ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ತಿಂಗಳು ಮೋದಿ-ಶಿಂಜೋ ಸಭೆ: ಪ್ರಮುಖ ಸೇನಾ ಒಪ್ಪಂದಕ್ಕೆ ಸಹಿ

|
Google Oneindia Kannada News

ನವದೆಹಲಿ, ಆಗಸ್ಟ್ 17: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ನಡುವಿನ ಭಾರತ-ಜಪಾನ್ ಸಮ್ಮೇಳನ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಉಭಯ ದೇಶಗಳ ನಾಯಕರು ಪ್ರಮುಖ ಸೇನಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಜತೆಗೆ ಸೇನಾ ಸಾಮಗ್ರಿಗಳ ಖರೀದಿ, ಕ್ರಾಸ್ ಸರ್ವಿಸಿಂಗ್ ಅಗ್ರೀಮೆಂಟ್ (ಎಸಿಎಸ್‌ಎ) ಕೂಡ ನಡೆಯಲಿದೆ. ಜಪಾನ್‌ನ ಕೆಲವು ಉತ್ಪಾದನಾ ಘಟಕಗಳನ್ನು ಭಾರತಕ್ಕೆ ವರ್ಗಾಯಿಸುವ ಸಂಬಂಧ ಚರ್ಚೆ ನಡೆಯಲಿದೆ.

ಭಾರತ-ಜಪಾನ್ ಮಾತುಕತೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ ಇಬ್ಬರೂ ನಾಯಕರು ಪರಸ್ಪರ ಭೇಟಿಯಾಗುವುದಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕವೇ ಈ ಭೇಟಿ ನಡೆಯಲಿವೆ ಎನ್ನಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ದಿನಾಂಕ ಹೊಂದಾಣಿಕೆಯಾಗದಿದ್ದರೆ ಅಕ್ಟೋಬರ್‌ಗೆ ಈ ಸಭೆಯನ್ನು ಮುಂದೂಡುವ ಬಗ್ಗೆ ಉಭಯ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ.

ಲಡಾಖ್ ಆಯ್ತು ಈಗ ಜಪಾನ್‌ನಲ್ಲಿ ಚೀನಾ ಸೇನೆಯ ವರಸೆ ಶುರುಲಡಾಖ್ ಆಯ್ತು ಈಗ ಜಪಾನ್‌ನಲ್ಲಿ ಚೀನಾ ಸೇನೆಯ ವರಸೆ ಶುರು

ಈ ಸಭೆಯನ್ನು 2019ರ ಡಿಸೆಂಬರ್ 15-17ರವರೆಗೆ ಅಸ್ಸಾಂನ ಗುವಾಹಟಿಯಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಸಿಎಎ ಪ್ರತಿಭಟನೆ ಅಸ್ಸಾಂನಲ್ಲಿ ತೀವ್ರವಾಗಿದ್ದ ಕಾರಣ ಮುಂದೂಡಲಾಗಿತ್ತು.

 Narendra Modi And Shinzo Abe To Sign Off On Key Military Pact At India-Japan Summit Next Month

ಕೊರೊನಾ ಕುರಿತು ಜಪಾನ್ ಪ್ರಧಾನಿ ಜೊತೆ ಚರ್ಚೆ: ಮೋದಿ ಹೇಳಿದ್ದೇನು?ಕೊರೊನಾ ಕುರಿತು ಜಪಾನ್ ಪ್ರಧಾನಿ ಜೊತೆ ಚರ್ಚೆ: ಮೋದಿ ಹೇಳಿದ್ದೇನು?

ಈಗ ಭಾರತದ ಪೂರ್ವ ಲಡಾಖ್ ಹಾಗೂ ಜಪಾನ್‌ನ ಸೆಂಕಾಕು ದ್ವೀಪ ಪ್ರದೇಶದಲ್ಲಿ ಚೀನಾ ಲಿಬರೇಶನ್ ಆರ್ಮಿ (ಪಿಎಲ್‌ಎ) ಆಕ್ರಮಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತ-ಜಪಾನ್ ಸಭೆ ಮತ್ತೆ ಮಹತ್ವ ಪಡೆದುಕೊಂಡಿದೆ. ಲಡಾಖ್ ಹಾಗೂ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿನ ಚೀನಾದ ನುಸುಳುವಿಕೆಯ ಚರ್ಚೆಯ ಜತೆಗೆ ಭಾರತ, ಜಪಾನ್, ಅಸ್ಟ್ರೇಲಿಯಾ ಮತ್ತು ಅಮೆರಿಕ ನಡುವಿನ ಸಹಭಾಗಿತ್ವದ 'ಕ್ವಾಡ್' ಪರಿಕಲ್ಪನೆಯನ್ನು ಬಲಪಡಿಸುವ ಪ್ರಯತ್ನವೂ ನಡೆಯಲಿದೆ.

English summary
India-Japan summit between Narendra Modi and Shinzo Abe is scheduled for next month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X