ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸ್ವಚ್ಛತೆಯೇ ಸೇವೆ' ಮೋದಿಯಿಂದ ಹೊಸ ಅಭಿಯಾನ ಜಾರಿ

|
Google Oneindia Kannada News

Recommended Video

ಸ್ವಚ್ಛತಾ ಹೀ ಸೇವಾ' ಅಭಿಯಾನಕ್ಕೆ ನರೇಂದ್ರ ಮೋದಿ ಚಾಲನೆ | Oneindia Kannada

ನವದೆಹಲಿ, ಸೆಪ್ಟೆಂಬರ್ 15: ಸ್ವಚ್ಛ ಭಾರತ ಅಭಿಯಾನಕ್ಕೆ ನಾಲ್ಕು ವರ್ಷ ತುಂಬುತ್ತಿರುವ ಸಂದರ್ಭ 'ಸ್ವಚ್ಛತಾ ಹೀ ಸೇವಾ' ಅಭಿಯಾನವನ್ನು ನರೇಂದ್ರ ಮೋದಿ ಇಂದು ಘೋಷಣೆ ಮಾಡಿದರು.

ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಸೆ. 15ರಂದು ಚಾಲನೆ: ಮೋದಿಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಸೆ. 15ರಂದು ಚಾಲನೆ: ಮೋದಿ

ಸ್ವಚ್ಛ ಭಾರತ್ ಅಭಿಯಾನದಲ್ಲಿ ಭಾಗವಹಿಸಿದ್ದ ಹಲವು ಸೆಲೆಬ್ರಿಟಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಮೋದಿ ಅವರು ದೇಶದ ವಿವಿದೆಡೆ ಮಹಿಳೆಯರು, ವಿದ್ಯಾರ್ಥಿಗಳೊಂದಿಗೂ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಮಾತನಾಡಿ ಸ್ವಚ್ಛತೆಯೇ ಸೇವೆ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಹೇಳಿದರು.

ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'

ಅಮಿತಾಬ್ ಬಚ್ಚನ್, ರತನ್ ಟಾಟಾ, ಸ್ವಾಮಿ ಸದ್ಗುರು, ಸಚಿನ್ ತೆಂಡೂಲ್ಕರ್ ಇನ್ನೂ ಹಲವು ಸ್ವಚ್ಛ ಭಾರತ್ ಅಭಿಯಾನದ ಸೆಲೆಬ್ರಿಟಿಗಳೊಂದಿಗೆ ಮೋದಿ ಮಾತನಾಡಿದರು. ಜೊತೆಗೆ ತಮಿಳುನಾಡು, ಕೇರಳ, ಪಂಜಾಬ್, ಅಸ್ಸಾಂ, ಪಶ್ಮಿಮ ಬಂಗಾಳ, ಗೊವಾಹಟಿ , ಮೌಂಟ್ ಅಬು, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಇನ್ನೂ ದೇಶದ ಹಲವು ಎಡೆಗಳಲ್ಲಿ ಸ್ವಚ್ಛತಾ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾವರು ಮಾತನಾಡಿದರು.

ಇಂಧೋರ್ ಮಸೀದಿಯಲ್ಲಿ ಮೋದಿ ಭಾಷಣ: ಬೊಹರಾ ಸಮುದಾಯದ ಗುಣಗಾನಇಂಧೋರ್ ಮಸೀದಿಯಲ್ಲಿ ಮೋದಿ ಭಾಷಣ: ಬೊಹರಾ ಸಮುದಾಯದ ಗುಣಗಾನ

Narendra Modi calls for Swach hi seva campaign

ಇಂದಿನಿಂದ ಅಕ್ಟೋಬರ್ 2ರ ವರೆಗೆ ಪ್ರತಿದಿನ ದೇಶದೆಲ್ಲೆಡೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕರೆ ನೀಡಿದರು. ಒಂದು ಕೋಟಿಗಿಂತಲೂ ಹೆಚ್ಚು ಜನ ಇಂದು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೋದಿ ತಮ್ಮ ಭಾಷಣದಲ್ಲಿ ಮಾಹಿತಿ ನೀಡಿದರು.

English summary
Prime minister Narendra Modi calls for swach hi seva 15 days continuous campaign. He talked with crores of people with the video conference and request to join Swach hi Seva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X