ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಚೆನ್ನೈ ರೈಲನ್ನು ಮೈಸೂರು ವರೆಗೂ ಓಡಿಸಲು ಮನವಿ

By Nayana
|
Google Oneindia Kannada News

ಬೆಂಗಳೂರು, ಜು.10: ಚೆನ್ನೈ-ಬೆಂಗಳೂರು ಮಧ್ಯೆ ಸಂಚರಿಸುವ ರೈಲು ಸಂಖ್ಯೆ 12609 ರೈಲನ್ನು ಮೈಸೂರುವರೆಗೂ ವಿಸ್ತರಿಸುವಂತೆ ಮೈಸೂರು ರೈಲ್ವೆ ಬಳಕೆದಾರರ ವೇದಿಕೆ ಒತ್ತಾಯಿಸಿದೆ.

ಚೆನ್ನೈ ಹಾಗೂ ಬೆಂಗಳೂರು ಮಧ್ಯೆ ಸಂಚರಿಸುವ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಮೈಸೂರು ರೈಲ್ವೆ ಬಳಕೆದಾರರ ವೇದಿಕೆ ಆಗ್ರಹಿಸಿದ್ದು, ಈ ಕುರಿತು ಟ್ವಿಟ್ಟರ್‌ನಲ್ಲಿ ಅಭಿಯಾನ ಆರಂಭಿಸಿರುವ ವೇದಿಕೆ ಕಾರ್ಯಕರ್ತರು ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Mysuru rail users urge extension of Bengaluru- Chennai express up to Mysuru

ಮೈಸೂರು-ರೇವಾ ನಡುವೆ ನೂತನ ರೈಲು ಸೇವೆ ಆರಂಭ

ಸಧ್ಯ ಬೆಂಗಳೂರು ಮತ್ತು ಚೆನ್ನೈ ನಡುವೆ ಸಂಚರಿಸುತ್ತಿರುವ ರೈಲನ್ನು ಮೈಸೂರಿನವರೆಗೂ ವಿಸ್ತರಿಸುವುದು ಅಗತ್ಯವಾಗಿದೆ. ಈ ಮೊದಲು ಸಂಚರಿಸುತ್ತಿದ್ದ ಬೆಂಗಳೂರು, ಕಣ್ಣೂರು ಕಾರವಾರ ರೈಲನ್ನು ಹೊಸ ಮಾರ್ಗಕ್ಕೆ ಬದಲಾಯಿಸಿದ ನಂತರ ಪ್ರತಿ ದಿನ ಮೈಸೂರಿಗೆ ಬೆಂಗಳೂರಿನಿಂದ ಸಂಜೆ ವೇಳೆ ಯಾವ ರೈಲು ಇರಲಿಲ್ಲ.

ಸಂಜೆ 7 ಗಂಟೆಯಿಂದ ರಾತ್ರಿ 11.30ರವರೆಗೆ ಬೆಂಗಳೂರು ಮತ್ತು ಮೈಸೂರು ನಡುವೆ ವಾರದ 4 ದಿನಗಳ ಕಾಲ ಯಾವುದೇ ರೈಲಿನ ಸಂಚಾರ ಇರುವುದಿಲ್ಲ ಹೀಗಾಗಿ ಸಾವಿರಾರು ಪ್ರಯಾಣಿಕರು ನಿತ್ಯ ಪರಿತಪಿಸುವಂತಾಗಿದೆ. ಅಲ್ಲದೆ ವೈಟ್‌ಫೀಲ್ಡ್‌, ಐಟಿಪಿಎಲ್ ಪ್ರದೇಶಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೈಸೂರು ಮಾರ್ಗಕ್ಕೆ ರಾತ್ರಿ ರೈಲೇ ಇಲ್ಲದ ಕಾರಣ ಸಾಕಷ್ಟು ಅನನುಕೂಲ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಚೆನ್ನೈ ರೈಲನ್ನು ಮೈಸೂರಿಗೆ ವಿಸ್ತರಿಸುವ ಮೂಲಕ, ಬೆಂಗಳೂರಿನ ವೈಟ್‌ಫೀಲ್ಡ್‌, ಐಟಿಪಿಎಲ್‌ ಸೇರಿದಂತೆ ಮಾರ್ಗದಲ್ಲಿ ಸಮಚರಿಸುವ ಎಲ್ಲಾ ಪ್ರಯಾಣಿಕರಿಗೆ ನೆರವಾಗಲಿದೆ ಎಂದು ವೇದಿಕೆ ಸದಸ್ಯರು ಕೋರಿದ್ದಾರೆ.

English summary
Mysuru rail users forum has started campaign in tweeter urging extension of Bengaluru- Chennai express up to Mysore. The passengers have no train facility between 7pm to 11.55 pm from Bangalore to Mysuru four days in a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X