ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಹದಿ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಲಾಗಿತ್ತಂತೆ!

|
Google Oneindia Kannada News

ಬೆಂಗಳೂರು, ಡಿ. 14: 'ನನ್ನ ಮಗನಿಗೆ ಉಗ್ರರ ಜತೆ ನಂಟಿದೆ ಎಂಬುದನ್ನು ನಂಬುವುದಿಲ್ಲ. ಪ್ರಕರಣದಲ್ಲಿ ಅವನನ್ನು ಸಿಲುಕಿಸಲಾಗಿದೆ. ಆತ ಬಳಸುತಿದ್ದ ಇಂಟರ್ನೆಟ್ ಸಂಪರ್ಕ ಹ್ಯಾಕ್ ಮಾಡಲಾಗಿದೆ ಎಂದು ಶಂಕಿತ ಉಗ್ರ ಮೆಹದಿ ತಂದೆ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ಪೊಲೀಸರು ಬಂಧಿಸಿರುವ ಮೆಹದಿ ತಂದೆ ಡಾ. ಮೆಕಾಯಿಲ್ ಬಿಸ್ವಾನ್ ಕೋಲ್ಕತ್ತಾ ನಿವಾಸಿಯಾಗಿದ್ದು, ಬಂಧನ ಸುದ್ದಿ ತಿಳಿದ ತಕ್ಷಣ ಬೆಂಗಳೂರಿಗೆ ಹೊರಟಿದ್ದೇನೆ ಎಂದು ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು ತಿಳಿಸಿದರು.[ಬೆಂಗಳೂರು ಪೊಲೀಸರ ಕೈಗೆ ಮೆಹದಿ ಸಿಕ್ಕಿಬಿದ್ದಿದ್ದು ಹೇಗೆ?]

 isis

ನನ್ನ ಮಗ ಬಂಧನವಾಗಿರುವ ಬಗ್ಗೆ ಯಾವುದೇ ಮಾಹಿತಿಬಂದಿಲ್ಲ. ಆತನ ಮೊಬೈಲ್ ಸ್ವೀಚ್ ಆಫ್ ಆಗಿದೆ. ಶುಕ್ರವಾರ ರಾತ್ರಿಯೇ ಈ ಬಗ್ಗೆ ಪತ್ರಿಕಾ ವರದಿಗಾರೊಬ್ಬರು ನನ್ನನ್ನು ಸಂಪರ್ಕಿಸಿದ್ದರು. ಕೂಡಲೇ ನನ್ನ ಮಗನನ್ನು ಈ ಬಗ್ಗೆ ಸಂಪರ್ಕಿಸಿದೆ ಆತ ತನ್ನ ಅಂತರ್ಜಾಲ ಸಂಪರ್ಕ ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದ ಎಂದು ವಿವರಿಸಿದರು.

ಐಎಸ್ ಐಸ್ ಎಂದರೆ ನನಗೆ ಏನೆಂಬುದೇ ಗೊತ್ತಿಲ್ಲ. ಇನ್ನು ಆ ಸಂಘಟನೆಗೆ ಬೆಂಬಲ ನೀಡುವುದು ಎಲ್ಲಿಂದ ಬಂತು? ಚಾನಲ್ 4 ನಿಂದ ಕೆಲ ವ್ಯಕ್ತಿಗಳು ನನ್ನ ಬೇಟಿಗೆ ಬಂದಿದ್ದರು ಎಂದು ಮೆಹದಿ ಒಮ್ಮೆ ಹೇಳಿದ್ದ ಎಂದು ತಿಳಿಸಿದರು.['ಜಾಣ' ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ?]

ಪಶ್ಚಿಮ ಬಂಗಾಳ ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ಮೆಕಾಯಿಲ್ ಬಿಸ್ವಾಸ್ 10 ವರ್ಷಗಳ ಹಿಂದೆಯೇ ನಿವೃತ್ತನಾಗಿದ್ದಾರೆ. ಅಲ್ಲದೇ ಹೋಮಿಯೋಪತಿ ವೈದ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ.

English summary
Bangaluru: The father of Mehdi Masroor Biswas - the man who was arrested in Bangalore for allegedly operating the most influential Twitter handle for Islamic State says he would never believe that his son could be involved these activities. "I stayed with my son for so many months. He had no times for such activity," the father of Mehdi Masroor Biswas told
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X