• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2020ರ ಟೈಮ್ ಪ್ರಭಾವಿ ವ್ಯಕ್ತಿಗಳ ಪಟ್ಟಿ: ಮೋದಿ, ಖುರಾನಾ, ಸುಂದರ್ ಪಿಚೈಗೆ ಸ್ಥಾನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ಪ್ರತಿಷ್ಠಿತ ಟೈಮ್ ನಿಯತಕಾಲಿಕೆಯು ಪ್ರಸಕ್ತ ಸಾಲಿನ 100 ಮಂದಿ ಪ್ರವರ್ತಕರು, ನಾಯಕರು, ಕಲಾವಿದರು, ಮಾದರಿ ವ್ಯಕ್ತಿಗಳು ಹಾಗೂ ಪ್ರಭಾವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಪ್ರೊಫೆಸರ್ ರವೀಂದ್ರ ಗುಪ್ತಾ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಅಮೆರಿಕದ ವೈದ್ಯ ಡಾ. ಆಂಟೋನಿ ಫೌಸಿ, ನಾಸಾ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಮತ್ತು ಜೆಸ್ಸಿಕಾ ಮೀರ್ ಸೇರಿದ್ದಾರೆ. ಶಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 82 ವರ್ಷದ ಬಿಲ್ಕಿಸ್ ಅವರಿಗೂ ಈ ಗೌರವ ಲಭಿಸಿದೆ.

ಸರ್ವೇ: ಸ್ವಾತಂತ್ರ್ಯಾನಂತರದ ಭಾರತದ ಅತ್ಯುತ್ತಮ ಪಿಎಂ ಯಾರು: ಮೊದಲೆರಡು ಸ್ಥಾನಕ್ಕೆ ಅಜಗಜಾಂತರ ವ್ಯತ್ಯಾಸಸರ್ವೇ: ಸ್ವಾತಂತ್ರ್ಯಾನಂತರದ ಭಾರತದ ಅತ್ಯುತ್ತಮ ಪಿಎಂ ಯಾರು: ಮೊದಲೆರಡು ಸ್ಥಾನಕ್ಕೆ ಅಜಗಜಾಂತರ ವ್ಯತ್ಯಾಸ

ಇದೇ ಟೈಮ್ ಮ್ಯಾಗಜಿನ್ ಕಳೆದ ವರ್ಷ ನರೇಂದ್ರ ಮೋದಿ ಸರ್ಕಾರವು ಚುನಾವಣೆಯಲ್ಲಿ ದಿಗ್ವಿಜಯ ಬಾರಿಸಿದ ಸಂದರ್ಭದಲ್ಲಿ ಮೋದಿ ಅವರನ್ನು 'ವಿಭಜನೆಯ ಮುಖ್ಯಸ್ಥ' ಎಂದು ಟೀಕಿಸಿತ್ತು. 'ಡಿವೈಡರ್ ಇನ್ ಚೀಫ್' ಎಂಬ ಶೀರ್ಷಿಕೆಯ ಲೇಖನ ಪ್ರಕಟಿಸಿದ್ದ ನಿಯತಕಾಲಿಕೆ, ಕೆಲವೇ ದಿನಗಳಲ್ಲಿ ದಶಕಗಳಿಂದ ಯಾವ ಪ್ರಧಾನಿಯೂ ಮಾಡದಂತೆ ಮೋದಿ ಅವರು ಭಾರತವನ್ನು ಒಂದುಗೂಡಿಸಿದ್ದಾರೆ ಎಂಬ ಮತ್ತೊಂದು ಲೇಖನ ಪ್ರಕಟಿಸಿತ್ತು. ಮುಂದೆ ಓದಿ.

ನರೇಂದ್ರ ಮೋದಿ

ನರೇಂದ್ರ ಮೋದಿ

ಸತತ ಎರಡನೆಯ ಬಾರಿಗೆ ಬಹುಮತದೊಂದಿಗೆ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ, ಅನೇಕ ಕಾರಣಗಳಿಂದ ದೇಶ ವಿದೇಶಗಳಲ್ಲಿ ಹೆಸರುಗಳಿಸಿದ್ದಾರೆ. ವಿವಾದ ಮತ್ತು ಜನಪ್ರಿಯತೆ ಅವರ ಆಡಳಿತದ ಜತೆಗೆ ಸಾಗಿದೆ. 'ಶೇ 80ರಷ್ಟು ಜನಸಂಖ್ಯೆ ಇರುವ ಹಿಂದೂಗಳೇ ಬಹುತೇಕ ಪ್ರಧಾನಿಯಾಗಿದ್ದರೂ ಬೇರೆ ಯಾವ ಅಂಶವೂ ಇಲ್ಲಿ ಗಣನೆಗೆ ಬರುವುದಿಲ್ಲ ಎಂಬಂತೆ ಮೋದಿ ಚುನಾಯಿತರಾಗಿದ್ದಾರೆ' ಎಂದು ಟೈಮ್ ಸಂಪಾದಕ ಕರ್ಲ್ ವಿಕ್ ಹೇಳಿದ್ದಾರೆ.

ಶಹೀನ್ ಬಾಗ್ ದೀದಿ-ಬಿಲ್ಕಿಸ್

ಶಹೀನ್ ಬಾಗ್ ದೀದಿ-ಬಿಲ್ಕಿಸ್

ದೆಹಲಿಯ ಶಹೀನ್ ಬಾಗ್‌ನಲ್ಲಿ ನಡೆದ ಸಂಪೂರ್ಣ ಮಹಿಳೆಯರ ಪ್ರತಿಭಟನೆಯಲ್ಲಿ ತಮ್ಮ ವಯಸ್ಸನ್ನೂ ಲೆಕ್ಕಿಸದೆ ಭಾಗಿಯಾಗಿದ್ದ 82 ವರ್ಷದ ಬಿಲ್ಕಿಸ್ ಸುದ್ದಿಯಾಗಿದ್ದರು. ಅಧಿಕಾರದ ವಿರುದ್ಧದ ಪ್ರತಿರೋಧದ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಿದ್ದಕ್ಕಾಗಿ ಬಿಲ್ಕಿಸ್ ಅವರಿಗೆ ಈ ಗೌರವ ಅರ್ಹವಾಗಿದೆ ಎಂದು ಟೈಮ್ ಹೇಳಿದೆ.

ಸಮೀಕ್ಷೆ: ದೇಶದ ಅತ್ಯುತ್ತಮ ಸಿಎಂ ಯಾರು? ಯಡಿಯೂರಪ್ಪಗೆ ಎಷ್ಟನೇ ಸ್ಥಾನಸಮೀಕ್ಷೆ: ದೇಶದ ಅತ್ಯುತ್ತಮ ಸಿಎಂ ಯಾರು? ಯಡಿಯೂರಪ್ಪಗೆ ಎಷ್ಟನೇ ಸ್ಥಾನ

ಆಯುಷ್ಮಾನ್ ಖುರಾನಾ

ಆಯುಷ್ಮಾನ್ ಖುರಾನಾ

ಬಾಲಿವುಡ್‌ನ ಸ್ಟಾರ್ ನಟರ ನಡುವೆ ಬೆಳೆದ ನಟ ಆಯುಷ್ಮಾನ್ ಖುರಾನಾ ವಿಭಿನ್ನ ಮಾದರಿಯ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಸ್ಮರಣೀಯ ಸಿನಿಮಾ ಹಾಗೂ ಮಾದರಿ ಪಾತ್ರಗಳ ಮೂಲಕ ಅವರು ಹೆಚ್ಚಿನ ಪರಿಣಾಮ ಬೀರಿದ್ದಾರೆ. ಪುರುಷ ಪಾತ್ರಗಳಲ್ಲಿನ ಏಕತಾನತೆಯನ್ನು ಮೀರುವಂತಹ ಸಿನಿಮಾಗಳನ್ನು ಅವರು ನೀಡಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಸುಂದರ್ ಪಿಚೈ

ಸುಂದರ್ ಪಿಚೈ

ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ, ಜಗತ್ತಿನ ಅತ್ಯಂತ ಬೃಹತ್ ತಾಂತ್ರಿಕ ಸಂಸ್ಥೆಗಳಲ್ಲಿ ಒಂದಾದ ಗೂಗಲ್‌ನ ನೇತೃತ್ವವನ್ನು 42ನೇ ವಯಸ್ಸಿನಲ್ಲಿಯೇ ವಹಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಭಾರತದಿಂದ ಅಮೆರಿಕಕ್ಕೆ ಬಂದ ವ್ಯಕ್ತಿ 1 ಟ್ರಿಲಿಯನ್ ಡಾಲರ್ ಮೌಲ್ಯದ ಕಂಪೆನಿಯ ಸಿಇಒ ಆಗುವುದು ಸಣ್ಣ ಮಾತಲ್ಲ. ಈ ಮೂಲಕ ಅವರು ನಮ್ಮ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದೆ.

ರವೀಂದ್ರ ಗುಪ್ತಾ

ರವೀಂದ್ರ ಗುಪ್ತಾ

ಕಳೆದ ವರ್ಷದ ಮಾರ್ಚ್‌ನಲ್ಲಿ ಲಂಡನ್‌ನ ರೋಗಿಯೊಬ್ಬರು ಎಚ್‌ಐವಿಯಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾದರು. ಇತಿಹಾಸದಲ್ಲಿಯೇ ಎಚ್‌ಐವಿಯಿಂದ ಗುಣಮುಖರಾದ ಎರಡನೆಯ ರೋಗಿ ಅವರು. ಇದಕ್ಕೆ ಕಾರಣವಾಗಿದ್ದು ಪ್ರೊಫೆಸರ್ ರವೀಂದ್ರ ಗುಪ್ತಾ ನೇತೃತ್ವದ ಅಧ್ಯಯನ. ಅದೇ ವರ್ಷ ಕೇಂಬ್ರಿಡ್ಜ್ ವಿವಿಯು ಅವರನ್ನು ಕೇಂಬ್ರಿಡ್ಜ್ ಸಂಸ್ಥೆಯ ಕ್ಲಿನಿಕಲ್ ಮೈಕ್ರೊಬಯಾಲಜಿಯ ಪ್ರೊಫೆಸರ್ ಆಗಿ ನೇಮಿಸಿತ್ತು.

English summary
Narendra Modi, Ayushmann, Sundar Pichai, and Ravindra Gupta are the Indians on the TIME’s 100 most influential list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X