ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಅಪ್ಪುಗೆ ಮೋದಿಯೊಳಗಿನ ದ್ವೇಷವನ್ನು ಕಡಿಮೆ ಮಾಡಿತು: ರಾಹುಲ್ ಗಾಂಧಿ

|
Google Oneindia Kannada News

ಅಜ್ಮೇರ್, ಫೆಬ್ರವರಿ 14: ನನ್ನ ಅಪ್ಪುಗೆ ಮೋದಿ ಅವರಲ್ಲಿ ನನ್ನ ಬಗ್ಗೆ ಇದ್ದ ದ್ವೇಷವನ್ನು ಕಿತ್ತೊಗೆದಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಮೋದಿ ಅವರನ್ನು ಅಪ್ಪಿಕೊಂಡಿದ್ದನ್ನು ಸಮರ್ಥಿಸಿಕೊಂಡರು.

ವಿಡಿಯೋ: ಗುಜರಾತ್‌ನಲ್ಲಿ ರಾಹುಲ್ ಗಾಂಧಿಗೆ ಸಿಕ್ತು ಮುತ್ತಿನ ಸ್ವಾಗತ ವಿಡಿಯೋ: ಗುಜರಾತ್‌ನಲ್ಲಿ ರಾಹುಲ್ ಗಾಂಧಿಗೆ ಸಿಕ್ತು ಮುತ್ತಿನ ಸ್ವಾಗತ

ರಾಜಸ್ಥಾನದ ಅಜ್ಮೇರ್‌ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ದ್ವೇಷವನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರೀತಿಯಿಂದ ಎದುರಿಸಬೇಕು ಎಂದರು.

ನ್ಯೂಸ್ ನೇಷನ್ ಸಮೀಕ್ಷೆ : ರಾಜಸ್ಥಾನದಲ್ಲಿ ಮೋದಿಗೇ ಜೈ, ಗಾಂಧಿಗೆ ಬೈ ನ್ಯೂಸ್ ನೇಷನ್ ಸಮೀಕ್ಷೆ : ರಾಜಸ್ಥಾನದಲ್ಲಿ ಮೋದಿಗೇ ಜೈ, ಗಾಂಧಿಗೆ ಬೈ

ನಾವು 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಆದರೆ ಅದನ್ನು ನಿರ್ನಾಮ ಮಾಡುವುದಿಲ್ಲ ಎಂದರು. ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಬದಲಾಗಿ ನಾವು ಪ್ರೀತಿಯ ರಾಜಕಾರಣ ಮಾಡುತ್ತೇವೆ ಎಂದು ಹೇಳಿದರು.

My hug finished Modis hatred for me: Rahul Gandhi

ಮೋದಿ ಅವರು ಸದಾ ನನ್ನ ಮತ್ತು ನನ್ನ ಕುಟುಂಬದ ಮೇಲೆ ವಾಗ್ದಾಳಿ ಮಾಡುತ್ತೇ ಇರುತ್ತಾರೆ, ಕಾಂಗ್ರೆಸ್ ಅನ್ನು ಕಿತ್ತೊಗೆಯುತ್ತೇನೆ ಎನ್ನುತ್ತಾರೆ, ಆದರೆ ನಾನು ಅವರನ್ನು ಅಪ್ಪಿಕೊಂಡೆ ನನಗೆ ದ್ವೇಷದ ರಾಜಕಾರಣ ಬೇಕಿಲ್ಲ ಎಂದು ಭಾವುಕವಾಗಿ ರಾಹುಲ್ ಮಾತನಾಡಿದರು.

ರಫೇಲ್‌ ಬಗ್ಗೆ ಹೊಸ ದಾಖಲೆ ಮುಂದಿಟ್ಟ ರಾಹುಲ್, ಮೋದಿಗೆ ತಪರಾಕಿ ರಫೇಲ್‌ ಬಗ್ಗೆ ಹೊಸ ದಾಖಲೆ ಮುಂದಿಟ್ಟ ರಾಹುಲ್, ಮೋದಿಗೆ ತಪರಾಕಿ

ನಿನ್ನೆ ಲೋಕಸಭೆಯಲ್ಲಿ ಮೋದಿಯವರ ಕೊನೆಯ ಭಾಷಣದಲ್ಲಿ ರಾಹುಲ್ ಗಾಂಧಿ ಅವರ ಅಪ್ಪುಗೆಯ ಬಗ್ಗೆ ವ್ಯಂಗ್ಯ ಮಾಡಿದ ಮೋದಿ, 'ಈ ಲೋಕಸಭೆಯಲ್ಲಿ ನನಗೆ ಆಲಿಂಗಿಸಿಕೊಳ್ಳುವುದು ಮತ್ತು ಕೊರಳಿಗೆ ನೇತು ಬೀಳುವುದು' (ಗಲೆ ಮಿಲ್ನಾ ಔರ್ ಗಲೇ ಲಗ್ನಾ) ನಡುವೆ ವ್ಯತ್ಯಾಸ ಗೊತ್ತಾಯಿತು' ಎಂದಿದ್ದರು.

English summary
Modi used to hate but after i hugged him it finished his hatred towards me said Rahul Gandhi in Rajasthan's Ajmer today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X