ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮಸ್ತೆ ಟ್ರಂಪ್': ಅಮೆರಿಕಾ ಅಧ್ಯಕ್ಷರಿಗೆ ಖುಷಿ, ಭರವಸೆಗಳು ಹುಸಿ

|
Google Oneindia Kannada News

ನವದೆಹಲಿ, ಫೆಬ್ರವರಿ.21: ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಫೆಬ್ರವರಿ.24 ಮತ್ತು 25ರಂದು ನವದೆಹಲಿ ಮತ್ತು ಅಹ್ಮದಾಬಾದ್ ಗೆ ಭೇಟಿ ನೀಡಲಿರುವ ಟ್ರಂಪ್ ಸ್ವಾಗತಕ್ಕೆ ಎಲ್ಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.

Recommended Video

TrumpInIndia:Donald Trump's Monday program timeline | IndiaWelcomesTrump | NamasteyTrump

'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ 70 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದೆ ಎನ್ನಲಾಗಿದೆ. ಆದರೆ, ಈ ಸಂಖ್ಯೆಯು ಅಹ್ಮದಾಬಾದ್ ಜನಸಂಖ್ಯೆಯ ಶೇ.80ರಷ್ಟು ಎಂದು ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟ್ರಂಪ್ ಭೇಟಿ: ಮೂರು ಗಂಟೆ ಭದ್ರತೆಗೆ 80 ಕೋಟಿ ಖರ್ಚುಟ್ರಂಪ್ ಭೇಟಿ: ಮೂರು ಗಂಟೆ ಭದ್ರತೆಗೆ 80 ಕೋಟಿ ಖರ್ಚು

ಬೃಹತ್ ರೋಡ್ ಶೋ ಬಳಿಕ ಅಹ್ಮದಾಬಾದ್ ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಉಭಯ ನಾಯಕರು ಉದ್ಘಾಟನೆ ಮಾಡಲಿದ್ದಾರೆ. ಈ ಬೃಹತ್ ಕ್ರೀಡಾಂಗಣದಲ್ಲಿಯೇ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ಕೇವಲ ಅಮೆರಿಕಾ ಅಧ್ಯಕ್ಷರನ್ನು ಖುಷಿ ಪಡಿಸುವ ವೇದಿಕೆಯಾಗುತ್ತೆಯಾ ಎಂಬ ಅನುಮಾನವನ್ನು ಹುಟ್ಟು ಹಾಕುತ್ತಿದೆ.

ಕ್ರೀಡಾಂಗಣದಲ್ಲಿ ನೆರೆದ ಜನರ ನಿರೀಕ್ಷೆಗಳೆಲ್ಲ ಹುಸಿ?

ಕ್ರೀಡಾಂಗಣದಲ್ಲಿ ನೆರೆದ ಜನರ ನಿರೀಕ್ಷೆಗಳೆಲ್ಲ ಹುಸಿ?

ಅಹ್ಮದಾಬಾದ್ ನ ನೂತನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಸುಮಾರು 1.25 ಲಕ್ಷ ಜನರು ನೆರೆಯುವ ನಿರೀಕ್ಷೆಯಿದೆ. ಲಕ್ಷ ಲಕ್ಷ ಜನರನ್ನು ಒಂದು ಕಡೆ ಸೇರಿಸುವುದಕ್ಕಾಗಿ ಕೇಂದ್ರ ಸರ್ಕಾರವು ಶ್ರಮ ವಹಿಸಿದೆ. ಇಷ್ಟೆಲ್ಲ ಆದರೂ ಭಾರತದ ಪಾಲಿಗೆ ಈ ಬಾರಿ ಅಮೆರಿಕಾ ಅಧ್ಯಕ್ಷರ ಭೇಟಿಯು ಯಾವುದೇ ನಿರೀಕ್ಷೆಗಳನ್ನು ಹುಟ್ಟು ಹಾಕಿಲ್ಲ.

ಇದೇ ನಮಸ್ತೆ ಟ್ರಂಪ್ ಕಾರ್ಯಕ್ರಮದ ಹಿಂದಿನ ಸೀಕ್ರೆಟ್?

ಇದೇ ನಮಸ್ತೆ ಟ್ರಂಪ್ ಕಾರ್ಯಕ್ರಮದ ಹಿಂದಿನ ಸೀಕ್ರೆಟ್?

ಕಳೆದ ವರ್ಷ ಅಮೆರಿಕಾದ ಹ್ಯೂಸ್ಟನ್ ನಲ್ಲಿ ಹೌಡಿ ಮೋದಿ ಎಂಬ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿ ಕೊಡಲಾಗಿತ್ತು. ಇಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದ್ದರು. ಅಂಥದ್ದೇ ಉದ್ದೇಶವನ್ನು ಇಟ್ಟುಕೊಂಡು ನಮಸ್ತೆ ಟ್ರಂಪ್ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದು ಕೇವಲ ಅಮೆರಿಕಾ ಅಧ್ಯಕ್ಷರನ್ನು ಮೆಚ್ಚಿಸುವ ಕಾರ್ಯಕ್ರಮವಾಗುತ್ತದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಲ್ಲ ಉಭಯ ನಾಯಕರು

ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಲ್ಲ ಉಭಯ ನಾಯಕರು

ಎರಡು ದಿನಗಳ ಭಾರತ ಭೇಟಿ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಯಾವುದೇ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬುಧವಾರವಷ್ಟೇ ಪ್ರತಿಕ್ರಿಯೆ ನೀಡಿದ್ದ ಟ್ರಂಪ್, ಭಾರತದ ಜೊತೆಗೆ ಬೃಹತ್ ಒಡಂಬಡಿಕೆ ಮತ್ತು ವಾಣಿಜ್ಯ ಸಂಬಂಧ ಹೊಂದಲು ಅಮೆರಿಕಾ ಬಯಸುತ್ತದೆ. ಆದರೆ, ಸದ್ಯಕ್ಕೆ ಈ ಒಡಂಬಡಿಕೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಹೇಳಿದ್ದರು. ಆ ಮೂಲಕ ತಮ್ಮ ಭಾರತ ಭೇಟಿ ಸಂದರ್ಭದಲ್ಲಿ ಯಾವುದೇ ಒಡಂಬಡಿಕೆಗೆ ಅಂಕಿತ ಹಾಕುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದರು.

ಪ್ರಧಾನಿ ಬಗ್ಗೆ ಡೊನಾಲ್ಡ್ ಟ್ರಂಪ್ ಮೆಚ್ಚುಗೆಯ ಮಾತು

ಪ್ರಧಾನಿ ಬಗ್ಗೆ ಡೊನಾಲ್ಡ್ ಟ್ರಂಪ್ ಮೆಚ್ಚುಗೆಯ ಮಾತು

ಈ ಮೊದಲು ಭಾರತವು ಅಮೆರಿಕಾದ ಜೊತೆ ಅಷ್ಟಾಗಿ ಉತ್ತಮ ಬಾಂಧವ್ಯವನ್ನು ಹೊಂದಿರಲಿಲ್ಲ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಎರಡು ದೇಶಗಳ ನಡುವಿನ ಬಾಂಧವ್ಯ ವೃದ್ಧಿಸಿದೆ ಎಂದು ಡೊನೊಲ್ಡ್ ಟ್ರಂಪ್, ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದರು.

ಭಾರತಕ್ಕೆ ಆಘಾತ ನೀಡಿದ ಅಮೆರಿಕಾದ ನಿರ್ಧಾರ

ಭಾರತಕ್ಕೆ ಆಘಾತ ನೀಡಿದ ಅಮೆರಿಕಾದ ನಿರ್ಧಾರ

ವಾಣಿಜ್ಯ ಮತ್ತು ವ್ಯಾಪಾರ ನಿಯಮಗಳನ್ನು ನೋಡಿದಾಗ ಭಾರತವನ್ನು ಇನ್ನು ಮುಂದೆ ಅಭಿವೃದ್ಧಿಶೀಲ ರಾಷ್ಟ್ರ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಅಮೆರಿಕಾ ಘೋಷಣೆ ಹೊರಡಿಸಿತ್ತು. ಇದರಿಂದ ಭಾರತೀಯ ರಫ್ತುದಾರರಿಗೆ ಆಘಾತ ಉಂಟಾಗಿದ್ದು, ಟ್ರಂಪ್ ಭೇಟಿ ಸಂದರ್ಭದಲ್ಲಿ ಇದಕ್ಕೊಂದು ಪರಿಹಾರ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ನಿರೀಕ್ಷೆಯೂ ಕೂಡಾ ಹುಸಿಯಾಗಿದೆ.

ಉಭಯ ರಾಷ್ಟ್ರ ನಡುವಿನ ಅಣು ಒಪ್ಪಂದದ ಬಗ್ಗೆ ಉಲ್ಲೇಖ

ಉಭಯ ರಾಷ್ಟ್ರ ನಡುವಿನ ಅಣು ಒಪ್ಪಂದದ ಬಗ್ಗೆ ಉಲ್ಲೇಖ

ಈ ಹಿಂದಿನ ಅಮೆರಿಕಾ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಹಾಗೂ ಮಾಜಿ ಪ್ರಧಾನಮಂತ್ರಿ ಮನಮನೋಹನ್ ಸಿಂಗ್ ಪರಮಾಣು ಒಪ್ಪಂದಕ್ಕೆ ಅಂಕಿತ ಹಾಕಿದ್ದರು. ಅಲ್ಲಿಂದ ಇಲ್ಲಿಯವರೆಗೂ ಬಹಳಷ್ಟು ಬದಲಾವಣೆ ಆಗಿವೆ. ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಆಶಾವಾದವನ್ನು ಹುಟ್ಟು ಹಾಕುವಂತಾ ಚರ್ಚೆ ಈವರೆಗೂ ನಡೆದಿಲ್ಲ ಎಂಬುದು ನಿರಾಶಾದಾಯಕವಾಗಿದೆ. ಸುಮ್ಮನೆ ಬಂದು ಹೋಗುವ ಬದಲು ಟ್ರಂಪ್, ಈ ಬಗ್ಗೆ ಭಾರತಕ್ಕೆ ಸಿಹಿಸುದ್ದಿಯನ್ನು ಹೊತ್ತುಕೊಂಡು ಬರಲಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕಾ ಪಾಲಿಗೆ ಲಾಭದಾಯಕ ಸಂಬಂಧವಷ್ಟೇ ಲೆಕ್ಕ

ಅಮೆರಿಕಾ ಪಾಲಿಗೆ ಲಾಭದಾಯಕ ಸಂಬಂಧವಷ್ಟೇ ಲೆಕ್ಕ

ಭಾರತದ ಜೊತೆ ವಾಣಿಜ್ಯ ಸಂಬಂಧ ಅಭಿವೃದ್ಧಿಗೆ ಅಮೆರಿಕಾ ಅಧ್ಯಕ್ಷರು ಸದ್ಯಕ್ಕೆ ಮನಸ್ಸು ಮಾಡುವುದು ಸಂದೇಹವನ್ನು ಹುಟ್ಟಿಸಿದೆ. ಒಂದು ವೇಳೆ ಭಾರತವು ಅಮೆರಿಕಾ ಜೊತೆಗೆ ಲಾಭದಾಯಕ ವ್ಯಾಪಾರಕ್ಕೆ ಮುಂದಾದರೆ, ಭಾರತಕ್ಕಿಂತ ಹೆಚ್ಚು ಲಾಭ ಗಳಿಸುವ ನಿಟ್ಟಿನಲ್ಲಿಯೇ ಅಮೆರಿಕಾ ಯೋಚಿಸುತ್ತದೆ. ಆ ನಿಟ್ಟಿನಲ್ಲಿಯೇ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿರುತ್ತದೆ ಎಂದು ವರದಿಯಾಗಿದೆ.

English summary
Namaste Trump: Two Day Visit America President To India. This Time Donald Trump Doubt To Sign Any Big Deal With India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X