ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್‌ನಲ್ಲಿ ಮೋದಿಯ ಲಕ್ಷ, ರಾಹುಲ್‌ನ 9000 ಹಿಂಬಾಲಕರು ಕಡಿಮೆ

|
Google Oneindia Kannada News

Recommended Video

Untitled

ನವದೆಹಲಿ, ಫೆಬ್ರವರಿ 11: ಟ್ವಿಟ್ಟರ್‌ ನಲ್ಲಿ ಕಳೆದ ನವೆಂಬರ್‌ನಿಂದ ಪ್ರಧಾನಿ ಮೋದಿ ಅವರ ಸುಮಾರು ಒಂದು ಲಕ್ಷ ಫಾಲೋವರ್‌ (ಹಿಂಬಾಲಕರು) ಕಡಿಮೆ ಆಗಿದ್ದಾರೆ. ರಾಹುಲ್ ಗಾಂಧಿ ಸುಮಾರು 9000 ಹಿಂಬಾಲಕರು ಕಡಿಮೆ ಆಗಿದ್ದಾರೆ.

ಕಳೆದ ನವೆಂಬರ್ ನಲ್ಲಿ ಟ್ವಿಟ್ಟರ್ ಸಂಸ್ಥೆಯು ಫೇಕ್ ಅಕೌಂಟ್‌ಗಳ ವಿರುದ್ಧ ನಡೆಸಿದ ಕಾರ್ಯಾಚರಣೆ ಹಾಗೂ ಫೇಕ್ ಸಾಮಾಜಿಕ ಜಾಲತಾಣ ಅಕೌಂಟ್‌ಗಳನ್ನು ಬಂದ್ ಮಾಡಿದ ಕಾರಣ ದೇಶದ ಈ ಇಬ್ಬರೂ ರಾಜಕೀಯ ನಾಯಕರು ಕೆಲವಷ್ಟು ಜನ ಫಾಲೋವರ್‌ಗಳನ್ನು ಕಳೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರ ಟ್ವಿಟ್ಟರ್ ಖಾತೆಯನ್ನು ಹಿಂಬಾಲಿಸುತ್ತಿದವರಲ್ಲಿ ಸುಮಾರು ಒಂದು ಲಕ್ಷ ಫೇಕ್ ಖಾತೆಗಳೇ ಇದ್ದವು, ಇವೆಲ್ಲವನ್ನೂ ಟ್ವಿಟ್ಟರ್ ಸಂಸ್ಥೆಯು ರದ್ದು ಮಾಡಿದೆ ಹಾಗಾಗಿ ಮೋದಿ ಅವರ ಟ್ವಿಟ್ಟರ್ ಖಾತೆ ಭಾರಿ ಸಂಖ್ಯೆಯಲ್ಲಿ ಫಾಲೋವರ್‌ ಗಳನ್ನು ಕಳೆದುಕೊಂಡಿದೆ.

Narendra Modi and Rahul Gandhi looses fake Twitter followers

ರಾಹುಲ್ ಗಾಂಧಿ ಅವರ ಟ್ವಿಟ್ಟರ್‌ ಖಾತೆಯನ್ನೂ ಸಹ ಫೇಕ್ ಖಾತೆಗಳು ಫಾಲೋ ಮಾಡುತ್ತಿದ್ದವು ಅವೂ ಸಹ ರದ್ದಾಗಿವೆ. ಪ್ರಸ್ತುತ ರಾಹುಲ್ ಅವರನ್ನು 80.47 ಲಕ್ಷ ಜನ ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಮೋದಿ ಅವರನ್ನು 4.54 ಕೋಟಿಸ ಜನ ಫಾಲೋ ಮಾಡುತ್ತಿದ್ದಾರೆ.

ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಮಾತ್ರವೇ ಅಲ್ಲದೆ, ಸಚಿವರಾದ ಕಿರಣ್ ರಿಜುಜು, ಭುಪೇಂದ್ರ ಯಾದವ್, ಬಿಜೆಪಿ, ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್ ಖಾತೆಗಳ ಫಾಲೋವರ್‌ಗಳ ಸಂಖ್ಯೆಯಲ್ಲೂ ಕಡಿಮೆ ಆಗಿದೆ.

English summary
Prime minister Narendra Modi and AICC president Rahul Gandhi both looses fake twitter followers. Modi looses nearly one lack and Rahul looses 9000 followers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X