ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟಕ್ಕೆ ಮೋದಿ ಕರೆ

ಅಮೃತಸರದಲ್ಲಿ ನಡೆಯುತ್ತಿರುವ 6ನೇ ಹಾರ್ಟ್ ಆಫ್ ಏಷ್ಯಾ ಸಚಿವರ ಸಮ್ಮೇಳನದಲ್ಲಿ ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ಕರೆ ನೀಡಿದರು.

By Mahesh
|
Google Oneindia Kannada News

ಅಮೃತ್ ಸರ್(ಪಂಜಾಬ್), ಡಿಸೆಂಬರ್ 04: ಅಮೃತಸರದಲ್ಲಿ ನಡೆಯುತ್ತಿರುವ 6ನೇ ಹಾರ್ಟ್ ಆಫ್ ಏಷ್ಯಾ ಸಚಿವರ ಸಮ್ಮೇಳನದಲ್ಲಿ ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ಕರೆ ನೀಡಿದರು.

ಹಾರ್ಟ್ ಆಫ್ ಏಷ್ಯಾ (ಎಚ್‍ಒಎ) ಸಮಾವೇಶಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಏಷ್ಯಾ ಖಂಡವನ್ನು ಕಾಡುತ್ತಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಪರಿಣಾಮಕಾರಿಯಾದ ಕ್ರಮ ಅನುಸರಿಸಬೇಕಿದೆ. ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವವರನ್ನು ಮೊದಲಿಗೆ ಮಟ್ಟ ಹಾಕಬೇಕಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಕದಡುತ್ತಿರುವವರ ವಿರುದ್ಧ ನಿರಂತರ ಹೋರಾಟ ನಡೆಸಬೇಕಿದೆ ಎಂದರು.

Narendra Modi calls for support against terror at Heart of Asia Summit

ಸುಮಾರು 40 ದೇಶಗಳು ಮತ್ತು ಐರೋಪ್ಯ ಒಕ್ಕೂಟದ ದೇಶಗಳು ಈ ಸಮಾವೇಶದಲ್ಲಿ ಭಾಗವಹಿಸಿವೆ. ಭಾರತ, ಚೀನಾ, ರಷ್ಯಾ, ಇರಾನ್ ಮತ್ತು ಪಾಕಿಸ್ತಾನ ಸೇರಿದಂತೆ 14 ದೇಶಗಳ ಉನ್ನತಾಧಿಕಾರಿಗಳು ಮತ್ತು 17 ಬೆಂಬಲ ರಾಷ್ಟ್ರಗಳ ಪ್ರತಿನಿಧಿಗಳು ಭಯೋತ್ಪಾದನೆ ನಿಗ್ರಹ ಕುರಿತ ಮಹತ್ವದ ವಿದ್ಯಮಾನಗಳ ಬಗ್ಗೆ ಸಮಾಲೋಚಿನೆ ನಡೆಸಿದ್ದಾರೆ.

ಹಾರ್ಟ್ ಆಫ್ ಏಷ್ಯಾ ಸಮಾವೇಶ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಸಭೆ ನಡೆಸಿ, ಭಯೋತ್ಪಾದನೆ ಮತ್ತು ಬಾಹ್ಯ ಪ್ರೇರಿತ ಅಸ್ಥಿರತೆ ಬಗ್ಗೆ ಚರ್ಚೆ ನಡೆಸಿದರು.

ಆಫ್ಘಾನಿಸ್ತಾನದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಮಾರಕವಾಗಿರುವ ಭಯೋತ್ಪಾದನೆ ಮಟ್ಟ ಹಾಕಲು ಹಾಗೂ ಅಫ್ಘಾನಿಸ್ತಾನದ ಅಭಿವೃದ್ಧಿಗೆ ಭಾರತ ನೆರವಾಗಲಿದೆ. ಇದಕ್ಕೆ ಸಮಾನ ಮನಸ್ಕ ದೇಶಗಳ ನೆರವು ಅಗತ್ಯವಿದೆ ಎಂದರು. ಭಾರತ ಶಾಂತಿ, ಸಹಕಾರ, ಸೌಹಾರ್ದತೆಯನ್ನು ಬಯಸುತ್ತದೆ ಎಂದು ಮೋದಿ ಹೇಳಿದರು.

English summary
In an oblique reference to Pakistan, Prime Minister Narendra Modi while speaking at 6th ministerial Heart of Asia Summit urged action against those who support and finance terror and endanger peace in the entire South Asian region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X