ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಚ್ಛತೆ ಶ್ರೇಯಾಂಕ ಪಟ್ಟಿ: 5 ಸ್ಟಾರ್ ಅಂಕ ಪಡೆದ ಮೈಸೂರು

|
Google Oneindia Kannada News

ನವದೆಹಲಿ, ಮೇ 19: ದೇಶದ ತ್ಯಾಜ್ಯಮುಕ್ತ ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಭಾರತದ ನಗರ ಪ್ರದೇಶಗಳ ವಾರ್ಷಿಕ ಸ್ವಚ್ಛ ಸರ್ವೇಕ್ಷಣ ವರದಿಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ಮೈಸೂರು 5 ಸ್ಟಾರ್ ಅಂಕ ಪಡೆದ ನಗರಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

Recommended Video

BMTC : ಬೆಂಗಳೂರಿನ ಸಂಚಾರಿ ಜೀವನಾಡಿ ಬಿಎಂಟಿಸಿ ಇಂದಿನಿಂದ ಆರಂಭ | Karnataka | Oneindia Kannada

ಕರ್ನಾಟಕದ ಮೈಸೂರು ಅಲ್ಲದೆ ಅಂಬಿಕಾಪುರ, ಗುಜರಾತ್‌ನ ರಾಜ್‌ಕೋಟ್, ಮಧ್ಯಪ್ರದೇಶದ ಇಂದೋರ್ ಮತ್ತು ಮಹಾರಾಷ್ಟ್ರದ ನವೀ ಮುಂಬಯಿಗೆ 5 ಸ್ಟಾರ್ ರೇಟಿಂಗ್ ನೀಡಲಾಗಿದೆ.

ಇದಲ್ಲದೆ, ಹರಿಯಾಣ, ನವದೆಹಲಿಯ ಕರ್ನಾಲ್, ಆಂಧ್ರಪ್ರದೇಶದ ತಿರುಪತಿ ಮತ್ತು ವಿಜಯವಾಡ, ಚಂಡೀಗಢ ಛತ್ತೀಸ್‌ಗಡ್‌ನ ಭಿಲಾಯ್ ನಗರ, ಗುಜರಾತ್‌ನ ಅಹಮದಾಬಾದ್‌ ಸೇರಿದಂತೆ 65 ನಗರಗಳು ಮೂರು ಸ್ಟಾರ್ ರೇಟಿಂಗ್ ಪಡೆದಿವೆ. ದೆಹಲಿ ಕ್ಯಾಂಟ್, ವಡೋದರಾ, ರೋಹ್ಟಕ್ ಸೇರಿದಂತೆ 70 ನಗರಗಳು 1 ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ.

Mysuru, Surat, Ambikapur, Rajkot, Indore, Navi Mumbai ranked as 5star cities

ಕಳೆದ ಐದು ವರ್ಷಗಳಿಂದ ಸ್ಚಚ್ಛ ಸರ್ವೇಕ್ಷಣ ಸಮೀಕ್ಷೆ ನಡೆಸಾಲಗುತ್ತಿದ್ದು, ನಗರ ಪ್ರದೇಶಗಳಲ್ಲಿನ ಸ್ವಚ್ಛತೆಯ ಗುಣಮಟ್ಟ ಅಳೆಯಲು ಮಾನದಂಡವಾಗಿದೆ. ಶ್ರೇಯಾಂಕ ಪಟ್ಟಿಯನ್ನು ಬದಲಿಸಿ ನಗರಗಳಿಗೆ ಸ್ಟಾರ್ ರೇಟಿಂಗ್ ನೀಡಲಾಗುತ್ತಿದೆ. ಘನ ತ್ಯಾಜ್ಯ ನಿರ್ವಹಣೆ ಕುರಿತಂತೆ ಇರುವ ಅಂಶಗಳ ಪೈಕಿ ಪ್ರತಿ ನಗರ ಅನುಸರಿಸಿದ ಮಾರ್ಗ ಹಾಗೂ ಅದರ ಪರಿಣಾಮವನ್ನು ಪರಿಗಣಿಸಿ ಅಂಕ ನೀಡಲಾಗುತ್ತದೆ.

ನಗರ ಸಂಸ್ಥೆಗಳ ಉತ್ತಮ ಕಾರ್ಯಕ್ಕೆ ನೀಡುವ ಮನ್ನಣೆ ಇದಾಗಿದೆ. ಘನ ತ್ಯಾಜ್ಯ ನಿರ್ವಹಣೆಯಲ್ಲದೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಕಟ್ಟಡ ನಿರ್ಮಾಣ ತ್ಯಾಜ್ಯ, ಒಳ ಚರಂಡಿ ವ್ಯವಸ್ಥೆ ಹೀಗೆ ವಿವಿಧ ಹಂತದ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಸರಾಸರಿಯಂತೆ ಸ್ಟಾರ್ ರೇಟಿಂಗ್ ಸಿಗಲಿದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ವಿವರಿಸಿದರು.

English summary
The government has certified six cities as 5-star cities. They are Ambikapur, Rajkot, Surat, Mysuru, Indore and Navi Mumbai Meanwhile 65 cities have been rated as 3-star cities and 70 as 1 star.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X