ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಭಾಷಣ

|
Google Oneindia Kannada News

ಅಹಮದಾಬಾದ್, ಸೆ.22 : ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾನುವಾರ ಅಮೆರಿಕಾದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಭಯೋತ್ಪಾದನೆ ವಿರುದ್ಧ ಜಾಗತಿಕ ಹೋರಾಟದ ಅಗತ್ಯವಿದೆ ಎಂದು ಮೋದಿ ಕರೆ ನೀಡಿದರು.

ತಂಪ ಫ್ಲೊರಿಡಾದಲ್ಲಿರುವ ಬಿಜೆಪಿಯ ರಾಷ್ಟ್ರೀಯ ಘಟಕದಲ್ಲಿ ಈ ಭಾಷಣದ ನೇರಪ್ರಸಾರ ಏರ್ಪಡಿಸಲಾಗಿತ್ತು. ತಮ್ಮ ಭಾಷಣವನ್ನು ನೈರೋಬಿಯ ಶಾಪಿಂಗ್ ಮಾಲ್ ನ ಗುಂಡಿನ ದಾಳಿಯಲ್ಲಿ ಮೃತಪಟ್ಟರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಮೋದಿ ಪ್ರಾರಂಭಿಸಿ, ಭಯೋತ್ಪಾದನೆ ವಿರುದ್ಧ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.

Narendra Modi

ಅಟಲ್ ಜಿ ಹೊಗಳಿದ ಮೋದಿ : ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತವನ್ನು ನೆನಪಿಸಿಕೊಂಡ ನರೇಂದ್ರ ಮೋದಿ, ಎನ್ ಡಿಎ ಸರ್ಕಾರ ಅನಿವಾಸಿ ಭಾರತೀಯರಿಗೆ ಅನುಕೂಲವಾಗಲು ಜಾರಿಗೆ ತಂದ ಯೋಜನೆಗಳ ಕುರಿತು ಮಾತನಾಡಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವಿದ್ದಾಗ ಶೇ.8.4 ರಷ್ಟಿದ್ದ ದೇಶದ ಜಿಡಿಪಿಯನ್ನು ಶೇ.4.8ಕ್ಕೆ ಇಳಿಸಿದ ಖ್ಯಾತಿ ಯುಪಿಎ ಸರ್ಕಾರ ಪಡೆದಿದೆ, ದೇಶವನ್ನು ಚಿಂತಾಜನ ಸ್ಥಿತಿಗೆ ತಳ್ಳಿರುವ ಕಾಂಗ್ರೆಸ್ ಪಟ್ಟಭದ್ರ ಹಿತಾಸಕ್ತಿಗಳನ್ನು ನಾವು ಚುನಾವಣೆ ಮೂಲಕವೇ ಕೆಳಗಿಸಬೇಕಾಗಿದೆ ಎಂದು ಮೋದಿ ಹೇಳಿದರು.

ಮತದಾನ ಮಾಡಿ, ಬಿಜೆಪಿಗೆ ಬೆಂಬಲ ನೀಡಿ : ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಕ್ಕೆ ಯುಎಸ್ಎ ಬಿಜೆಪಿಗೆ ಅಭಿನಂದನೆ ಸಲ್ಲಿಸಿದ ನರೇಂದ್ರ ಮೋದಿ, ಅನಿವಾಸಿ ಭಾರತೀಯರು ದೇಶಕ್ಕೆ ನೀಡುತ್ತಿರುವ ವಿವಿಧ ರೀತಿಯ ಕೊಡುಗೆಗಳಿಗಾಗಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಭಾರತೀಯ ಪಾಸ್ ಪೋರ್ಟ್ ಹೊಂದಿರುವ ಪ್ರತಿಯೊಬ್ಬರು ಅನಿವಾಸಿ ಭಾರತೀಯರು ಮತದಾನ ಮಾಡಬೇಕು. ನಿಮ್ಮ ಪ್ರತಿಯೊಂದು ಮತ ಸಹ ದೇಶವನ್ನು ಕಟ್ಟುವ ಕೆಲಸ ಮಾಡುತ್ತದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ಬಿಜೆಪಿ ನೇತೃತ್ವದ ಎನ್ ಡಿಎಯನ್ನು ಅಧಿಕಾರಕ್ಕೆ ತಂದು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಸಲು ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್ ನೇತೃತ್ವದ ಯುಪಿಯಿಂದ ಉಂಟಾಗಿರುವ ರಾಜಕೀಯ ಅಸ್ತಿರತೆ ಬಗ್ಗೆ ಮಾತನಾಡಿದರು.

ಕಾಂಗ್ರೆಸ್ ಜನರನ್ನು ನಿರ್ಲಕ್ಷಿಸಿ ಆಡಳಿತ ಮಾಡುತ್ತಿದೆ. ಬಿಜೆಪಿ 2014ರ ಲೋಕಸಭೆ ಚುನಾವಣೆಯನ್ನು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಮಾಡಿರುವ ಸಾಧನೆಯನ್ನು ಮುಂದಿಟ್ಟುಕೊಂಡು ಎದುರಿಸುತ್ತದೆ ಎಂದು ನರೇಂದ್ರ ಮೋದಿ ಹೇಳಿದರು. ಯುಪಿಎ ಸರ್ಕಾರ 9 ವರ್ಷದಲ್ಲಿ ಮಾಡಿರುವ ಸಾಧನೆಯನ್ನು ಜನರ ಮುಂದೆ ಇಡುವಂತೆ ಮೋದಿ ಸವಾಲು ಹಾಕಿದರು.

ನರೇಂದ್ರ ಮೋದಿ ಭಾಷಣದ ಪೂರ್ಣಪಾಠ English ನಲ್ಲಿ

English summary
Narendra Modi addressed the Indian Diaspora at the National Convention of the OFBJP-USA being held in Tampa Florida, USA during an early morning video conference via satellite. Starting on a somber note Mr. Modi’s speech started with a condolence and condemnation of the Terrorist Attack in Nairobi in Kenya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X