ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸರ್ಕಾರದ ನೆರವು ಬೇಡುತ್ತಿರುವ ಶಿಮ್ಲಾದಲ್ಲಿರುವ ಮೈಸೂರು ಮಹಿಳೆ

|
Google Oneindia Kannada News

ಶಿಮ್ಲಾ, ಜುಲೈ 13: ಕಳೆದ ಎರಡು ವರ್ಷಗಳಿಂದ ಹಿಮಾಚಲ ಪ್ರದೇಶದ ಶಿಮ್ಲಾದ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಕೇಂದ್ರದಲ್ಲಿರುವ ಕರ್ನಾಟಕದ ಮಹಿಳೆಯೋರ್ವಳು ಹಿಂತಿರುಗಿ ಬರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.

ಇವರು ತಮ್ಮ ಊರಿಗೆ ವಾಪಸ್ಸಾಗಲು ಕರ್ನಾಟಕ ಸರ್ಕಾರ ನೆರವು ನೀಡಬೇಕು ಎಂದು ಹಿಮಾಚಲ ಪ್ರದೇಶ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಆಸ್ಪತ್ರೆ ತಿಳಿಸಿದೆ.

ನನ್ನ ಹೆಣ್ಣು ಮಕ್ಕಳನ್ನು ರಕ್ಷಿಸಿ: ಮೋದಿ, ಯೋಗಿಗೊಂದು ಪತ್ನನ್ನ ಹೆಣ್ಣು ಮಕ್ಕಳನ್ನು ರಕ್ಷಿಸಿ: ಮೋದಿ, ಯೋಗಿಗೊಂದು ಪತ್

ಮೂಲತಃ ಮೈಸೂರಿನವರಾದ ಪದ್ಮಾ, ಕಳೆದ ಎರಡು ವರ್ಷಗಳಿಂದ ಹಿಮಾಚಲ ಪ್ರದೇಶದಲ್ಲಿದ್ದಾರೆ. ಅವರು ಅಲ್ಲಿಗೆ ಹೋಗಿದ್ದು ಹೇಗೆ ಇತ್ಯಾದಿ ಮಾಹಿತಿಗಳು ಲಭ್ಯವಿಲ್ಲ. ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬಾರದ ಕಾರಣ ಅವರಿಗೆ ಸಂವಹನ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ.

Mysuru resident in Shimla seeks government of Karnataka help

"ಸದ್ಯಕ್ಕೆ ಅವರು ಯಾವುದೇ ಮಾನಸಿಕ ಕಾಯಿಲೆಯಿಂದ ಬಳಲುತ್ತಿಲ್ಲ. ಅವರು ಕರ್ನಾಟಕ ರಾಜ್ಯದ ಮೈಸೂರಿನವರೆಂಬುದು ತಿಳಿದುಬಂದಿದ್ದು, ಈ ಸಂಬಂಧ ಕರ್ನಾಟಕ ಮಾನಸಿಕ ಆರೋಗ್ಯ ಸೇವೆಯ ಉಪ ನಿರ್ದೇಶಕರ ಬಳಿ ಹಿಮಾಚಲ ಪ್ರದೇಶ ಆಸ್ಪತ್ರೆಯ ಸಂಜಯ್ ಪಾಠಕ್ ಮಾತನಾಡಿದ್ದಾರೆ. ಅಕಸ್ಮಾತ್ ಮಹಿಳೆಯನ್ನು ಆಕೆಯ ಕುಟುಂಬಸ್ಥರು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದರೆ ಆಕೆಗೆ ವಸತಿ ವ್ಯವಸ್ಥೆ ಮಾಡುವಂತೆಯೂ ಮನವಿ ಮಾಡಲಾಗಿದೆ ಎಂದು ಸಂಜಯ್ ಪಾಠಕ್ ಹೇಳಿದ್ದಾರೆ.

English summary
Shimla: Mysuru resident Padama, living at Himachal Hospital of Mental Health and Rehabilitation for past 2 years, awaits help from Karnataka govt to go to her home state as she struggles to communicate here due to language barrier. Doctors say she is in a good mental state now
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X