ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರದಲ್ಲಿ ಭಾರತದ ಅಭಿವೃದ್ಧಿ ಬಗ್ಗೆ ಎದೆ ತಟ್ಟಿಕೊಂಡ ಮೋದಿ

By Manjunatha
|
Google Oneindia Kannada News

Recommended Video

ಭಾರತದ ಅಭಿವೃದ್ಧಿ ಬಗ್ಗೆ ಹೆಮ್ಮೆಯಿಂದ ಸಿಂಗಾಪುರದಲ್ಲಿ ಮಾತನಾಡಿದ ಮೋದಿ | Oneindia Kannada

ಮರೀನಾ ಬೇ, ಮೇ 31: ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್‌ ಕನ್‌ವೆನ್‌ಷನ್‌ ಸೆಂಟರ್‌ನಲ್ಲಿ ಬಂಡವಾಳ ಹೂಡಿಕೆದಾರರು ಮತ್ತು ಭಾರತೀಯ ಸಮುದಾಯದವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಆಡಳಿತಾವದಿಯ ಭಾರತದ ಅಭಿವೃದ್ಧಿಯ ಬಗ್ಗೆ ಎದೆತಟ್ಟಿಕೊಂಡರು.

ಇಂಡೋನೇಷ್ಯಾದ ನಾಗರಿಕರಿಗೆ ಕೊಡುಗೆ ಘೋಷಿಸಿದ ಮೋದಿಇಂಡೋನೇಷ್ಯಾದ ನಾಗರಿಕರಿಗೆ ಕೊಡುಗೆ ಘೋಷಿಸಿದ ಮೋದಿ

ಸಿಂಗಾಪುರದ ವಿಶಿಷ್ಟತೆ, ಭಾರತ ಹಾಗೂ ಸಿಂಗಾಪುರದ ಸಂಬಂಧಗಳ ಬಗ್ಗೆ ಮಾತನಾಡಿದ ಅವರು, ಭಾರತದ ಮತ್ತು ಸಿಂಗಾಪುರ ದೇಶಗಳು ಸ್ನೇಹಮಯ ಸಂಬಂಧದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಜನಸಾಮಾನ್ಯರಿಗೂ ವಿಮಾನಯಾನದ ಅನುಕೂಲ ಕಲ್ಪಿಸಿದ ಮೋದಿ ಸರ್ಕಾರಜನಸಾಮಾನ್ಯರಿಗೂ ವಿಮಾನಯಾನದ ಅನುಕೂಲ ಕಲ್ಪಿಸಿದ ಮೋದಿ ಸರ್ಕಾರ

ಸಿಂಗಾಪುರದಲ್ಲಿ ಭಾರತೀಯರಿಗೆ ನೀಡಿರುವ ಪ್ರಾಧಾನ್ಯತೆಯನ್ನು ಹೊಗಳಿದ ಅವರು, ಇಲ್ಲಿ ತಮಿಳಿಗೆ ಅಧಿಕೃತ ಭಾಷೆಯ ಮಾನ್ಯತೆ ನೀಡಲಾಗಿದೆ, ಇಲ್ಲಿನ ಶಾಲೆಗಳಲ್ಲಿ ಐದು ಭಾರತೀಯ ಭಾಷೆಗಳನ್ನು ಕಲಿಯುವ ಅವಕಾಶ ಒದಗಿಸಲಾಗಿದೆ, ಭಾರತದ ಎಲ್ಲಾ ಹಬ್ಬಗಳ ಆಚರಣೆಗಳನ್ನು ನೋಡಲು ಸಿಂಗಾಪುರಕ್ಕೆ ಬರಬೇಕು ಎಂದರು.

ಸಿಂಗಾಪುರ ಭಾರತದ ಬಾಂಧವ್ಯ

ಸಿಂಗಾಪುರ ಭಾರತದ ಬಾಂಧವ್ಯ

ಭಾರತ ಹಾಗೂ ಸಿಂಗಾಪುರದ ಬಾಂಧ್ಯವದ ಬಗ್ಗೆ ಮಾತನಾಡಿದ ಮೋದಿ ಅವರು, ನಮ್ಮ ಎರಡು ದೇಶಗಳ ಬಾಂಧವ್ಯ ವಿಶ್ವಕ್ಕೆ ಮಾದರಿ, ನಮ್ಮ ಭದ್ರತಾ ಬಾಂಧವ್ಯ, ಆರ್ಥಿಕ ಬಾಂದವ್ಯದ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ಸಿಂಗಪುರದ ಜಲ ಸೇನೆ ನಮ್ಮೊಂದಿಗೆ ಅತಿ ಹೆಚ್ಚು ಕಾಲ ದ್ವಿಪಕ್ಷೀಯ ತಾಲೀಮು ನಡೆಸಿದೆ. ಎರಡೂ ದೇಶಗಳ ಹಡಗುಗಳು ಪ್ರತಿ ದಿನ ಎರಡೂ ದೇಶವನ್ನು ಬೆಸೆಯುತ್ತಿವೆ ಎಂದರು.

ಭಾರತೀಯರ ಪ್ರತಿಭೆ ಗುರುತಿಸಿರುವ ಸಿಂಗಾಪುರ

ಭಾರತೀಯರ ಪ್ರತಿಭೆ ಗುರುತಿಸಿರುವ ಸಿಂಗಾಪುರ

ಭಾರತೀಯರ ಪ್ರತಿಭೆಯನ್ನು ಸಿಂಗಾಪುರ ಸರ್ಕಾರ ಗುರುತಿಸಿದೆ ಅವರ ಪ್ರತಿಭೆಗೆ ನೀರೆರುದು ಪೋಷಿಸಿದೆ ಅದಕ್ಕೆ ಸಿಂಗಾಪುರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಸಿಂಗಪುರದ ಭಾರತೀಯರು ಸಿಂಗಾಪುರವನ್ನು ತಮ್ಮ ಪ್ರತಿಭೆಯಿಂದ ಸಿಂಗರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.

ತಮ್ಮ ಸರ್ಕಾರದ ಸಾಧನೆಗಳ ಪಟ್ಟಿ

ತಮ್ಮ ಸರ್ಕಾರದ ಸಾಧನೆಗಳ ಪಟ್ಟಿ

ತಮ್ಮ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಹೇಳಿದ ಮೋದಿ ಅವರು, ಹಳೆಯ ಸರ್ಕಾರಕ್ಕಿಂತಲೂ ತಮ್ಮ ಸರ್ಕಾರ ಹೇಗೆ ಭಿನ್ನ ಎಂಬುದನ್ನು ಒತ್ತಿ ಒತ್ತಿ ಹೇಳಿದರು. ಜಿಎಸ್‌ಟಿ, ಮುದ್ರಾ ಯೋಜನೆ, ಅಪನಗದೀಕರಣಗಳು ಭಾರಿ ಯಶಸ್ವಿಗೊಂಡಿವೆ ಎಂದ ಅವರು, ಮುದ್ರಾ ಯೋಜನೆ, ಬ್ಯಾಂಕ್ ಖಾತೆಗಳ ಉಲ್ಲೇಖವನ್ನೂ ಮಾಡಿದರು.

ಕಾಂಗ್ರೆಸ್‌ ಮೇಲೆ ಪರೋಕ್ಷ ವಾಗ್ದಾಳಿ

ಕಾಂಗ್ರೆಸ್‌ ಮೇಲೆ ಪರೋಕ್ಷ ವಾಗ್ದಾಳಿ

ತಮ್ಮ ಭಾಷಣದಲ್ಲಿ ಆಗಾಗ ಯುಪಿಎ ಸರ್ಕಾರವನ್ನು ಮೋದಿ ಅವರು ಟೀಕಿಸಿದರು. ಭಾರತದ ಮೂಲಭೂತ ಸೌಕರ್ಯವನ್ನು ಭಾರಿ ವೇಗದಲ್ಲಿ ನಾವು ಬದಲಾಯಿಸುತ್ತಿದ್ದೇವೆ ಎಂದ ಅವರು ನಾವು ಕಳೆದ ವರ್ಷ 10000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದೇವೆ ಆದರೆ ನಮ್ಮ ಹಿಂದಿನ ಸರ್ಕಾರ ಆಮೆ ನಡಿಗೆ ನಡೆಯುತ್ತಿತ್ತು ಎಂದರು. ಮೋದಿ ಅವರು ತಮ್ಮ ಸರ್ಕಾರದ ಸಾಧನೆಗಳ ಪಟ್ಟಿ ನೀಡುತ್ತಲೇ ತಮ್ಮ ಹಿಂದಿನ ಸರ್ಕಾರವನ್ನು ಟೀಕಿಸಿದರು.

ಭಾರತವು ಆರ್ಥಿಕವಾಗಿ ಸಧೃಡವಾಗಿದೆ

ಭಾರತವು ಆರ್ಥಿಕವಾಗಿ ಸಧೃಡವಾಗಿದೆ

ಭಾರತವು ಆರ್ಥಿಕವಾಗಿ ಸದೃಢವಾಗಿದೆ ಎಂದು ಭರವಸೆ ನೀಡಿದ ಮೋದಿ ಅವರು, ನಮ್ಮ ದೇಶವು ಅತಿ ವೇಗವಾಗಿ ಆರ್ಥಿಕವಾಗಿ ಬೆಳೆಯುತ್ತಿರುವ ದೇಶಗಳಲ್ಲೊಂದು ಎಂದು ಹೇಳಿದರು. ಮುದ್ರಾ ಯೋಜನೆ ಮೂಲಕ ಕೋಟ್ಯಂತರ ರೂಪಾಯಿ ಸಾಲ ನೀಡಲಾಗಿದೆ ಇದರಲ್ಲಿ ಮಹಿಳೆಯರ ಪಾಲೇ ಹೆಚ್ಚು. ಅಲ್ಲದೆ ಸ್ಟಾರ್ಟ್‌ಅಪ್‌ ಪ್ರಗತಿಯಲ್ಲಿ ವಿಶ್ವದ ಮೂರನೇ ಸ್ಥಾನದಲ್ಲಿ ಭಾರತ ಇದೆ ಎಂದರು.

English summary
PM Narendra Modi is in Singapore visit. he talked today in a business and community event in Singapore Marina Bay. He talked about his governments achievements and India's relation with Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X