ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿː ಸೈನಿಕರೊಂದಿಗೆ ಮೋದಿ ದೀಪಾವಳಿ

|
Google Oneindia Kannada News

ನವದೆಹಲಿ, ಅ.24: ಪ್ರಧಾನಿ ನರೇಂದ್ರ ಮೋದಿ ದೀಪಾವಳಿಯನ್ನು ವೀರ ಯೊಧರ ಜತೆ ಆಚರಿಸಿಕೊಂಡರು. ಕಾಶ್ಮೀರದ ಸಿಯಾಚಿನ್‌ ಸೈನಿಕ ಶಿಬಿರಕ್ಕೆ ಗುರುವಾರ ಭೇಟಿ ನೀಡಿದ ಪ್ರಧಾನಿ ಮೋದಿ ಸೈನಿಕರೊಂಧಿಗೆ ಸಿಹಿ ಹಂಚಿ ಶುಭಾಷಯ ವಿನಿಮಯ ಮಾಡಿಕೊಂಡರು.

ಭಾರತದ 125 ಕೋಟಿ ಜನ ಸಂಭ್ರಮದಿಂದ ದೀಪಾವಳಿ ಆಚರಿಸುತ್ತಿದ್ದಾರೆ ಎಂದರೆ ಅದಕ್ಕೆ ಸೈನಿಕರೇ ಕಾರಣ. ಭಾರತ ಶಾಂತಿ ಬಯಸುತ್ತದೆ, ನಮ್ಮ ದೇಶದ ಸೈನಿಕರು ಅದನ್ನೆ ಬಯಸುತ್ತಾರೆ. ಪ್ರವಾಹ ಸಂದರ್ಭ ಸೈನಿಕರು ಮಾಡಿದ ಪರಿಹಾರ ಕಾರ್ಯಗಳು ಶ್ಲಾಘನೀಯ ಎಂದು ಹೇಳಿದರು.[ಯೋಧರೊಂದಿಗೆ ಸಿಯಾಚಿನ್ ನಲ್ಲಿ ಮೋದಿ ದೀಪಾವಳಿ]

ಈ ಬಗ್ಗೆ ಟ್ವೀಟ್ ಕೂಡಾ ಮಾಡಿರುವ ಮೋದಿ ಕೊರೆವ ಚಳಿಯಲ್ಲಿ ವೀರ ಯೊಧರೊಂದಿಗೆ ಹಬ್ಬ ಆಚರಿಸುತ್ತಿರುವುದು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ. ಅಲ್ಲದೇ ಸಿಯಾಚಿನ್ ನಿಂದಲೇ ದೇಶದ ಸಮಗ್ರ ಜನತೆಗೆ ದೀಪಾವಳಿ ಶುಭಾಷಯ ಹೇಳಿದ್ದಾರೆ.[ಪಿಟಿಐ ಚಿತ್ರಗಳು]

ಪ್ರಧಾನಿಯೊಂದಿಗೆ ಸಿಹಿ ವಿನಿಮಯ

ಪ್ರಧಾನಿಯೊಂದಿಗೆ ಸಿಹಿ ವಿನಿಮಯ

ಜಮ್ಮು ಕಾಶ್ಮೀರದ ಸಿಯಾಚಿನ್ ಸೈನಿಕ ಶಿಬಿರಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿ ಸೈನಿಕರೊಂದಿಗೆ ಸಿಹಿ ಹಂಚಿ ದೀಪಾವಳಿ ಆಚರಿಸಿದರು.

ಪ್ರಧಾನಿಗೆ ಶಿಸ್ತಿನ ಸ್ವಾಗತ

ಪ್ರಧಾನಿಗೆ ಶಿಸ್ತಿನ ಸ್ವಾಗತ

ಪ್ರಧಾನಿಗೆ ಶಿಸ್ತಿನ ಸ್ವಾಗತ ಕೋರಿಸ ಸೈನ್ಯದ ಹಿರಿಯ ಅಧಿಕಾರಿಗಳು.

ಸೈನಿಕರೊಂದಿಗೆ ಮಾತು

ಸೈನಿಕರೊಂದಿಗೆ ಮಾತು

ವೀರ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.

ದೇಶ ಕಾಯುವ ನಿಮಗೆ ಧನ್ಯವಾದ

ದೇಶ ಕಾಯುವ ನಿಮಗೆ ಧನ್ಯವಾದ

ಸದಾ ದೇಶ ಕಾಯುತ್ತ ರಾಷ್ಟ್ರದ 125 ಕೋಟಿ ಜನ ನೆಮ್ಮದಿಯಿಂದ ಇರುವಂತೆ ಮಾಡಿರುವ ನಿಮಗೆ ಧನ್ಯವಾದ ಎಂದ ಪ್ರಧಾನಿ ನರೇಂದ್ರ ಮೋದಿ.

English summary
Prime Minister Narendra Modi spent his Diwali morning on Thursday at the Siachen glacier, lauding India's armed forces and saying "125 crore Indians can celebrate Diwali today and go about their lives in comfort because the jawans guard the borders."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X