ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕೇರ್ಸ್ ನಿಧಿಗೆ ಪ್ರಧಾನಿ ಮೋದಿ ನೀಡಿದ ದೇಣಿಗೆ ಎಷ್ಟು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 3: ಕೊರೊನಾ ವಿರುದ್ಧದ ಹೋರಾಟದ ಕಾರ್ಯಗಳಿಗೆ ಬಳಸಲು ಆರಂಭಿಸಲಾಗಿರುವ ಪಿಎಂ ಕೇರ್ಸ್ ಫಂಡ್‌ನ ಮೊದಲ ಲೆಕ್ಕಪತ್ರದ ವರದಿಯನ್ನು ಬುಧವಾರ ಬಹಿರಂಗಪಡಿಸಲಾಗಿತ್ತು. ಈ ನಿಧಿಯನ್ನು ಹುಟ್ಟುಹಾಕುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 2.25 ಲಕ್ಷ ರೂ. ಹಣವನ್ನು ಆರಂಭದಲ್ಲಿ ನೀಡಿದ್ದರು ಎನ್ನುವುದು ಗುರುವಾರ ಬಹಿರಂಗವಾಗಿದೆ.

Recommended Video

PM Care Fund ಗೆ ಪ್ರಧಾನಿ ಮೋದಿ ನೀಡಿದ ದೇಣಿಗೆ ಎಷ್ಟು? | Oneindia Kannada

ಮಾರ್ಚ್ 27ರಂದು ಸ್ಥಾಪನೆಯಾದ ಪಿಎಂ ಕೇರ್ಸ್ ನಿಧಿಗೆ ಐದೇ ದಿನದಲ್ಲಿ 3,076 ರೂ. ಹಣ ಬಂದಿತ್ತು ಎನ್ನುವುದು ವರದಿಯಾಗಿತ್ತು. ಆದರೆ ಈ ಹಣವು ಪ್ರಧಾನಿ ನರೇಂದ್ರ ಮೋದಿ ಆರಂಭದಲ್ಲಿ ನೀಡಿದ 2.25 ಲಕ್ಷ ರೂ ದೇಣಿಗೆಯನ್ನು ಒಳಗೊಂಡಿಲ್ಲ.

5 ದಿನಗಳಲ್ಲೇ PM-Cares ಖಾತೆಗೆ 3076 ಕೋಟಿ; ಏನಾಯ್ತು ಈ ಹಣ? 5 ದಿನಗಳಲ್ಲೇ PM-Cares ಖಾತೆಗೆ 3076 ಕೋಟಿ; ಏನಾಯ್ತು ಈ ಹಣ?

ಪಿಎಂ ಕೇರ್ಸ್ ಫಂಡ್‌ಗೆ ಸ್ವತಃ ತಾವೇ ದೇಣಿಗೆ ನೀಡುವ ಮೂಲಕ ಚಾಲನೆ ನೀಡಿದ ಪ್ರಧಾನಿಯ ನಡೆಯನ್ನು ಬಿಜೆಪಿಯ ಅನೇಕ ನಾಯಕರು ಶ್ಲಾಘಿಸಿದ್ದರು. ಸಾರ್ವಜನಿಕ ಕಾರಣಗಳಿಗಾಗಿ ಪ್ರಧಾನ ಮೋದಿ ತಮ್ಮ ವೈಯಕ್ತಿಕ ಸಂಪತ್ತಿನಿಂದ ದೇಣಿಗೆ ನೀಡಿರುವುದು ಇದು ಮೊದಲ ಸಲವೇನಲ್ಲ. ಹೆಣ್ಣುಮಕ್ಕಳ ಶಿಕ್ಷಣ, ಗಂಗಾ ಸ್ವಚ್ಛತಾ ಯೋಜನೆ ಹಾಗೂ ಸವಲತ್ತುರಹಿತ ಪ್ರಜೆಗಳ ಕಲ್ಯಾಣಕ್ಕೆ ಸೇರಿದಂತೆ ಹಲವು ಸಂದರ್ಭದಲ್ಲಿ ಮೋದಿ ದೇಣಿಗೆ ನೀಡಿದ್ದಾರೆ.

 Narendra Modi Contributed Rs 2.25 Lakh For PM Cares Fund In Initial Corpus

ನರೇಂದ್ರ ಮೋದಿ ಇದುವರೆಗೂ ಇಂತಹ ಯೋಜನೆಗಳು, ಕಾರ್ಯಕ್ರಮಗಳಿಗೆ ನೀಡಿರುವ ಒಟ್ಟು ದೇಣಿಗೆ 103 ಕೋಟಿ ರೂ ದಾಟುತ್ತದೆ ಎಂದು ವರದಿಗಳು ತಿಳಿಸಿವೆ. 2019ರಲ್ಲಿ ಕುಂಭ ಮೇಳದಲ್ಲಿ ಸ್ವಚ್ಛತಾ ಕೆಲಸಗಾರರ ಕಲ್ಯಾಣ ನಿಧಿಯ ಆರಂಭಕ್ಕೆ ತಮ್ಮ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರೂ ದೇಣಿಗೆ ನೀಡಿದ್ದರು.

ಪಿಎಂ ಕೇರ್ಸ್ ಫಂಡ್: ಸಾಲು ಸಾಲು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್ಪಿಎಂ ಕೇರ್ಸ್ ಫಂಡ್: ಸಾಲು ಸಾಲು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್

ದಕ್ಷಿಣ ಕೊರಿಯಾದ ಸಿಯೋಲ್ ಪ್ರಶಸ್ತಿಯಿಂದ ಪಡೆದ ಸಂಪೂರ್ಣ 1.3 ಕೋಟಿ ರೂ ಹಣವನ್ನು ಗಂಗಾ ನದಿ ನೀರು ಸ್ವಚ್ಛಗೊಳಿಸುವ ನಮಾಮಿ ಗಂಗಾಕ್ಕೆ ನೀಡಿದ್ದರು. ತಮ್ಮ ಸ್ಮರಣಿಕೆಗಳನ್ನು ಹರಾಜು ಹಾಕುವ ಮೂಲಕ 3.40 ಕೋಟಿ ರೂ ಸಂಗ್ರಹಿಸಿದ್ದರು. ಈ ಸಂಪೂರ್ಣ ಹಣವನ್ನು ಸ್ವಚ್ಚ ಗಂಗಾ ಯೋಜನೆಗೆ ಬಳಸಿದ್ದರು. 2015ರವರೆಗೂ ತಾವು ಪಡೆದ ಕಾಣಿಕೆಗಳ ಹರಾಜಿನಿಂದ ಕೂಡ 8.35 ಕೋಟಿ ಹೆಚ್ಚುವರಿ ಹಣ ಸಂಗ್ರಹ ಮಾಡಿದ್ದರು. ಅದನ್ನು ಸಂಪೂರ್ಣವಾಗಿ ನಮಾಮಿ ಗಂಗೆ ಯೋಜನೆಗೆ ದೇಣಿಗೆಯನ್ನಾಗಿ ನೀಡಿದ್ದರು.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಸರ್ಕಾರಿ ನೌಕರರ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 21 ಲಕ್ಷ ರೂ ದೇಣಿಗೆ ನೀಡಿದ್ದರು.

English summary
Prime Minister Narendra Modi donated Rs 2.25 lakh towards the initial corpus of the PM Cares Fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X