ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋಕಸ್ ಕಾಶ್ಮೀರ: ಮೋದಿ ಭಾಷಣದ ಪೂರ್ಣ ಪಾಠ

|
Google Oneindia Kannada News

ನವದೆಹಲಿ, ಆಗಸ್ಟ್ 08: ಬಹುನಿರೀಕ್ಷೆ ಹುಟ್ಟಿಸಿದ್ದ ನರೇಂದ್ರ ಮೋದಿ ಅವರು ಭಾಷಣ ಇದೀಗಷ್ಟೆ ಮುಗಿದಿದ್ದು, ನರೇಂದ್ರ ಮೋದಿ ಅವರು ನಿರೀಕ್ಷೆಯಂತೆಯೇ ಜಮ್ಮು ಕಾಶ್ಮೀರದ ವಿಷಯವಾಗಿ ಮಾತನಾಡಿದ್ದಾರೆ. ಮೋದಿ ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ.

ಜಮ್ಮು ಕಾಶ್ಮೀರವು ಭಾರತದ ದೇಶದ ಭಾಗವಾಗಬೇಕೆಂಬ ಸರ್ದಾರ್ ವಲ್ಲಭಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್, ಶ್ಯಾಂ ಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್ಲ ದೇಶಭಕ್ತರ ಕನಸು ನನಸಾಗಿದೆ ಎಂದು ಮೋದಿ ತಮ್ಮ ಭಾಷಣವನ್ನು ಆರಂಭಿಸಿದರು.

PM Modi Speech Today LIVE: ಜಮ್ಮು ಕಾಶ್ಮೀರ ತಾತ್ಕಾಲಿಕ ಕೇಂದ್ರಾಡಳಿತ ಪ್ರದೇಶ: ಮೋದಿPM Modi Speech Today LIVE: ಜಮ್ಮು ಕಾಶ್ಮೀರ ತಾತ್ಕಾಲಿಕ ಕೇಂದ್ರಾಡಳಿತ ಪ್ರದೇಶ: ಮೋದಿ

ಕೆಲವು ವಿಷಯಗಳು ಬದಲಾವಣೆ ಆಗುವುದೇ ಇಲ್ಲ ಎಂಬ ಭಾವ ಜನರಿಗೆ ಬಂದುಬಿಟ್ಟಿರುತ್ತದೆ, ಆರ್ಟಿಕಲ್ 370 ಬಗ್ಗೆಯೂ ಅದೇ ಧೊರಣೆ ಇತ್ತು. ಜಮ್ಮು ಕಾಶ್ಮೀರ ರಾಜ್ಯದ ಜನರ ಹಕ್ಕು, ಸ್ವಾತಂತ್ರ್ಯ, ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆಯೇ ಆಗುತ್ತಿರಲಿಲ್ಲ ಎಂದು ಮೋದಿ ಹೇಳಿದರು.

Narendra Modi Full Speech On Jammu Kashmir

ಆರ್ಟಿಕಲ್ 370 ಯು ಕಣಿವೆ ರಾಜ್ಯದ ಜನರಿಗೆ ಭ್ರಷ್ಟಾಚಾರ ಬಿಟ್ಟರೆ ಇನ್ನೇನೂ ಕೊಡಲಿಲ್ಲ. ಈ ಕಾಯ್ದೆಯನ್ನು ಪಾಕಿಸ್ತಾನವು ತನ್ನ ಪರವಾಗಿ ಬಳಸಿಕೊಂಡು ಜಮ್ಮು ಕಾಶ್ಮೀರದ ಕೆಲವು ಭಾಗಗಳಲ್ಲಿ ಅರಾಜಕತೆ ಸೃಷ್ಠಿಸುವ ಪ್ರಯತ್ನ ಮಾಡಿತ್ತು. 40,000 ಜನರು ಕೆಲವೇ ವರ್ಷಗಳಲ್ಲಿ ಪ್ರಾಣ ಕಳೆದುಕೊಳ್ಳುವಂತಾಗಿತ್ತು ಇದು ಎಂತವರಿಗೂ ಕಣ್ಣೀರು ತರಿಸುವ ವಿಷಯ ಎಂದು ಮೋದಿ ಭಾವುಕರಾಗಿ ನುಡಿದರು.

ದೇಶದ ಒಳಿತಾಗಿ, ಅಭಿವೃದ್ಧಿಗಾಗಿ ಸಂಸತ್ತು ಎಷ್ಟೋಂದು ಕಾನೂನು ಮಾಡುತ್ತದೆ. ಆದರೆ ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ಕಾಯ್ದೆ ಮಾಡಿದ ಪಕ್ಷದವರ ಸರ್ಕಾರ ಮಾಡಿದ ಕಾನೂನುಗಳೇ ಆ ರಾಜ್ಯದಲ್ಲಿ ಚಾಲನೆಗೆ ಬಂದಿರಲಿಲ್ಲ ಎಂದು ಕಾಂಗ್ರೆಸ್‌ ಅನ್ನು ಚುಚ್ಚಿದರು.

ಇದು ದೇಶವಾಸಿಗಳಿಗಿಂತ ಕಣಿವೆ ಮಂದಿಯನ್ನೇ ಟಾರ್ಗೆಟ್ ಮಾಡಿದ ಭಾಷಣ ಇದು ದೇಶವಾಸಿಗಳಿಗಿಂತ ಕಣಿವೆ ಮಂದಿಯನ್ನೇ ಟಾರ್ಗೆಟ್ ಮಾಡಿದ ಭಾಷಣ

ದೇಶದ ಎಲ್ಲ ಮಕ್ಕಳಿಗೂ ಶಿಕ್ಷಣದ ಹಕ್ಕು ಇದೆ, ಆದರೆ ಜಮ್ಮು ಕಾಶ್ಮೀರದಲ್ಲಿ ಇಲ್ಲ. ಇತರೆ ರಾಜ್ಯಗಳಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಹಕ್ಕುಗಳಿವೆ ಆದರೆ ಜಮ್ಮು ಕಾಶ್ಮೀರದಲ್ಲಿ ಇಲ್ಲ. ದೇಶದ ಬೇರೆ ರಾಜ್ಯಗಳಲ್ಲಿ ದಲಿತರ ರಕ್ಷಣೆಗೆ ಕಾನೂನು ಇದೆ, ಆದರೆ ಜಮ್ಮು ಕಾಶ್ಮೀರದಲ್ಲಿ ಇರಲಿಲ್ಲ. ಅಲ್ಪಸಂಖ್ಯಾತರ ರಕ್ಷಣೆಗಾಗಿ ಕಾನೂನು ಎಲ್ಲ ರಾಜ್ಯಗಳಲ್ಲಿ ಆದರೆ ಕಾಶ್ಮೀರದಲ್ಲಿ ಇಲ್ಲ. ಬೇರೆ ರಾಜ್ಯಗಳಲ್ಲಿ ಕಾರ್ಮಿಕರ ರಕ್ಷಣೆಗೆ ಕಾನೂನು ಇತ್ತು ಆದರೆ ಜಮ್ಮು ಕಾಶ್ಮೀರದಲ್ಲಿ ಅದಿರಲಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲು ದಲಿತರಿಗೆ ಮೀಸಲಾತಿ ಇತ್ತು, ಆದರೆ ಜಮ್ಮು ಕಾಶ್ಮೀರದಲ್ಲಿ ಅದಿರಲಿಲ್ಲ ಎಂದು ಮೋದಿ ಕಾಶ್ಮೀರದ ಜನ ಎಷ್ಟು ಹಕ್ಕುಗಳಿಂದ ವಂಚಿತರಾಗಿದ್ದರು ಎಂದು ಪಟ್ಟಿ ನೀಡಿದರು.

ಪಂಚಾಯಿತಿ, ನಗರ ಸಭೆ, ಪುರಸಭೆ ಇನ್ನಾವುದೇ ಚುನಾವಣೆಯಲ್ಲಿ ಜಮ್ಮು ಕಾಶ್ಮೀರದ ಮತ ಹಾಕುವಂತಿರಲಿಲ್ಲ, ಈ ಅನ್ಯಾಯವನ್ನು ನಾವು ಕೊನೆಗಾಣಿಸಿದ್ದೇವೆ ಎಂದ ಮೋದಿ, ಲಡಾಕ್‌ ಅನ್ನು ಕೇಂದ್ರಾಡಳಿತವಾಗಿ ಹಾಗೆಯೇ ಉಳಿಸಿಕೊಳ್ಳುತ್ತೇವೆ, ಆದರೆ ಜಮ್ಮು ಕಾಶ್ಮೀರ ಮತ್ತೆ ರಾಜ್ಯವಾಗುತ್ತದೆ ಎಂದು ಮೋದಿ ಹೇಳಿದರು.

ಬದಲಾದ ಸನ್ನಿವೇಶದಲ್ಲಿ, ದೇಶದ ಬೇರೆ ಕೇಂದ್ರಾಡಳಿತ ಪ್ರದೇಶಗಳಿಗೆ ಏನೇನು ಸವಲತ್ತುಗಳು ನೀಡಲಾಗುತ್ತಿದೆಯೋ ಅವೆಲ್ಲವನ್ನೂ ಜಮ್ಮು ಕಾಶ್ಮೀರಕ್ಕೆ ಮತ್ತು ಲಡಾಕ್‌ಗೆ ನೀಡಲಾಗುತ್ತದೆ ಬೇರೆ ಕೇಂದ್ರಾಡಳಿತದಲ್ಲಿ ಪೊಲೀಸರಿಗೆ ಅವರ ಕುಟುಂಬಕ್ಕೆ ಏನು ಸೌಲಭ್ಯಗಳು ದೊರೆಯುತ್ತವೆಯೋ ಅವನ್ನು ಜಮ್ಮು ಕಾಶ್ಮೀರದ ಪೊಲೀಸರಿಗೆ ಅವರ ಕುಟುಂಬಗಳಿಗೆ ನೀಡಲಾಗುತ್ತದೆ ಮೋದಿ ಭರವಸೆ ನೀಡಿದರು.

ಕಾಶ್ಮೀರದ ಕೇಸರಿ, ಕಾಫಿ, ಶಾಲನ್ನು ನೆನೆದ ಪ್ರಧಾನಿ ನರೇಂದ್ರ ಮೋದಿಕಾಶ್ಮೀರದ ಕೇಸರಿ, ಕಾಫಿ, ಶಾಲನ್ನು ನೆನೆದ ಪ್ರಧಾನಿ ನರೇಂದ್ರ ಮೋದಿ

ಜಮ್ಮು ಕಾಶ್ಮೀರದ ಯುವಕರಿಗೆ ಉದ್ಯೋಗ ಕೊಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶಿಕ್ಷಣಕ್ಕೆ ಒತ್ತು ನೀಡಲು ಸ್ಕಾಲರ್‌ಶಿಪ್ ಯೋಜನೆ ನೀಡಲಾಗುತ್ತದೆ ಎಂದ ಮೋದಿ, ರಾಜಸ್ವದ ಕೊರತೆ ಜಮ್ಮು ಕಾಶ್ಮೀರದಲ್ಲಿ ಹೆಚ್ಚಿದೆ, ಆದರೆ ಕೇಂದ್ರವು ಅದನ್ನು ನಿವಾರಿಸುತ್ತದೆ. ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿ ಪ್ರದೇಶವನ್ನಾಗಿ ಮಾಡುವ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳಲಾಗಿದೆ ಮೋದಿ ಹೇಳಿದರು.

ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಪ್ರಾರಂಭವಾದಾಗಿನಿಂದಲೂ ಅಲ್ಲಿ ಒಳ್ಳೆಯ ಆಡಳಿತ ಕಂಡುಬಂದಿದೆ. ಯಾವ ಕಾರ್ಯಕ್ರಮ ಕೇವಲ ಕಾಗದದಲ್ಲಿತ್ತೊ ಅದು ಕಾರ್ಯಗತವಾಗಿತ್ತು ಎಂದು ರಾಜ್ಯಪಾಲರ ಆಡಳಿತವನ್ನು ಹೊಗಳಿದ ಮೋದಿ. ಕೆಲವೇ ದಿನಗಳಲ್ಲಿ ಜಮ್ಮು ಕಾಶ್ಮೀರದ ಜನಪ್ರತಿನಿಧಿಯನ್ನು ಅಲ್ಲಿನ ಜನರೇ ಚುನಾಯಿಸುತ್ತಾರೆ. ಹೇಗೆ ಮುಂಚೆ ವಿಧಾನಮಂಡಲ ಇತ್ತೋ ಹಾಗೆಯೇ ಮುಂದೆಯೂ ಇರುತ್ತದೆ, ಆದರೆ ಕೆಟ್ಟ ಆಡಳಿತದಿಂದ ಜಮ್ಮು ಕಾಶ್ಮೀರದ ಜನರನ್ನು ಮುಕ್ತಗೊಳಿಸುತ್ತೇವೆ ಎಂದು ಮೋದಿ ಅವರು ಕೆಲವು ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಯುತ್ತದೆ ಎಂದು ಹೇಳಿದರು.

ಜಮ್ಮು ಕಾಶ್ಮೀರವು ಪೂರ್ತಿ ವಿಶ್ವವನ್ನು ಆಕರ್ಷಿತಗೊಳಿಸುವಂತೆ ಆಗುತ್ತದೆ. ಜನರ ಜೀವನ ಸುಲಭವಾಗುತ್ತದೆ. ಕೆಲವೇ ದಿನಗಳಲ್ಲಿ ಪೂರ್ಣ ಪಾರದರ್ಶಕ ವ್ಯವಸ್ಥೆಯಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದ ಮೋದಿ, ಜಮ್ಮು ಕಾಶ್ಮೀರ, ಲಡಾಕ್ ಪಂಚಾಯಿತಿ ಚುನಾವಣೆಗಳಲ್ಲಿ ಆಯ್ಕೆ ಆಗಿ ಬಂದಿರುವ ಜನಪ್ರತಿನಿಧಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಅವರೊಂದಿಗೆ ಕೆಲ ತಿಂಗಳ ಮುಂಚೆಯಷ್ಟೆ ನಾನು ಮಾತುಕತೆ ಮಾಡಿದ್ದೇನೆ ಎಂದು ಮೋದಿ ಅವರು ಹೊಗಳಿದರು.

ದಶಕಗಳ ಪರಿವಾರ ರಾಜಕಾರಣ ಜಮ್ಮು ಕಾಶ್ಮೀರದ ಯುವಕರಿಗೆ ನಾಯಕತ್ವದ ಅವಕಾಶವನ್ನೇ ಕೊಟ್ಟಿಲ್ಲ, ಆದರೆ ಇನ್ನು ಮುಂದೆ ಅಲ್ಲಿನ ಯುವಕರು ನೇತೃತ್ವವನ್ನು ವಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಣಿವೆ ರಾಜ್ಯದ ಮುಂದಾಳತ್ವವನ್ನು ಅಲ್ಲಿನ ಯುವಕರೇ ವಹಿಸಿಕೊಳ್ಳುತ್ತಾರೆ ತಮ್ಮ ರಾಜ್ಯದ ಅಭಿವೃದ್ಧಿಯನ್ನು ಅವರೇ ಮಾಡುತ್ತಾರೆ ಎಂದು ಮೋದಿ ಹೇಳಿದರು.

ಕೆಲವು ದಶಕಗಳ ಹಿಂದೆ ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಕಾಶ್ಮೀರ ಮೆಚ್ಚಿನ ಸ್ಥಳವಾಗಿತ್ತು ಆದರೆ ನಂತರ ಪರಿಸ್ಥಿತಿ ಬದಲಾಗಿತ್ತು. ಇನ್ನು ಮುಂದೆ ವಿಶ್ವದ ಸಿನಿಮಾ ತಂತ್ರಜ್ಞರು ಜಮ್ಮು ಕಾಶ್ಮೀರಕ್ಕೆ ಬರುತ್ತಾರೆ. ಅದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ. ಬಾಲಿವುಡ್, ತೆಲುಗು, ತಮಿಳು ಸಿನಿಮಾ ಉದ್ಯಮದವರು ಕಾಶ್ಮೀರಕ್ಕೆ ಬರಲೆಂದು ನಾನು ಮನವಿ ಮಾಡುತ್ತೇನೆ ಎಂದು ಮೋದಿ ಹೇಳಿದರು.

ಸಂಸತ್ತಿನಲ್ಲಿ ಆರ್ಟಿಕಲ್ 370 ರದ್ದತಿ ವಿಧೇಯಕ್ಕೆ ಯಾರು ಮತ ಹಾಕಿದರು, ಯಾರು ಹಾಕಲಿಲ್ಲ, ಇದನ್ನೆಲ್ಲಾ ಬಿಟ್ಟು ಮುಂದೆ ಹೋಗಬೇಕಿದೆ. ಜಮ್ಮು ಕಾಶ್ಮೀರದ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕಿದೆ ಎಂದ ಮೋದಿ, ಆತಂಕವಾದಕ್ಕೆ ಬೆಂಬಲ ನೀಡುವ ಪಾಕಿಸ್ತಾನದ ಕುತಂತ್ರಕ್ಕೆ ಕಣಿವೆ ರಾಜ್ಯದ ಜನರು ದಿಟ್ಟ ಉತ್ತರ ನೀಡುತ್ತಿದ್ದಾರೆ. ದೇಶದ ಉಳಿದ ರಾಜ್ಯಗಳಂತೆ ಅವರಿಗೆ ಸ್ವತಂತ್ರ್ಯವಾಗಿ ಅಭಿವೃದ್ಧಿ ಪೂರ್ವಕವಾಗಿ ಬದುಕುವ ಹಕ್ಕು ಅವರಿಗೆ ಇದೆ ಎಂದರು.

ಕಣಿವೆ ರಾಜ್ಯದಲ್ಲಿ ಪರಿಸ್ಥಿತಿಗಳು ದಿನೇ-ದಿನೇ ಸರಿ ಹೋಗುತ್ತಿವೆ. ಈದ್ ಹಬ್ಬ ಹತ್ತಿರವಿದೆ. ಈದ್ ಆಚರಿಸಲು ಜಮ್ಮು ಕಾಶ್ಮೀರದ ಜನರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ವ್ಯವಸ್ಥೆ ಮಾಡುತ್ತದೆ. ರಾಜ್ಯದ ಹೊರಗಿರುವ ಕಾಶ್ಮೀರದ ಜನರು ಹಬ್ಬಕ್ಕೆ ಮನೆಗೆ ತೆರಳಲು ಸರ್ಕಾರ ನೆರವಾಗುತ್ತದೆ ಎಂದು ಮೋದಿ ಅವರು ಭರವಸೆ ನೀಡಿದರು.

ಭಯೋತ್ಪಾದಕರಿಂದಾಗಿ ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಪೊಲೀಸರು, ಸೈನಿಕರು, ಸಾರ್ವಜನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇವರೆಲ್ಲ ಕನಸನ್ನು ನಾವು ಒಟ್ಟಾಗಿ ನಿಜ ಮಾಡಬೇಕಿದೆ, ಜಮ್ಮು ಕಾಶ್ಮೀರವು ಭಾರತದ ಇತರ ರಾಜ್ಯಗಳಂತೆ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುತ್ತದೆ ಎಂದು ಮೋದಿ ಹೇಳಿದರು.

ಜಮ್ಮು ಕಾಶ್ಮೀರ, ಲಡಾಕ್‌ ಜನರು ನಿಮ್ಮ ಸಾಮರ್ಥ್ಯ ಎಷ್ಟಿದೆಯೆಂದು ಇಡೀಯ ಜಗತ್ತಿಗೆ ತೋರಿಸಿ, ನಾವೆಲ್ಲರೂ ಒಟ್ಟಿಗೆ ಸೇರಿ ಹೊಸ ಭಾರತದ ಜೊತೆ, ಹೊಸ ಜಮ್ಮು ಕಾಶ್ಮೀರ, ಹೊಸ ಲಡಾಕ್‌ ನಿರ್ಮಾಣ ಮಾಡುವ ಪಣ ತೊಡೋಣ ಎಂದು ಹೇಳಿದ ಮೋದಿ ಧನ್ಯವಾದಗಳೊಂದಿಗೆ ಮಾತು ಮುಗಿಸಿದರು.

English summary
Narendra Modi today gave a long speech about Jammu Kashmir and scraping Article 370.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X