಸೆಂಟ್ ಆಗಿದೆ.

* ಇದೇ ಮೊದಲ ಬಾರಿಗೆ ಇತಿಹಾಸದಲ್ಲಿ ಮೀಸಲಾತಿಯಿಂದ ಹೊರಗುಳಿದ- ಆರ್ಥಿಕವಾಗಿ ಹಿಂದುಳಿದವರಿಗೆ ಸರಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ ಹತ್ತರಷ್ಟು ಮೀಸಲಾತಿ ಜಾರಿಗೆ ತರಲಾಗಿದೆ.

* ಭಾರತವು ಎರಡು ಸಂದರ್ಭಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ, ತನ್ನ ನೆಲದಲ್ಲಿ ಮಾತ್ರವಲ್ಲ ಅದರ ನೆಲೆಯ ಮೇಲೆ ದಾಳಿ ಮಾಡಲು ಸಿದ್ಧ ಎಂಬುದನ್ನು ತೋರಿಸಿದೆ.

ಈ ಮೇಲಿನ ಸಂಗತಿಗಳು ಕೆಲ ಉದಾಹರಣೆಗಳು ಅಷ್ಟೇ. ಯಾವುದಾದರೂ ಸರಕಾರ ಇವುಗಳನ್ನು ಮಾಡಿತ್ತಾ? ಅದೇ ಸರಕಾರಿ ಯಂತ್ರ, ಅದೇ ರಾಜಕೀಯ ವ್ಯವಸ್ಥೆ, ಅದೇ ಸರಕಾರಿ ಅನುಷ್ಠಾನ ವ್ಯವಸ್ಥೆ ಇತ್ತು. ಸ್ಫೂರ್ತಿ ಹಾಗೂ ನಾಯಕತ್ವದ ಮೂಲಕ ಬದಲಾವಣೆ ತರಬೇಕು. ಈ ಎಲ್ಲ ಕಾರಣದಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ಮೋದಿ ನಾಯಕತ್ವ, ನಿರ್ಣಯ, ಸಮಗ್ರತೆ ಹಾಗೂ ಸಾಧನೆಯನ್ನು ಪುಷ್ಟೀಕರಿಸಲು ಅವಕಾಶ ಸಿಕ್ಕಿದೆ. ಜತೆಗೆ ಅವರು ಸಾಧ್ಯ ಮಾಡುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Elections 2019: Union finance minister Arun Jaitley presented Narendra Modi led NDA government report card in his face book post. Here is an Kannada translation of content.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more