ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟ್ಟ ಮಕ್ಕಳ ಕೆಮ್ಮಿಗೆ ಕೊರೊನಾವೈರಸ್ ಕಾರಣವೇ; ಭಯ ಬಿಟ್ಟು ವರದಿ ಓದಿ

|
Google Oneindia Kannada News

ನವದೆಹಲಿ, ಜುಲೈ.19: ಕೊರೊನಾವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರು ಪ್ರತಿನಿತ್ಯ ಆತಂಕದಲ್ಲೇ ದಿನ ಕಳೆಯುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಪುಟ್ಟ ಮಕ್ಕಳಿಗೆ ಮಹಾಮಾರಿ ಅಂಟಿಕೊಂಡರೇನು ಗತಿ ಎಂಬ ಭೀತಿ ಪೋಷಕರನ್ನು ಸಹಜವಾಗಿ ಕಾಡುತ್ತಿದೆ.

ಪುಟ್ಟ ಮಕ್ಕಳಲ್ಲಿ ಕೆಮ್ಮಿನ ಲಕ್ಷಣಗಳು ಕಂಡು ಬಂದಾಕ್ಷಣಕ್ಕೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿತು ಎಂಬ ಆತಂಕ ಬೇಕಾಗಿಲ್ಲ. ನಾಲ್ಕು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವಿನಲ್ಲಿ ಕೆಮ್ಮು ಕಾಣಿಸಿಕೊಂಡರೆ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿರುತ್ತದೆ.

ಕೊರೊನಾವೈರಸ್ ಅಂಟಿದ ಮಕ್ಕಳ ಸಾವಿಗೆ 'ಕವಾಸಕಿ' ಕಾರಣ!ಕೊರೊನಾವೈರಸ್ ಅಂಟಿದ ಮಕ್ಕಳ ಸಾವಿಗೆ 'ಕವಾಸಕಿ' ಕಾರಣ!

ನಾಲ್ಕು ತಿಂಗಳಿಗಿಂತ ಮೇಲ್ಪಟ್ಟ ಮಕ್ಕಳಲ್ಲಿ ಕೆಮ್ಮು ಕೇವಲ ಕೊರೊನಾವೈರಸ್ ಸೋಂಕಿನಿಂದ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಶೀತ, ಜ್ವರ, ಕೆಮ್ಮು ಹೀಗೆ ಬೇರೆ ಯಾವುದೇ ಬ್ಯಾಕ್ಟಿರಿಯಾಗಳಿಂದಲೂ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು.

ಮಗುವಿನ ಆಹಾರ ಸೇವನೆಯಲ್ಲಿ ವ್ಯತ್ಯಾಸವಿದೆಯೇ?

ಮಗುವಿನ ಆಹಾರ ಸೇವನೆಯಲ್ಲಿ ವ್ಯತ್ಯಾಸವಿದೆಯೇ?

ಮಗುವಿನಲ್ಲಿ ಕೆಲವು ದಿನಗಳವರೆಗೂ ಕೆಮ್ಮು, ಜ್ವರ ಕಾಣಿಸಿಕೊಂಡಾಗಿಯೂ ಕೂಡಾ ಸಂತೋಷದಿಂದ ಮಗುವಿನ ಆಹಾರ ಸೇವನೆಯಲ್ಲಿ ಯಾವುದೇ ವ್ಯತ್ಯಯ ಕಂಡು ಬರುತ್ತಿಲ್ಲವೇ. ನಿಮ್ಮ ಮಗು ಸಂತೋಷವಾಗಿ ಊಟ, ಹಾಲು ಸೇವನೆ ಮಾಡುತ್ತಿದ್ದರೆ ಆತಂಕ ಪಡುವ ಅಗತ್ಯವಿರುವುದಿಲ್ಲ. ಎರಡು ದಿನಕ್ಕಿಂತ ಹೆಚ್ಚು ದಿನಗಳವರೆಗೂ ಮಗುವಿನಲ್ಲಿ ಜ್ವರ ಕಾಣಿಸಿಕೊಂಡಲ್ಲಿ, ಇದರ ಜೊತೆಗೆ ಬೇರೆ ರೋಗದ ಲಕ್ಷಣಗಳು ಗೋಚರಿಸಿದ್ದರೆ ಆತಂಕಪಡುವ ಬದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಯಾವಾಗ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯವಾಗುತ್ತೆ?

ಯಾವಾಗ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯವಾಗುತ್ತೆ?

ನಿಮ್ಮ ಮಗುವಿನ ಆಹಾರ ಸೇವನೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಉಸಿರಾಟ ಸಮಸ್ಯೆ ಕಾಣಿಸಿಕೊಂಡರೆ ಎಚ್ಚೆತ್ತುಕೊಳ್ಳಬೇಕು. ಉಸಿರಾಡುವುದಕ್ಕೆ ಮಗುವು ಕಷ್ಟ ಪಡುತ್ತಿದೆಯಾ. ದೀರ್ಘಾವಧಿವರೆಗೂ ನಿಮ್ಮ ಮಗುವಿನಲ್ಲಿ ಕೆಮ್ಮು ಕಾಣಿಸಿಕೊಂಡಿದೆಯಾ. ಹಾಗಿದ್ದಲ್ಲಿ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಿ ಕೊರೊನಾವೈರಸ್ ಸೋಂಕಿನ ತಪಾಸಣೆ ಮಾಡಿಸಬೇಕು. ಏಕೆಂದರೆ ದೀರ್ಘಾವಧಿಯ ಕೆಮ್ಮು ಮಗುವಿನಲ್ಲಿ ಕಂಡು ಬಂದರೆ ಇದು ಬಹುಪಾಲು ಕೊರೊನಾವೈರಸ್ ಸೋಂಕಿನ ಸೌಮ್ಯ ಲಕ್ಷಣವೇ ಆಗಿರುತ್ತದೆ ಎಂದು ಸಾಂಕ್ರಾಮಿಕ ರೋಗತಜ್ಞರು ಎಚ್ಚರಿಕೆ ನೀಡುತ್ತಾರೆ.

ಪುಟ್ಟ ಮಕ್ಕಳಲ್ಲಿ ಸೋಂಕಿತ ಲಕ್ಷಣಗಲು ಸಹಜ

ಪುಟ್ಟ ಮಕ್ಕಳಲ್ಲಿ ಸೋಂಕಿತ ಲಕ್ಷಣಗಲು ಸಹಜ

ಕೊರೊನಾವೈರಸ್ ಸೋಂಕಿನ ಹೊರತಾಗಿಯೂ ಪುಟ್ಟ ಮಕ್ಕಳಲ್ಲಿ ಮಲ್ಟಿ ಸಿಸ್ಟಮ್ ಇನ್ಫಾಮೇಟರಿ ಸಿಂಡ್ರೋಮ್ ಕಂಡು ಬರುತ್ತದೆ. ಮಕ್ಕಳಲ್ಲಿ ತುಟಿ ಒಣಗುವುದು ಹಾಗು ಬಿರಿಯುವುದು. ದೇಹದ ಉಷ್ಣಾಂಶವು 5 ದಿನಗಳವರೆಗೂ 102 ಡಿಗ್ರಿಗಿಂತ ಹೆಚ್ಚಾಗಿರುವುದು. ಕಣ್ಣುಗಳು ಕೆಂಪಾಗುವುದು ಹಾಗೂ ಕೈ ಮತ್ತು ಕಾಲು ಬೆರಳಿನ ಸಿಪ್ಪೆ ಸುಳಿಯುವುದು. ದೇಹದ ಮೇಲೆ ಎಲ್ಲಿಯಾದರೂ ರಾಶ್, ಆದರೆ ಡಯಾಪರ್ ಪ್ರದೇಶದಲ್ಲಿ ಉಬ್ಬಿರುವ ಗ್ರಂಥಿಗಳಲ್ಲಿ ಹೆಚ್ಚು ತೀವ್ರವಾಗಿರುತ್ತದೆ. ಇವೆಲ್ಲ ಮಕ್ಕಳ ಪ್ರಾಣಕ್ಕೆ ಕುತ್ತು ತರುವ ಅಪಾಯಕಾರಿ ಕವಾಸಕಿ ರೋಗದ ಲಕ್ಷಣಗಳು ಆಗಿರುತ್ತವೆ.

ಮಕ್ಕಳ ಸಾವಿಗೆ ಕೊವಿಡ್-19 ಗಿಂತ ಕವಾಸಕಿ ಹೆಚ್ಚು ಕಾರಣ

ಮಕ್ಕಳ ಸಾವಿಗೆ ಕೊವಿಡ್-19 ಗಿಂತ ಕವಾಸಕಿ ಹೆಚ್ಚು ಕಾರಣ

5 ವರ್ಷದಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವುದಕ್ಕೆ ಈ ಕವಾಸಕಿ ಸೋಂಕು ಪ್ರಮುಖ ಕಾರಣವಾಗಿದೆ. ಕವಾಸಕಿ ಸೋಂಕಿನಿಂದ ಉರಿಯೂತ, ಕವಾಸಕಿ ಸಿಂಡ್ರೋಮ್ ಅಥವಾ ಮ್ಯೂಕೋಕ್ಯುಟೇನಿಯಸ್, ದುಗ್ಧರಸ ಗ್ರಂಥಿ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಈ ಕವಾಸಕಿ ಸೋಂಕಿನಿಂದ ಮಕ್ಕಳ ಹೃದಯದಲ್ಲಿ ಇರುವ ಪರಿಧಮನಿ ಫಿರಂಗಿಗಳು ಹಾನಿಯಾಗುತ್ತವೆ.

English summary
My Baby Suffering From Cough From Past Two Days; Is It A Symptom Of Coronavirus Infection?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X