ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮೊದಲ ಮನ್‌ ಕೀ ಬಾತ್‌, ನೀರು ಉಳಿಸುವ ಸಂಕಲ್ಪ

|
Google Oneindia Kannada News

ನವದೆಹಲಿ, ಜೂನ್ 30 : 'ಪ್ರತಿ ವರ್ಷ ದೇಶದ ಹಲವು ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಶೇ 8ರಷ್ಟು ನೀರನ್ನು ಮಾತ್ರ ನಾವು ಇಡೀ ವರ್ಷ ಇಂಗಿಸುತ್ತೇವೆ ಎಂಬುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

2019ರ ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಜೂನ್ 30ರ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು 'ಮನ್ ಕೀ ಬಾತ್' ತಿಂಗಳ ರೆಡಿಯೋ ಕಾರ್ಯಕ್ರಮದ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಮೋದಿಯವರ 'ಮನ್ ಕಿ ಬಾತ್ ' ಆಲಿಸುತ್ತಲೇ ಹಸೆಮಣೆ ಏರಿದ ನವಜೋಡಿಮೋದಿಯವರ 'ಮನ್ ಕಿ ಬಾತ್ ' ಆಲಿಸುತ್ತಲೇ ಹಸೆಮಣೆ ಏರಿದ ನವಜೋಡಿ

Narendra Modi 1st Mann Ki Baat after 2019 elections

'ಬಹಳ ದಿನಗಳ ನಂತರ ಮನ್ ಕೀ ಬಾತ್ ಮೂಲಕ ಮಾತನಾಡುತ್ತಿದ್ದೇನೆ. ಕೇದಾರನಾಥಕ್ಕೆ ಭೇಟಿ ನೀಡಿದ ನಾನು ನನ್ನನ್ನು ಕಂಡುಕೊಂಡೆ. ಆದರೆ, ಕೆಲವು ಜನರು ಇದನ್ನು ರಾಜಕೀಯಕ್ಕೆ ಬಳಸಿಕೊಂಡರು' ಎಂದು ಹೇಳಿದರು.

ಮನ್‌-ಕೀ-ಬಾತ್‌ನಲ್ಲಿ ಸೂಲಗಿತ್ತಿ ನರಸಮ್ಮನಿಗೆ ಮೋದಿ ನಮನಮನ್‌-ಕೀ-ಬಾತ್‌ನಲ್ಲಿ ಸೂಲಗಿತ್ತಿ ನರಸಮ್ಮನಿಗೆ ಮೋದಿ ನಮನ

ಮನ್ ಕೀ ಬಾತ್ ಮುಖ್ಯಾಂಶಗಳು

* 'ಬಹಳ ದಿನಗಳ ನಂತರ ಮನ್ ಕೀ ಬಾತ್ ಮೂಲಕ ಮಾತನಾಡುತ್ತಿದ್ದೇನೆ. ಕೇದಾರನಾಥಕ್ಕೆ ಭೇಟಿ ನೀಡಿದ ನಾನು ನನ್ನನ್ನು ಕಂಡುಕೊಂಡೆ. ಆದರೆ, ಕೆಲವು ಜನರು ಇದನ್ನು ರಾಜಕೀಯಕ್ಕೆ ಬಳಸಿಕೊಂಡರು' ಎಂದು ಹೇಳಿದರು.

ಮೋದಿ ಜತೆ ಸಂಸ್ಕೃತದಲ್ಲಿ ಮಾತಾಡಿದ ಬೆಂಗ್ಳೂರಿನ ಹುಡ್ಗಿ ತಂದೆ ಸಂದರ್ಶನಮೋದಿ ಜತೆ ಸಂಸ್ಕೃತದಲ್ಲಿ ಮಾತಾಡಿದ ಬೆಂಗ್ಳೂರಿನ ಹುಡ್ಗಿ ತಂದೆ ಸಂದರ್ಶನ

* ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದಾಗ ಇದು ಕೇವಲ ರಾಜಕೀಯವಾಗಿರಲಿಲ್ಲ. ಈ ವಿರೋಧ ಕೇವಲ ಜೈಲುಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ದೇಶದ ಪ್ರತಿ ಜನರ ಆಕ್ರೋಶ ಇದರಲ್ಲಿ ತುಂಬಿತ್ತು.

* 2019ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ 61 ಕೋಟಿ ಜನರು ಮತದಾನ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ದೊಡ್ಡ ಚುನಾವಣೆ. ಅರುಣಾಚಲಪ್ರದೇಶದಲ್ಲಿ ಕೇವಲ ಒಬ್ಬ ವ್ಯಕ್ತಿಗಾಗಿ ಮತಕೇಂದ್ರವನ್ನು ತೆರೆಯಲಾಗಿತ್ತು.

* ನೀರಿನ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಜಲಶಕ್ತಿ ಎಂಬ ಹೊಸ ಖಾತೆಯನ್ನು ಸ್ಥಾಪಿಸಲಾಗಿದೆ. ನೀರಿನ ಕುರಿತ ವಿಚಾರಗಳಲ್ಲಿ ಈ ಖಾತೆ ತಕ್ಷಣ ತೀರ್ಮಾನಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.

English summary
I undertook Kedarnath journey to meet my inner self. Some people politicized my trip said Prime Minister of India Narendra Modi in the 1st Mann Ki Baat after 2019 elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X