ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಿರ್ವಹಣೆ: ಅನುಮೋದನೆ ಕುಸಿದರೂ ಇವರೇ ವಿಶ್ವದ ಜನಪ್ರಿಯ ನಾಯಕ

|
Google Oneindia Kannada News

ಕೊರೊನಾ ಎರಡನೇ ಅಲೆ ನಿರ್ವಹಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮುನ್ನೆಚ್ಚರಿಕಾ ಕ್ರಮಗಳು ವಿಶ್ವದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದವು. ಸಾವಿನ ಸಂಖ್ಯೆಯಲ್ಲಿ ಸರಿಯಾದ ಲೆಕ್ಕ ನೀಡುತ್ತಿಲ್ಲ ಎನ್ನುವ ಆಪಾದನೆಯೂ ಕೇಂದ್ರ ಸರಕಾರದ ಮೇಲಿತ್ತು.

ಲಸಿಕೆ ಅಭಿಯಾನದಲ್ಲಿ ಅವ್ಯವಸ್ಥೆ, ಎರಡನೇ ಅಲೆಯ ಹಾವಳಿ ಆರಂಭವಾಗಿದ್ದರೂ ಕುಂಭ ಮೇಳಕ್ಕೆ ಅನುಮತಿ ನೀಡಿದ್ದು, ಪಂಚ ರಾಜ್ಯಗಳ ಚುನಾವಣೆಯಲ್ಲಿ ಲಕ್ಷಲಕ್ಷ ಜನರನ್ನು ಸೇರಿಸಿ ಚುನಾವಣಾ ಪ್ರಚಾರ ನಡೆಸಿದ್ದು ಟೀಕೆಗೆ ಗುರಿಯಾಗಿತ್ತು.

 'ಪ್ರಗ್ಯಾ ವಿಚಾರದಲ್ಲಿ ಪಿಎಂ ಮನಸ್ಸು ಬದಲಾಯಿಸಿದ್ದಾರೆಯೇ?' - ಕಾಂಗ್ರೆಸ್‌ ಟೀಕೆ 'ಪ್ರಗ್ಯಾ ವಿಚಾರದಲ್ಲಿ ಪಿಎಂ ಮನಸ್ಸು ಬದಲಾಯಿಸಿದ್ದಾರೆಯೇ?' - ಕಾಂಗ್ರೆಸ್‌ ಟೀಕೆ

ಇದು ಭಾರತದ ಮಾತ್ರ ಸಮಸ್ಯೆಯಲ್ಲ, ವಿಶ್ವದ ಹಲವು ರಾಷ್ಟ್ರಗಳ ನಾಯಕರು ಕೊರೊನಾ ನಿರ್ವಹಣೆಯಲ್ಲಿ ಕೆಟ್ಟ ಹೆಸರನ್ನು ಅಂಟಿಸಿಕೊಂಡಿದ್ದರು. ಕೊರೊನಾ ಎರಡನೇ ಅಲೆ ಆರಂಭಕ್ಕೆ ಮುನ್ನ ಪ್ರಧಾನಿ ಮೋದಿ ವಿಶ್ವದಲ್ಲೇ ಜನಪ್ರಿಯ ವ್ಯಕ್ತಿಯಾಗಿದ್ದರು.

ಆದರೆ, ಅಮೆರಿಕಾದ ದತ್ತಾಂಶ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಅವರ ಅನುಮೋದನೆ ಶೇ. 18ರಷ್ಟು ಕುಸಿದಿದೆ. ಕಳೆದ ಮೇ ತಿಂಗಳ ನಂತರ ನಡೆಸಿದ ಸಮೀಕ್ಷೆ ಇದಾಗಿತ್ತು. ಯಾರಿಗೆ ಎಷ್ಟು ರೇಟಿಂಗ್?

 ಕೊರೊನಾ ಮುಂಚೂಣಿ ಕಾರ್ಯಕರ್ತರ ತರಬೇತಿಗೆ ಮೋದಿ ಚಾಲನೆ ಕೊರೊನಾ ಮುಂಚೂಣಿ ಕಾರ್ಯಕರ್ತರ ತರಬೇತಿಗೆ ಮೋದಿ ಚಾಲನೆ

 ಅಮೆರಿಕಾದ ದತ್ತಾಂಶ ಗುಪ್ತಚರ ಸಂಸ್ಥೆಯೊಂದು (ಮಾರ್ನಿಂಗ್ ಕನ್ಸಲ್ಟ್)

ಅಮೆರಿಕಾದ ದತ್ತಾಂಶ ಗುಪ್ತಚರ ಸಂಸ್ಥೆಯೊಂದು (ಮಾರ್ನಿಂಗ್ ಕನ್ಸಲ್ಟ್)

ಅಮೆರಿಕಾದ ದತ್ತಾಂಶ ಗುಪ್ತಚರ ಸಂಸ್ಥೆಯೊಂದು (ಮಾರ್ನಿಂಗ್ ಕನ್ಸಲ್ಟ್) ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ಸಮೀಕ್ಷೆಯನ್ನು ನಡೆಸಿತ್ತು. ಈ ಸಮೀಕ್ಷೆ ವಾರಕ್ಕೊಮ್ಮೆ ನಡೆಯುತ್ತದೆ ಮತ್ತು ಭಾರತ, ಜರ್ಮನಿ, ಅಮೆರಿಕಾ, ಬ್ರೆಜಿಲ್, ಕೆನಡಾ, ಸ್ಪೇನ್, ಫ್ರಾನ್ಸ್, ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಹದಿಮೂರು ದೇಶಗಳ ನಾಯಕರ ಒಪ್ಪಿಗೆಯ ರೇಟಿಂಗ್ ನಡೆಸುತ್ತದೆ.

 ಪ್ರಧಾನಿ ಮೋದಿಯ ಅನುಮೋದನೆ ಪ್ರಮಾಣ ಶೇ. 66ಕ್ಕೆ ಇಳಿದಿದೆ

ಪ್ರಧಾನಿ ಮೋದಿಯ ಅನುಮೋದನೆ ಪ್ರಮಾಣ ಶೇ. 66ಕ್ಕೆ ಇಳಿದಿದೆ

ಈ ಸಂಸ್ಥೆ ಭಾರತದಲ್ಲಿ 2,126 ಯುವಕರ ಜೊತೆ ಆನ್ಲೈನ್ ಮೂಲಕ ಸಮೀಕ್ಷೆ ಸಂದರ್ಶನವನ್ನು ನಡೆಸಿತ್ತು. ಈ ವರ್ಷದ ಮೇ ತಿಂಗಳಲ್ಲಿ ಶೇ.84 ರಷ್ಟಿದ್ದ ಪ್ರಧಾನಿ ಮೋದಿಯ ಅನುಮೋದನೆ ಪ್ರಮಾಣ ಶೇ. 66ಕ್ಕೆ ಇಳಿದಿದೆ. ಶೇ. 18ರಷ್ಟು ಇದು ಇಳಿಕೆ ಕಂಡಿದೆ ಎಂದು ಮಾರ್ನಿಂಗ್ ಕನ್ಸಲ್ಟ್ ತನ್ನ ಸಮೀಕ್ಷೆಯಲ್ಲಿ ಉಲ್ಲೇಖಿಸಿದೆ.

 ಮೋದಿಯ ಅನುಮೋದನೆ ಪ್ರಮಾಣ ಇಳಿದರೂ, ವಿಶ್ವದಲ್ಲಿ ಅವರೇ ನಂಬರ್ ಒನ್

ಮೋದಿಯ ಅನುಮೋದನೆ ಪ್ರಮಾಣ ಇಳಿದರೂ, ವಿಶ್ವದಲ್ಲಿ ಅವರೇ ನಂಬರ್ ಒನ್

ಮೋದಿಯ ಅನುಮೋದನೆ ಪ್ರಮಾಣ ಇಳಿದರೂ, ವಿಶ್ವದಲ್ಲಿ ಅವರೇ ನಂಬರ್ ಒನ್ ಆಗಿ ಹೊರಹೊಮ್ಮಿದ್ದಾರೆ. ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್, ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಮುಂತಾದವರನ್ನು ಹಿಂದಿಕ್ಕಿ ಮೋದಿ ಅಗ್ರ ಸ್ಥಾನದಲ್ಲಿದ್ದಾರೆ.

 ಮೋದಿ ನಂತರ ಹಲವು ವಿಶ್ವದ ಹಲವು ನಾಯಕರು

ಮೋದಿ ನಂತರ ಹಲವು ವಿಶ್ವದ ಹಲವು ನಾಯಕರು

ಈ ಸಮೀಕ್ಷೆಯ ಪ್ರಕಾರ ಮೋದಿ ಅಗ್ರಸ್ಥಾನದಲ್ಲಿ ಇದಾದ ನಂತರ, ಇಟೆಲಿಯ ಪ್ರಧಾನಿ, ಮೆಕ್ಸಿಕೋದ ಅಧ್ಯಕ್ಷರು, ಆಸ್ಟ್ರೇಲಿಯಾದ ಪ್ರಧಾನಿ, ಜರ್ಮನಿಯ ಚಾನ್ಸೆಲರ್, ಅಮೆರಿಕಾದ ಅಧ್ಯಕ್ಷರು, ಕೆನಡಾದ ಪ್ರಧಾನಿ ಮತ್ತು ಬ್ರಿಟನ್ ಪ್ರಧಾನಿಯವರು ನಂತರದ ಸ್ಥಾನವನ್ನು ಪಡೆದಿದ್ದಾರೆ.

English summary
Narendra Modi’s approval rating falls in 2nd wave, but still highest among world leaders, survey
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X