ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE: ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ: ಇಂದು ಫಲಿತಾಂಶ

|
Google Oneindia Kannada News

ಕೊಹಿಮಾ, ಮಾರ್ಚ್ 03: ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು(ಮಾರ್ಚ್ 03) ಹೊರಬೀಳಲಿದ್ದು, ಮೂರೂ ರಾಜ್ಯಗಳಲ್ಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫೆಬ್ರವರಿ 27 ರಂದು ನಡೆದಿದ್ದು, ಇಲ್ಲಿನ ಒಟ್ಟು 60 ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳ ಫಲಿತಾಂಶ ಇಂದು ಹೊರಬೀಳಲಿದೆ.

ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ

ನ್ಯಾಶ್ನಲಿಸ್ಟ್ ಡೆಮಾಕ್ರೆಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿಯ(ಎನ್ ಡಿಪಿಪಿ) ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ನೈಫಿಯು ರಿಯೊ ಅವರ ಎದುರಾಳಿ ನಾಮಪತ್ರವನ್ನು ಹಿಂಪಡೆದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಕೇವಲ 59 ಕ್ಷೇತ್ರಗಳ ಫಲಿತಾಂಶ ಮಾತ್ರ ಇಂದು ಹೊರಬೀಳಲಿದೆ.

Nagaland assembly elections results 2018 Live updates

ನಾಗಾಲ್ಯಾಂಡ್ ಚುನಾವಣೋತ್ತರ ಸಮೀಕ್ಷೆ ಹೇಳುವ ಪ್ರಕಾರ ಇಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಎನ್ ಡಿಪಿಪಿ ಜೊತೆ ಬಿಜೆಪಿ ಮೈತ್ರಿ ಬೆಳೆಸಿರುವುದರಿಂದ ಇಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಾಗಲಿದೆ. ಆದರೆ ಸಮೀಕ್ಷೆಗಳು ಬುಡಮೇಲಾಗುವ ಉದಾಹರಣೆಗಳನ್ನೂ ನಾವು ಕಂಡಿರುವುದರಿಂದ ಫಲಿತಾಂಶ ಬಂದಮೇಲೆಯೇ ಅಸಲಿ ಸ್ಥಿತಿ ಅರ್ಥವಾಗಲಿದೆ.

ನಾಗಾಲ್ಯಾಂಡ್ ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಇಲ್ಲಿ ನೀಡಲಿದೆ.

Newest FirstOldest First
3:44 PM, 3 Mar

ಎನ್ ಡಿಪಿಪಿ ಮತ್ತು ಬಿಜೆಪಿ ಮತ್ರಿಕೂಟ ಸದ್ಯಕ್ಕೆ 30 ಸ್ಥಾನ ಹೆದ್ದಿದ್ದರೆ, ಎನ್ ಪಿಎಫ್ 25 ಸ್ಥಾನ ಗೆದಿದ್ದೆ.
3:19 PM, 3 Mar

ನಾಗಾಲ್ಯಾಂಡ್ ನಲ್ಲಿ ಮತದಾನಕ್ಕೂ ಮುನ್ನವೇ ಜಯಶಾಲಿ ಎಂದು ಘೋಷಿತರಾದ ನೈಫಿಯು ರಿಯೋ ಅವರು ಎನ್ ಡಿಪಿಪಿ(ನ್ಯಾಶ್ನಲ್ ಡೆಮಾಕ್ರೆಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ) ಮತ್ತು ಬಿಜೆಪಿ (ಭಾರತೀಯ ಜನತಾ ಪಾರ್ಟಿ) ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
11:53 AM, 3 Mar

'ತ್ರಿಪುರದಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿದೆ. ಈ ವಿಜಯಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿಜೆಪಿಯ ಎಲ್ಲಾ ಕಾರ್ಯಕರ್ತರನ್ನೂ ಅಭಿನಂದಿಸುತ್ತೇನೆ. ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲೂ ನಮ್ಮ ಪ್ರದರ್ಶನ ಐತಿಹಾಸಿಕವಾಗಿದೆ. ಇದು ಭಾರತೀಯ ರಾಜಕೀಯದಲ್ಲಿ ಬಹಳ ಮಹತ್ವದ ದಿನ'- ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
10:44 AM, 3 Mar

ಎನ್ ಪಿಎಫ್ 6, ಬಿಜೆಪಿ-ಎನ್ ಡಿಪಿಪಿ 7, ಕಾಂಗ್ರೆಸ್ 1 ಮತ್ತು ಇತರರು 3 ಸ್ಥಾನಗಳಲ್ಲಿ ಮುನ್ನಡೆ.
9:46 AM, 3 Mar

'ಸದ್ಯಕ್ಕೆ ತ್ರಿಪುರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ನಾಗಅಲ್ಯಾಂಡ್ ನಲ್ಲೂ ನಮ್ಮ ಮೈತ್ರಿಕೂಟ ಉತ್ತಮ ಮುನ್ನಡೆ ಪಡೆಯುತ್ತಿದೆ. ಮೇಘಾಲಯದಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗುತ್ತಿದೆ. ಈಶಾನ್ಯ ಮೂರು ರಾಜ್ಯಗಳ ಫಲಿತಾಂಶ ಬಿಜೆಪಿ ಪಾಲಿಗೆ ವರದಾನವಾಗಲಿದೆ'- ಬಿಜೆಪಿ ಮುಖಂಡ ರಾಮ್ ಮಾಧವ್
9:38 AM, 3 Mar

ನಾಗಾ ಪೀಪಲ್ಸ್ ಫ್ರಂಟ್(ಎನ್ ಪಿಎಫ್) 4 ಕ್ಷೇತ್ರಗಳಲ್ಲಿ, ಬಿಜೆಪಿ-ಎನ್ ಡಿಪಿಪಿ ಮೂರು ಕ್ಷೇತ್ರಗಳಲ್ಲಿ ಮುನ್ನಡೆ
8:42 AM, 3 Mar

ಮತ ಎಣಿಕೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿರುವುದರಿಂದ ಅಗತ್ಯಕ್ಕಿಂತ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
Advertisement
8:38 AM, 3 Mar

ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಪಡೆದಿದೆ.
7:50 AM, 3 Mar

ಉತ್ತರ ಅಂಗಾಮಿ 2 ಕ್ಷೇತ್ರದ ಎನ್ ಡಿಡಿಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ನೈಫಿಯು ರಿಯೋ ಅವರ ಎದುರಾಳಿ ಅಭ್ಯರ್ಥಿ ನಾಮಪತ್ರ ಹಿಂಪಡೆದ ಕಾರಣ ಅವರನ್ನು ಚುನಾವಣೆಗೂ ಮುನ್ನವೇ ಜಯಶಾಲಿ ಎಂದು ಘೋಷಿಸಲಾಗಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಮತದಾನ ನಡೆದಿರಲಿಲ್ಲ.
7:27 AM, 3 Mar

ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿರುವ ಮತಎಣಿಕೆ. ಎಲ್ಲೆಡೆ ಬಿಗಿ ಬಂದೋಬಸ್ತ್

English summary
Nagaland, one of the 7 north eastern states assembly elections results will be out today. Total constituencies 60. The voting bigins from 8 am on March 3rd. Elections was held on Feb 27th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X