ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಶಿಕ್ಷಣ ನೀತಿ ಹಲವಾರು ಜನರ ಪರಿಶ್ರಮದ ಫಲ: ಮೋದಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: "ರಾಷ್ಟ್ರೀಯ ಶಿಕ್ಷಣ ನೀತಿ -2020ರ ಕೆಲಸಗಳು ಮುಗಿದಿಲ್ಲ. ಅದು ಈಗ ಆರಂಭವಾಗಿದೆ. ಮುಂದಿನ 4 ರಿಂದ 5 ವರ್ಷಗಳ ಕಾಲ ಇದರ ಬಗ್ಗೆ ಕೆಲಸಗಳು ಆಗಬೇಕಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶುಕ್ರವಾರ ಶಿಕ್ಷಣ ಸಚಿವಾಲಯ ಆಯೋಜನೆ ಮಾಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅಡಿಯಲ್ಲಿ '21 ನೇ ಶತಮಾನದಲ್ಲಿ ಶಾಲಾ ಶಿಕ್ಷಣ' ಕುರಿತ ಸಮಾವೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.

ಆತ್ಮ ನಿರ್ಭರ ಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ; ಮೋದಿ ಆತ್ಮ ನಿರ್ಭರ ಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ; ಮೋದಿ

ಶಿಕ್ಷಣ ಸಚಿವಾಲಯ ಶಿಕ್ಷಣ ಪರ್ವದ ಅಂಗವಾಗಿ ಸೆಪ್ಟೆಂಬರ್ 10 ಮತ್ತು 11ರಂದು ಈ ಎರಡು ದಿನಗಳ ಸಮಾವೇಶವನ್ನು ಆಯೋಜಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಮಾವೇಶದಲ್ಲಿ ಪಾಲ್ಗೊಂಡರು.

PM Modi, President Kovind Address NEP 2020 Live: ಶಿಕ್ಷಣ ನೀತಿಯಲ್ಲಿ ಸರ್ಕಾರ ಪ್ರಭಾವ ಕಡಿಮೆ ಇರಬೇಕು : ಮೋದಿPM Modi, President Kovind Address NEP 2020 Live: ಶಿಕ್ಷಣ ನೀತಿಯಲ್ಲಿ ಸರ್ಕಾರ ಪ್ರಭಾವ ಕಡಿಮೆ ಇರಬೇಕು : ಮೋದಿ

Narendra Modi Address Conclave On School Education Under NEP 2020 Highlights

"ವಿವಿಧ ಪಾಲುದಾರರ ಕಠಿಣ ಪರಿಶ್ರಮದ ಕಾರಣದಿಂದಾಗಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿತವಾಗಿದೆ. ನಮ್ಮ ಕೆಲಸ ಇನ್ನು ಪೂರ್ಣಗೊಂಡಿಲ್ಲ. ಮುಂದಿನ 4 ರಿಂದ 5 ವರ್ಷ ಇದರ ಬಗ್ಗೆ ಕೆಲಸ ಮಾಡಬೇಕಿದೆ" ಎಂದು ಕರೆ ನೀಡಿದರು.

ನೂತನ ಶಿಕ್ಷಣ ನೀತಿ ಒಪ್ಪಿದ ಮೊದಲ ರಾಜ್ಯ ಕರ್ನಾಟಕನೂತನ ಶಿಕ್ಷಣ ನೀತಿ ಒಪ್ಪಿದ ಮೊದಲ ರಾಜ್ಯ ಕರ್ನಾಟಕ

ಮೋದಿ ಭಾಷಣದ ಮುಖ್ಯಾಂಶಗಳು

* ಎನ್‌ಇಪಿ 2020 ನಮ್ಮ ಹೊಸ ಭಾರತದ ಕಲ್ಪನೆಗೆ ಪೂರಕವಾಗಿದೆ. ಇದನ್ನು ದೇಶಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದ ಅಗತ್ಯವಿದೆ.

* ಎನ್ಇಪಿ 2020 21ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ. ಇದು ಏಕಾಏಕಿಯಾಗಿ ರೂಪಗೊಂಡಿಲ್ಲ. ನೂರಾರು ಜನರ ಶ್ರಮ, ಭವಿಷ್ಯದ ದೂರದೃಷ್ಟಿಯ ಅಲೋಚನೆಗಳು ಇದರಲ್ಲಿ ಸೇರಿವೆ.

* ಪ್ರೀ-ಸ್ಕೂಲ್ ಮಕ್ಕಳಿಗೆ ಮೊದಲ ಹೆಜ್ಜೆಯಾಗಿದೆ. ಈ ಹಂತದಲ್ಲಿಯೆ ಉತ್ತಮ ಶಿಕ್ಷಕರ ಅಗತ್ಯವಿದೆ. ಆಟದ ಜೊತೆ ಪಾಠ, ಚಟುವಟಿಕೆ ಜೊತೆ ಪಾಠವನ್ನು ಮಕ್ಕಳಿಗೆ ಕಲಿಸಬೇಕಿದೆ.

* ಭಾರತವನ್ನು ಸಮಾನ ಮತ್ತು ಚಲನಶೀಲ ಜ್ಞಾನ ತಾಣವಾಗಿ ಮಾಡುವ ಉದ್ದೇಶವನ್ನು ಶಿಕ್ಷಣ ನೀತಿ ಹೊಂದಿದೆ. ಜಾಗತಿಕ ಮಹಾನ್ ಶಕ್ತಿಶಾಲಿ ರಾಷ್ಟ್ರವಾಗಿ ದೇಶದಲ್ಲಿ ಪರಿವರ್ತಿಸಲು ಇದು ಬುನಾದಿ ಹಾಕಲಿದೆ.

* ಶಾಲಾ ಪಠ್ಯಕ್ರಮ ಎಂದರೆ ಕೇವಲ ಪುಸ್ತಕ, ಪರೀಕ್ಷೆ ಎಂಬ ಆಲೋಚನೆಯನ್ನು ನೂತನ ಶಿಕ್ಷಣ ನೀತಿ ಬದಲಾವಣೆ ಮಾಡಲಿದೆ.

* ಪಠ್ಯಕ್ರಮದ ಚೌಕಟ್ಟು, ಶಿಕ್ಷಕರ ವೃತ್ತಿಪರ ಮಾನದಂಡ, ಮೌಲ್ಯಮಾಪನ ಮುಂತಾದವುಗಳಲ್ಲಿ ಸಮಗ್ರವಾದ ಬದಲಾವಣೆಯನ್ನು ನೂತನ ಶಿಕ್ಷಣ ನೀತಿ ತರಲಿದೆ.

* ಎನ್‌ಇಪಿಯ ವಿವಿಧ ಅಂಶಗಳ ಕುರಿತು ವಿವಿಧ ವೆಬಿನಾರ್‌ಗಳು, ವರ್ಚುವಲ್ ಸಮ್ಮೇಳನಗಳು ಮತ್ತು ಸಮಾವೇಶಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದೆ. ಇಲ್ಲಿ ಬರುವ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗುತ್ತಿದೆ.

English summary
Prime minister of India Narendra Modi addressed conclave on school education under National Education Policy-2020. Here are highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X