ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗ್ಪುರದಲ್ಲಿ ಕನ್ಹಯ್ಯಾ ಕುಮಾರ್ ಮೇಲೆ ಚಪ್ಪಲಿ ಎಸೆತ

|
Google Oneindia Kannada News

ನಾಗ್ಪುರ, ಏಪ್ರಿಲ್, 14: ದೇಶದ್ರೋಹದ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ದೆಹಲಿ ಜವಾಹರಲಾಲ್ ವಿವಿ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯ ಕುಮಾರ್ ಮೇಲೆ ಚಪ್ಪಲಿ ಶೂಗಳನ್ನು ಎಸೆಯಲಾಗಿದೆ.

ಹಿಂದೂ ಸಂಘಟನೆಗಳ ಭದ್ರಕೋಟೆಯಾದ ನಾಗ್ಪುರದಲ್ಲಿ ಕನ್ಹಯ್ಯಾ ಕುಮಾರ್ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಚಪ್ಪಲಿ ಎಸೆಯಲು ಆರಂಭ ಮಾಡಿದ್ದಾರೆ. [ಉಪನ್ಯಾಸಕರ ಪ್ರತಿಭಟನೆ: ಎಂಎಲ್ಸಿಗಳ ಮೇಲೆ ತೂರಿಬಂದ ಚಪ್ಪಲಿ]

jawaharlal nehru universit

ಆದದ್ದೇನು? ಕನ್ಹಯ್ಯಾಕುಮಾರ್ ವೇದಿಕೆಗೆ ಬರುತ್ತಿದ್ದಂತೆಯೇ ಕೆಲವರು ಶೂ ಮತ್ತು ಚಪ್ಪಲಿಗಳನ್ನು ಅವರತ್ತ ಎಸೆದು ಘೋಷಣೆ ಕೂಗಲು ಆರಂಭಿಸಿದರು. 'ಚಪ್ಪಲಿ ಎಸೆಯುವುದು ಎಂಥ ದೇಶ ಪ್ರೇಮ ಎಂದು ಕನ್ಹಯ್ಯಾ ಪ್ರಶ್ನೆ ಮಾಡಿದರು.[ಅರವಿಂದ್ ಕೇಜ್ರಿವಾಲ್ ಮೇಲೆ ತೂರಿಬಂತು ಶೂ]

ಕನ್ಹಯ್ಯಾ ಕುಮಾರ್ ನಾಗ್ಪುರಕ್ಕೆ ಆಗಮಿಸುತ್ತಿದ್ದಂತೆಯೇ ಅವರ ಕಾರಿನ ಮೇಲೆ ಬಜರಂಗದಳ ಕಾರ್ಯಕರ್ತರೆಂದು ಹೇಳಿಕೊಂಡಿದ್ದವರು ದಾಳಿ ಮಾಡಿದ ಬಗ್ಗೆಯೂ ವರದಿ ಬಂದಿತ್ತು.

ಶೂ, ಚಪ್ಪಲಿಗಳನ್ನು ಸಭೆ ಮಧ್ಯೆ ಎಸೆಯುವುದು ದಿನೇ ದಿನೇ ಹೆಚ್ಚಿಕೊಳ್ಳುತ್ತಿದೆ. ಅರವಿಂದ್ ಕೇಜ್ರಿವಾಲ್ ಮೇಲೆ ಶೂ ಎಸೆಯಲಾಗಿತ್ತು. ಪಿಯು ಉಪನ್ಯಾಸಕರ ಪ್ರತಿಭಟನೆಗೆ ತೆರಳಿದ ಕರ್ನಾಟಕದ ವಿಧಾನ ಪರಿಷತ್ ಸದಸ್ಯರ ಮೇಲೂ ಚಪ್ಪಲಿಗಳು ತೂರಿಬಂದಿದ್ದವು.

English summary
Jawaharlal Nehru University Students Union (JNUSU) leader Kanhaiya Kumar on Thursday faced protest, his car attacked as he arrived in Nagpur to address a gathering. Bajrang Dal activists reportedly attacked Kanhaiya's convoy as he arrived in the RSS bastion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X