ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋನ್ ಕಾಲ್ ಸ್ವೀಕರಿಸಲು, ಹಾಡು ಕೇಳಲು ಈ ಮಾಸ್ಕ್ ಸಾಕು!

|
Google Oneindia Kannada News

ನವದೆಹಲಿ, ಸಪ್ಟೆಂಬರ್.24: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸುವಂತಾ ಅನಿವಾರ್ಯತೆ ಸೃಷ್ಟಿಸಿದೆ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಮಾಸ್ಕ್ ಧರಿಸುವುದರ ಹಿಂದಿನ ಅನಿವಾರ್ಯತೆಯನ್ನು ಅರಿತು ಎನ್-95 ಮಾಸ್ಕ್ ಗಳನ್ನು ನವೀಕೃತಗೊಳಿಸಲಾಗುತ್ತಿದೆ. ಮೈಕ್ರೋಫೋನ್ ಗಳನ್ನು ಅಳವಡಿಸಿರುವ ವಿನೂತನ ಮಾಸ್ಕ್ ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ.

ಭಾರತದಲ್ಲಿ 24 ಗಂಟೆಗಳಲ್ಲೇ 86508 ಜನರಿಗೆ ಕೊವಿಡ್-19 ಪಾಸಿಟಿವ್ಭಾರತದಲ್ಲಿ 24 ಗಂಟೆಗಳಲ್ಲೇ 86508 ಜನರಿಗೆ ಕೊವಿಡ್-19 ಪಾಸಿಟಿವ್

ಹೊಸ ತಂತ್ರಜ್ಞಾನದ ಎನ್-95 ಮಾಸ್ಕ್ ಗಳನ್ನು ತಾಂತ್ರಿಕ ಕಂಪನಿಗಳು ಆವಿಷ್ಕರಿಸುತ್ತಿವೆ. ಮುಖಕ್ಕೆ ಧರಿಸುವ ಮಾಸ್ಕ್ ಗಳಲ್ಲೇ ಹೊಸತಾಗಿ ಮೈಕ್ರೋಫೋನ್ ಮತ್ತು ಇಯರ್ ಫೋನ್ ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಹಾಡುಗಳನ್ನು ಕೇಳುವುದಕ್ಕೆ ಮತ್ತು ದೂರವಾಣಿ ಕರೆಗಳನ್ನು ಸ್ವೀಕರಿಸುವುದಕ್ಕೆ ಸಹಕಾರಿಯಾಗಲಿದೆ.

ದೇಶದ ಮಾರುಕಟ್ಟೆಯಲ್ಲಿ 'ಮಾಸ್ಕ್ ಫೋನ್' ಪ್ರವೇಶ

ದೇಶದ ಮಾರುಕಟ್ಟೆಯಲ್ಲಿ 'ಮಾಸ್ಕ್ ಫೋನ್' ಪ್ರವೇಶ

ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಮನೆಗಳಿಂದ ಹೊರ ಹೋಗುವಾಗ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಅಗತ್ಯವಾಗಿದೆ. ಇದರ ಜೊತೆಗೆ ಮಾಸ್ಕ್ ಗೆ ಹೊಂದಿಕೊಂಡಂತೆ ಇರುವ 'ಮಾಸ್ಕ್ ಫೋನ್' ಧರಿಸುವುದರಿಂದ ಸಾಮಾನ್ಯವಾಗಿ ಪ್ರಯಾಣಿಸುವಾಗಲೂ ಸಂಗೀತವನ್ನು ಆಲಿಸುವುದು ಮತ್ತು ದೂರವಾಣಿ ಕರೆಗಳನ್ನು ಸ್ವೀಕರಿಸುವುದಕ್ಕೆ ಸಹಕಾರಿಯಾಗಲಿದೆ. ಇದರಿಂದ ಪ್ರತ್ಯೇಕವಾಗಿ ಇಯರ್ ಫೋನ್ ಗಳನ್ನು ಬಳಸುವ ಅಗತ್ಯತೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

ಮಾಸ್ಕ್ ತೊಳೆಯಲು ಯಾವುದೇ ತೊಂದರೆಯಿಲ್ಲ

ಮಾಸ್ಕ್ ತೊಳೆಯಲು ಯಾವುದೇ ತೊಂದರೆಯಿಲ್ಲ

ಮೈಕ್ರೋಫೋನ್ ಮತ್ತು ಇಯರ್ ಫೋನ್ ಅಳವಡಿಕೆಯಾಗಿರುವ ಮಾಸ್ಕ್ ಫೋನ್ ಗಳನ್ನು ತೊಳೆಯುವುದಕ್ಕೂ ಯಾವುದೇ ತೊಂದರೆ ಇರುವುದಿಲ್ಲ. ಏಕೆಂದರೆ ಕಂಪನಿಯು ಮಾಸ್ಕ್ ‌ಫೋನ್‌ನಲ್ಲಿ ಸ್ಥಿತಿಸ್ಥಾಪಕ ನಿಯೋಪ್ರೆನ್ ಇಯರ್ ಕಸಿಗಳನ್ನು ಬಳಸಿದೆ. ಇದು ವೈದ್ಯಕೀಯ ದರ್ಜೆಯ ಬದಲಾಯಿಸಬಹುದಾದ PM 2.5 ಮತ್ತು N95 / FFP2 ಫಿಲ್ಟರ್‌ಗಳನ್ನು ಹೊಂದಿದೆ. ಐಪಿಎಕ್ಸ್ 5 ವಾಟರ್‌ರಾಂಡ್ ಬಳಸಲಾಗಿದೆ.

1 ಬಾರಿ ಚಾರ್ಜ್ ಮಾಡಿದರೆ 12 ಗಂಟೆ ಬಳಕೆ

1 ಬಾರಿ ಚಾರ್ಜ್ ಮಾಡಿದರೆ 12 ಗಂಟೆ ಬಳಕೆ

ಮಾಸ್ಕ್ ಫೋನ್ ಬಳಕೆ ಮಾಡುವುದಕ್ಕೂ ಮೊದಲು ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಅದನ್ನು ಗರಿಷ್ಠ 12 ಗಂಟೆಗಳವರೆಗೂ ಬಳಕೆ ಮಾಡಬಹುದಾಗಿದೆ. 12 ಗಂಟೆಗಳವರೆಗೂ ಫೋನ್ ಕಾಲ್ ರಿಸೀವ್ ಮಾಡವುದುಕ್ಕೆ ಮತ್ತು ಹಾಡು ಕೇಳುವುದಕ್ಕೆ ಮಾಸ್ಕ್ ಫೋನ್ ನ್ನು ಬಳಸಿಕೊಳ್ಳಬಹುದು. ಮಾಸ್ಕ್ ಫೋನ್ ಬಲಭಾಗಕ್ಕೆ ಮೂರು ಬಟನ್ ಗಳಿದ್ದು, pause / play, ಮತ್ತು ಶಬ್ದವನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವುದಕ್ಕೆ ಸಹಕಾರಿಯಾಗಲಿದೆ ಎಂದು ಕಂಪನಿ ತಿಳಿಸಿದೆ.

Recommended Video

ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡ್ಲಿ | Oneindia Kannada
3600 ರೂಪಾಯಿಗೆ ಒಂದು ಮಾಸ್ಕ್ ಫೋನ್

3600 ರೂಪಾಯಿಗೆ ಒಂದು ಮಾಸ್ಕ್ ಫೋನ್

ಗೂಗಲ್ ನಲ್ಲಿ ಬಳಕೆಯಾಗುವ ಸಿರಿ ಸಿರಿ ಅಸಿಸ್ಟೆಂಟ್ ‌ನಂತಹ ಧ್ವನಿ ಸಹಾಯಕರೊಂದಿಗೆ ಮಾಸ್ಕ್ ‌ಫೋನ್ ಹೋಲಿಕೆಯಾಗುತ್ತದೆ. ಬಳಕೆದಾರರು ಈ ಮಾಸ್ಕ್ ಫೋನ್ ನ್ನು ಸ್ಮಾರ್ಟ್ ಗೃಹೋಪಯೋಗಿ ಉಪಕರಣವಾಗಿ ಬಳಸಬಹುದು. ಒಂದು ಮಾಸ್ಕ್ ಫೋನ್ ಬೆಲೆಯು 49 ಡಾಲರ್ ಆಗಿರುತ್ತದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಒಂದಕ್ಕೆ 3600 ರೂಪಾಯಿ ತಗಲುತ್ತದೆ ಎಂದು ಕಂಪನಿಯು ತಿಳಿಸಿದೆ.

English summary
N95 Mask With Built In Microphone To Answer Calls On The Go.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X