ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡಿನ ದಾಳಿಯಲ್ಲಿ ಗ್ರಾಮಸ್ಥರು ಸಾವು: 'ಗೃಹ ಸಚಿವಾಲಯ ಏನು ಮಾಡುತ್ತಿದೆ' ಎಂದ ರಾಹುಲ್‌

|
Google Oneindia Kannada News

ಕೋಹಿಮಾ, ಡಿಸೆಂಬರ್‌ 05: ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದ್ದು, ಸುಮಾರು 13 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರದವ ವಿರುದ್ಧ, ಕೇಂದ್ರ ಗೃಹ ಸಚಿವಾಲಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, "ಕೇಂದ್ರ ಸರ್ಕಾರವು ಈ ಬಗ್ಗೆ ಸರಿಯಾದ ಪ್ರತಿಕ್ರಿಯೆಯನ್ನು ನೀಡಬೇಕು. ಕೇಂದ್ರ ಗೃಹ ಸಚಿವಾಲಯ ಏನು ಮಾಡುತ್ತಿದೆ," ಎಂದು ಪ್ರಶ್ನಿಸಿದ್ದಾರೆ.

ನಾಗಾಲ್ಯಾಂಡ್; ಗುಂಡಿನ ದಾಳಿಯಲ್ಲಿ ಹಲವು ಗ್ರಾಮಸ್ಥರು ಸಾವು ನಾಗಾಲ್ಯಾಂಡ್; ಗುಂಡಿನ ದಾಳಿಯಲ್ಲಿ ಹಲವು ಗ್ರಾಮಸ್ಥರು ಸಾವು

"ಈ ಘಟನೆಯು ಹೃದಯವಿದ್ರಾವಕ ಘಟನೆ. ಭಾರತ ಸರ್ಕಾರವು ನಿಜವಾದ ಪ್ರತಿಕ್ರಿಯೆಯನ್ನು ನೀಡಬೇಕು. ನಮ್ಮ ಭೂಮಿಯನ್ನು ಭದ್ರತಾ ಸಿಬ್ಬಂದಿಗಳು ಆಗಲಿ ನಾಗರಿಕರು ಆಗಲಿ ಸುರಕ್ಷಿತವಾಗಿ ಇರದ ಈ ಸಂದರ್ಭದಲ್ಲಿ ಗೃಹ ಸಚಿವಾಲಯವು ಏನು ಮಾಡುತ್ತಿದೆ," ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಪ್ರಶ್ನೆ ಮಾಡಿದ್ದಾರೆ.

Nagaland civilians killed: What is home ministry doing, asks Rahul Gandhi

ನಿಜ ಶೀಘ್ರವೇ ಬಯಲಾಗಲಿ

ಇನ್ನು ಲೋಕ ಸಭಾ ಸಂಸದ ಗೌರವ್‌ ಗೋಗಾಯಿ ಟ್ವೀಟ್‌ ಮಾಡಿ ಈ ಘಟನೆಯನ್ನು ಖಂಡನೆ ಮಾಡಿದ್ದಾರೆ. "ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ನಾಗರಿಕರು ಗುಂಡೇಟಿಗೆ ಬಲಿಯಾಗಿದ್ದಾರೆ ಎಂಬ ವಿಚಾರ ಕೇಳಿ ಬಹಳ ಬೇಸರವಾಗಿದೆ ಹಾಗೂ ಮನಸ್ಸಿಗೆ ನೋವುಂಟಾಗಿದೆ. ಮೃತ ಪಟ್ಟವರ ಕುಟುಂಬಕ್ಕೆ ನನ್ನ ಸಂತಾಪಗಳು. ತಡ ಮಾಡದೆಯೇ ಈ ಗುಂಡಿನ ದಾಳಿಗೆ ನಿಜವಾದ ಕಾರಣವೂ ಶೀಘ್ರವೇ ಬಯಲಾಗಬೇಕು," ಎಂದು ಆಗ್ರಹ ಮಾಡಿದ್ದಾರೆ.

ಅಧಿವೇಶನದಲ್ಲಿ ನಾಗಾಲ್ಯಾಂಡ್ ವಿಚಾರ ಗದ್ದಲ ಸೃಷ್ಟಿಸುವ ಸಾಧ್ಯತೆ

ಪ್ರಸ್ತುತ ವಿಧಾನಸಭೆಯ ಚಳಿಗಾಲ ಅಧಿವೇಶನವು ನಡೆಯುತ್ತಿದೆ. ಸೋಮವಾರ ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಸಾವು ಸಂಬಂಧಿತ ವಿಚಾರವು ಹೆಚ್ಚು ಗದ್ದಲ ಸೃಷ್ಟಿ ಮಾಡುವ ಸಾಧ್ಯತೆಗಳು ಇದೆ. ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ಎಲ್ಲಾ ವಿರೋಧ ಪಕ್ಷಗಳು ಜೊತೆಯಾಗಿ ಹಲವಾರು ವಿಚಾರಗಳನ್ನು ಮುಂದಿಟ್ಟು ವಾಗ್ದಾಳಿ ನಡೆಸುತ್ತಿದೆ. ಈಗ ವಿರೋಧ ಪಕ್ಷಗಳು ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆ ವಿಚಾರವನ್ನು ಮುಂದಿಟ್ಟು ಚರ್ಚೆಗೆ ಮುಂದಾಗುವ ಸಾಧ್ಯತೆಗಳು ಇದೆ. ಇನ್ನು ಅಷ್ಟು ಮಾತ್ರವಲ್ಲದೇ ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್‌, ಮಣಿಪುರ, ಗೋವಾ, ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದೆ. ಈ ವಿಚಾರವನ್ನು ಕೂಡಾ ವಿರೋಧ ಪಕ್ಷಗಳು ಮುನ್ನಲೆಗೆ ತಂದು ಪ್ರಚಾರ ನಡೆಸುವ ಸಾಧ್ಯತೆಗಳು ಇದೆ.

ಮಿಜೋರಾಂ ವಿವಾದದ ನಡುವೆ ನಾಗಾಲ್ಯಾಂಡ್‌ ಜೊತೆಗಿನ ಗಡಿ ವಿವಾದಕ್ಕೆ ಅಂತ್ಯ ಹಾಡಿದ ಅಸ್ಸಾಂಮಿಜೋರಾಂ ವಿವಾದದ ನಡುವೆ ನಾಗಾಲ್ಯಾಂಡ್‌ ಜೊತೆಗಿನ ಗಡಿ ವಿವಾದಕ್ಕೆ ಅಂತ್ಯ ಹಾಡಿದ ಅಸ್ಸಾಂ

ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ. ಒಬ್ಬ ಯೋಧ ಸೇರಿದಂತೆ ಹಲವು ಗ್ರಾಮಸ್ಥರು ಮೃತಪಟ್ಟಿದ್ದಾರೆ. ಶನಿವಾರ ತಡರಾತ್ರಿ ಈ ಗುಂಡಿನ ದಾಳಿ ನಡೆಸಿದೆ. ಘಟನಾ ಸ್ಥಳದಿಂದ ಮೊದಲು 6 ಶವಗಳು ಪತ್ತೆಯಾಗಿದ್ದು, ಈಗ ಮೃತ ನಾಗರಿಕರ ಸಂಖ್ಯೆ 13 ಕ್ಕೆ ಏರಿಕೆ ಆಗಿದೆ. ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಓಟಿಂಗ್ ಗ್ರಾಮದ ಹಲವು ಜನರ ಗುಂಪು ಪಿಕಪ್ ವಾಹನದಲ್ಲಿ ಮನೆಗೆ ಮರಳುವಾಗ ಗುಂಡಿನ ದಾಳಿ ನಡೆದಿದೆ. ಈ ದಾಳಿಯಿಂದ ಆಕ್ರೋಶಗೊಂಡ ಸ್ಥಳೀಯರು ಸೇನೆಯ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ, "ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ರಾಜ್ಯ ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಎಸ್‌ಐಟಿಯು ಈ ಘಟನೆಯನ್ನು ಕೂಲಂಕಷವಾಗಿ ತನಿಖೆ ನಡೆಸಿ ದುಃಖಿತ ಕುಟುಂಬಗಳಿಗೆ ನ್ಯಾಯವನ್ನು ದೊರಕಿಸಿಕೊಡಲಿದೆ," ಎಂದು ಹೇಳಿದ್ದಾರೆ.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

English summary
Nagaland civilians killed: What is home ministry doing, asks Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X