ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ನರೇಂದ್ರ ಮೋದಿ

|
Google Oneindia Kannada News

Recommended Video

ರಾಷ್ಟ್ರಪತಿ ಬಳಿ ರಾಜೀನಾಮೆ ಸಲ್ಲಿಸಿದ ನರೇಂದ್ರ ಮೋದಿ | Oneindia Kannada

ನವದೆಹಲಿ, ಮೇ 24: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರನ್ನು ಭೇಟಿಯಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸಿರುವ ಅವರು ಮತ್ತೆ ಪ್ರಧಾನಿ ಆಗಲಿದ್ದಾರೆ. ಅದರ ಪ್ರಮಾಣ ವಚನ ಮೇ 29 ರಂದು ನಡೆಯುವ ಸಾಧ್ಯತೆ ಇದೆ.

ಪ್ರಸ್ತುತ 16ನೇ ಲೋಕಸಭೆ ನಡೆಯುತ್ತಿದ್ದು, 16ನೇ ಲೋಕಸಭೆಯ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಮೋದಿ ಕ್ಯಾಬಿನೆಟ್‌ನ ಮಂತ್ರಿಗಳೂ ರಾಜೀನಾಮೆಯನ್ನೂ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.

ಇಬ್ಬರೇ ಸಂಸದರಿಂದ 303 ಸಂಸದರವರೆಗೆ ಬಿಜೆಪಿ ಬೆಳವಣಿಗೆಯ ರೋಚಕ ಕತೆ ಇಬ್ಬರೇ ಸಂಸದರಿಂದ 303 ಸಂಸದರವರೆಗೆ ಬಿಜೆಪಿ ಬೆಳವಣಿಗೆಯ ರೋಚಕ ಕತೆ

ಹೊಸ ಪ್ರಧಾನಮಂತ್ರಿ ಅವರು ಪ್ರಮಾಣವಚನ ಸ್ವೀಕರಿಸಿದ ಕೂಡಲೇ 17ನೇ ಲೋಕಸಭೆ ಪ್ರಾರಂಭವಾಗುತ್ತದೆ. ಆ ನಂತರ ಕ್ಯಾಬಿನೆಟ್ ರಚನೆ, ಅಧಿವೇಶನ, ಬಹುಮತ ಸಾಬೀತುಗಳು ಯತಾ ಪ್ರಕಾರ ನಡೆಯುತ್ತವೆ.

ಮೋದಿ ರಾಜೀನಾಮೆ ಸ್ವೀಕರಿಸಿದ ರಾಷ್ಟ್ರಪತಿ

ಮೋದಿ ರಾಜೀನಾಮೆ ಸ್ವೀಕರಿಸಿದ ರಾಷ್ಟ್ರಪತಿ

ಮೋದಿ ಹಾಗೂ ಮಂತ್ರಿಗಳ ರಾಜೀನಾಮೆ ಸ್ವೀಕರಿಸಿದ ರಾಷ್ಟ್ರಪತಿಗಳು, 17ನೇ ಲೋಕಸಭೆ ರಚನೆ ಆಗುವವರೆಗೂ ಪ್ರಧಾನಿಗಳಾಗಿ ಮುಂದುವರಿಯಿರೆಂದು ಮನವಿ ಮಾಡಿದರು, ಮಂತ್ರಿಗಳಿಗೂ ಮನವಿ ಮಾಡಿದರು.

ಕೋಟಿ ಕೋಟಿ 'ಅಭಿನಂದನ್' ಎಂದ ಮೋದಿ, ಪಾಕಿಸ್ತಾನಕ್ಕೆ ನಡುಕ! ಕೋಟಿ ಕೋಟಿ 'ಅಭಿನಂದನ್' ಎಂದ ಮೋದಿ, ಪಾಕಿಸ್ತಾನಕ್ಕೆ ನಡುಕ!

ಪ್ರಧಾನಿ ಪ್ರಮಾಣವಚನದ ಜೊತೆ ಹೊಸ ಲೋಕಸಭೆ ಪ್ರಾರಂಭ

ಪ್ರಧಾನಿ ಪ್ರಮಾಣವಚನದ ಜೊತೆ ಹೊಸ ಲೋಕಸಭೆ ಪ್ರಾರಂಭ

ಮೋದಿ ಹಾಗೂ ಇತರ ಸಚಿವರು ರಾಜೀನಾಮೆ ಸಲ್ಲಿಸಿದರೂ ಸಹ ರಾಷ್ಟ್ರಪತಿಗಳ ಮನವಿಯಂತೆ ಅವರು ಅದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಮೇ 29ರಂದು ಹೊಸ ಲೋಕಸಭೆ ರಚನೆ ಆದ ಬಳಿಕ ಹೊಸ ಕ್ಯಾಬಿನೆಟ್ ರಚನೆ ಆಗಿ ಹೊಸ ಮಂತ್ರಿಗಳು ಬರುತ್ತಾರೆ.

ಬಿಜೆಪಿ ಲೋಕ ದಿಗ್ವಿಜಯದ ಹಿಂದೆ ಅಮಿತ್ ಶಾ ಕುಸುರಿಗಾರಿಕೆ ಬಿಜೆಪಿ ಲೋಕ ದಿಗ್ವಿಜಯದ ಹಿಂದೆ ಅಮಿತ್ ಶಾ ಕುಸುರಿಗಾರಿಕೆ

ಮೇ 29ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ

ಮೇ 29ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ

ನರೇಂದ್ರ ಮೋದಿ ಅವರು ಐದು ವರ್ಷದ ಹಿಂದೆ ಮೇ 26 ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬಾರಿಯೂ ಸಹ ಅಂದೇ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನಲಾಗಿತ್ತು. ಆದರೆ ಮೇ 29 ರಂದು ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಈ ಬಾರಿಯದ್ದು 17ನೇ ಲೋಕಸಭೆ

ಈ ಬಾರಿಯದ್ದು 17ನೇ ಲೋಕಸಭೆ

ಈವರೆಗೂ 16 ಲೋಕಸಭೆ ರಚನೆ ಆಗಿವೆ. ಈ ಬಾರಿಯದ್ದು 17 ನೇ ಲೋಕಸಭೆ ಆಗಿದ್ದು ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸಿರುವ ಎನ್‌ಡಿಎ ಆಡಳಿತ ಪಕ್ಷವಾಗಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ವಿರೋಧ ಪಕ್ಷಗಳ ಸಾಲಿನಲ್ಲಿವೆ. ಎನ್‌ಡಿಎಗೆ ಅತಿ ಹೆಚ್ಚಿನ ಸ್ಥಾನ ಬಂದಿರುವ ಕಾರಣ ಈ ಬಾರಿ ಅಧಿಕೃತ ವಿರೋಧ ಪಕ್ಷ ಎಂಬುದು ಇಲ್ಲದಾಗಿದೆ.

English summary
PM Narendra Modi met the President today and tendered his resignation along with the Council of Ministers. The President has accepted the resignation and has requested Narendra Modi and the Council of Ministers to continue till the new Government assumes office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X