ನೇಮ್ ಎಂಡ್ ಶೇಮ್: ತೆರಿಗೆ ವಂಚಿಸಿದ ಇವ್ರು ಮರ್ಯಾದೆಗೆ ಅಂಜುವರೇ?

Posted By:
Subscribe to Oneindia Kannada

ನವದೆಹಲಿ, ಡಿ 31 (ಪಿಟಿಐ) : ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಹಲವು ಸುತ್ತಿನ ನೋಟೀಸ್ ನೀಡಿದ ನಂತರವೂ ತೆರಿಗೆ ಪಾವತಿಸದ ಸಂಸ್ಥೆಗಳ ಕಚೇರಿಯ ಮುಂದೆ ತಮಟೆ ಭಾರಿಸಿ ತೆರಿಗೆ ವಸೂಲಿ ಮಾಡಿದ ಉದಾಹರಣೆಗಳಿವೆ.

ಇತ್ತ ದೆಹಲಿಯ ಕಚೇರಿಯಿಂದ ತೆರಿಗೆ ವಸೂಲಿಗೆ ಹೊಸ ತಂತ್ರಕ್ಕೆ ಮುಂದಾಗಿರುವ ಕೇಂದ್ರ ಆದಾಯ ತೆರಿಗೆ ಇಲಾಖೆ, ಟ್ಯಾಕ್ಸ್ ಪಾವತಿಸದ ಸಂಸ್ಥೆ/ವ್ಯಕ್ತಿಗಳ ವಿರುದ್ದ 'ನೇಮ್ ಎಂಡ್ ಶೇಮ್'ಎನ್ನುವ ಅಭಿಯಾನವನ್ನು ಆರಂಭಿಸಿದೆ.(2015ರ 10 ಅತಿಕೆಟ್ಟ ಕೆಲಸಗಳು)

ಈ ಅಭಿಯಾನದಲ್ಲಿ ನೊಟೀಸ್ ನೀಡಿ..ನೀಡಿ.. ಕೈಸವೆದುಕೊಂಡರೂ ತೆರಿಗೆ ಪಾವತಿಸದ ಸಂಸ್ಥೆಗಳ ಹೆಸರು, ಪ್ಯಾನ್ ನಂಬರ್, ಅಕೌಂಡ್ ಹೋಲ್ಡರ್ ಹೆಸರು, ಯಾವ ವರ್ಷದಿಂದ ತೆರಿಗೆ ಪಾವತಿ ಬಾಕಿ ಮುಂತಾದ ಮಾಹಿತಿಗಳನ್ನು ತಮ್ಮ ಅಧಿಕೃತ ಅಂತರ್ಜಾಲದಲ್ಲಿ ಪ್ರಕಟಿಸುವ ಮೂಲಕ, ತೆರಿಗೆ ಪಾವತಿ ವಸೂಲಿಗೆ ಇಲಾಖೆ ಗಂಭೀರ ಹೆಜ್ಜೆಯಿನ್ನಿಟ್ಟಿದೆ.

ಆದಾಯ ತೆರಿಗೆ ಇಲಾಖೆ ಪ್ರಕಟಿಸಿದ ಹದಿನೆಂಟು ಡಿಫಾಲ್ಟರ್ ಗಳ ಪಟ್ಟಿಯಲ್ಲಿ ವಜ್ರವೈಢೂರ್ಯ ವ್ಯಾಪಾರೀಗಳೂ ಇದ್ದಾರೆ. ಒಟ್ಟಿನಲ್ಲಿ ಇಂಕಮ್ ಟ್ಯಾಕ್ಸ್/ ಕಾರ್ಪೋರೇಟ್ ಟ್ಯಾಕ್ಸ್ ಮೂಲಕ ಇಲಾಖೆಗೆ ಬರಬೇಕಾಗಿರುವ ಮೊತ್ತ 1,150 ಕೋಟಿ ರೂಪಾಯಿ.

ಪಿಟಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದ ಪ್ರಕಾರ, ವಿಳಾಸ ಪತ್ತೆ ಹಚ್ಚಲಾಗದ/ಆಸ್ತಿ ಮೂಲದ ಕರಾರುವಾಕ್ ದಾಖಲೆವಿಲ್ಲದ ಹದಿನೆಂಟು ತೆರಿಗೆ ಪಾವತಿಸದ ಸಂಸ್ಥೆ/ವ್ಯಕ್ತಿಗಳ ಹೆಸರನ್ನು ಐದು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಒಬ್ಬರಿಂದಲೇ ಬರಬೇಕು ಕೋಟಿ ಕೋಟಿ

ಒಬ್ಬರಿಂದಲೇ ಬರಬೇಕು ಕೋಟಿ ಕೋಟಿ

ಮುಂಬೈ ಮೂಲದ ದಿವಂಗತ ಉದಯ್ ಎಂ ಆಚಾರ್ಯ ಮತ್ತು ಅವರ ವಾರಸುದಾರರಾದ ಅಮುಲ್ ಮತ್ತು ಭಾವನಾ ಆಚಾರ್ಯ ಎನ್ನುವವರಿಂದ ಸರಕಾರಕ್ಕೆ ಸುಮಾರು 779.04 ಕೋಟಿ ರೂಪಾಯಿ ತೆರಿಗೆ ಪಾವತಿ ಬಾಕಿಯಿದೆ.

ನೆಕ್ಸ್ ಸಾಫ್ಟ್ ಇನ್ಫೋಟೆಲ್

ನೆಕ್ಸ್ ಸಾಫ್ಟ್ ಇನ್ಫೋಟೆಲ್

ನೆಕ್ಸ್ ಸಾಫ್ಟ್ ಇನ್ಫೋಟೆಲ್ - 68.21 ಕೋಟಿ ರೂಪಾಯಿ
ಅಹಮದಾಬಾದ್ ಮೂಲದ ಜಗ್ ಹೀತ್ ಎಕ್ಸಪೋರ್ಟರ್ಸ್ - 18.45 ಕೋಟಿ ರೂಪಾಯಿ
ಪ್ರಫುಲ್ ಅಖಾನಿ - 29.11 ಕೋಟಿ ರೂಪಾಯಿ

ಲಿವರ್ ಪೂಲ್ ಇಂಡಿಯಾ

ಲಿವರ್ ಪೂಲ್ ಇಂಡಿಯಾ

ಲಿವರ್ ಫೂಲ್ ಇಂಡಿಯಾ ಪ್ರೈ ಲಿ - 32.16 ಕೋಟಿ ರೂಪಾಯಿ
ಗ್ರೇಟ್ ಮೆಟಲ್ಸ್ ಪ್ರೊಡಕ್ಟ್ಸ್ - 13.01 ಕೋಟಿ ರೂಪಾಯಿ
ಸಾಕ್ಷಿ ಎಕ್ಸ್ಪೋರ್ಟ್ಸ್ - 26.76 ಕೋಟಿ ರೂಪಾಯಿ
ಧಿರೇನ್ ಮೋದಿ - 10.33 ಕೋಟಿ ರೂಪಾಯಿ

ಕಲ್ಯಾಣ್ ಜ್ಯೂವೆಲ್ಸಸ್

ಕಲ್ಯಾಣ್ ಜ್ಯೂವೆಲ್ಸಸ್

ಕಲ್ಯಾಣ್ ಜ್ಯೂವೆಲ್ಸಸ್ ಪ್ರೈ ಲಿ - 16.77 ಕೋಟಿ ರೂಪಾಯಿ
ಧರನೇಂದ್ರ ಓವರ್ಸೀಸ್ - 19.87 ಕೋಟಿ ರೂಪಾಯಿ
ಶ್ರೀಮತಿ ಬಿಮಲಾ ಗುಪ್ತಾ - 13.96 ಕೋಟಿ ರೂಪಾಯಿ
ಘರೀಮಾ ಮೆಷನರಿ - 6.98 ಕೋಟಿ ರೂಪಾಯಿ

ಪಟ್ಟಿಯಲ್ಲಿರುವ ಇತರ ನಾಲ್ವರು

ಪಟ್ಟಿಯಲ್ಲಿರುವ ಇತರ ನಾಲ್ವರು

ಹೇಮಂಗ್ ಶಾ - 22.51 ಕೋಟಿ ರೂಪಾಯಿ
ಯೂಸಫ್ ಮೋಟರ್ವಾಲಾ - 22.34 ಕೋಟಿ ರೂಪಾಯಿ
ವೀನಸ್ ರೆಮಿಡೀಸ್ - 15.25 ಕೋಟಿ ರೂಪಾಯಿ
ಜಶೂಭಾಯಿ ಜ್ಯೂವೆಲ್ಲರ್ಸ್ - 32.13 ಕೋಟಿ ರೂಪಾಯಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Stepping up its 'name and shame' campaign, Income Tax department made public list of 18 tax defaulters including gold and diamond traders whose dues totaled around Rs 1,150 crore.
Please Wait while comments are loading...