ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷ್ ನ ಹೃದಯವು ರಕ್ತವನ್ನು ಪಂಪ್ ಮಾಡುತ್ತಿಲ್ಲ, ಶಸ್ತ್ರಚಿಕಿತ್ಸೆಗೆ ಬೇಕಾಗಿದೆ 6 ಲಕ್ಷ

Google Oneindia Kannada News

ನಾನು ಮೊದಲ ಸಲ ದಕ್ಷ್ ನನ್ನು ನೋಡಿದಾಗ, ಅವನ ಪುಟ್ಟ ಕೈಗಳಿಂದ ನನ್ನ ಬೆರಳುಗಳನ್ನು ಬಿಗಿಯಾಗಿ ಹಿಡಿದಿದ್ದ. ಆದರೆ ಈಗ ಅವನನ್ನು ಮೆದುವಾಗಿ ಸ್ಪರ್ಶಿಸಿದರೂ ಜೋರಾಗಿ ಅಳುತ್ತಾನೆ. ಈಗ ಕೂಡ ಅವನ ಬಟ್ಟೆಗಳು ಬೆವರಿನಿಂದ ಒದ್ದೆಯಾಗಿದ್ದು, ಎತ್ತಿಕೊಳ್ಳುವಾಗ ಎಲ್ಲಿ ಜಾರಿ ಬಿಡುತ್ತಾನೋ ಎಂದು ಭಯ ಆಗುತ್ತದೆ. ಅವನ ಪುಟ್ಟ ದೇಹದಲ್ಲಿ ಎಲ್ಲಿ ನೋಡಿದರೂ ಟ್ಯೂಬ್ ಗಳು. ಆತ ಅವುಗಳಿಂದ ಪಾರಾಗಲು ಪ್ರಯತ್ನಿಸುವುದನ್ನು ನೋಡುವಾಗ ನಾನು ಅಸಹಾಯಕನಾಗುತ್ತೇನೆ ಎಂದು ನೆರವು ನಿರೀಕ್ಷಿಸುತ್ತಿರುವ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ದಕ್ಷ್ ನ ತಂದೆ ಹೇಳುತ್ತಾರೆ.

ನನಗೆ ಆ ನಿರೀಕ್ಷೆಯನ್ನು ತಡೆಯಲು ಸಾಧ್ಯವಿರಲಿಲ್ಲ. ಆಪರೇಷನ್ ಥಿಯೇಟರ್ ನಲ್ಲಿ ನಡೆಯುತ್ತಿದ್ದ ಓಡಾಟ...ಹೀಗೆ ಅಂತಿಮವಾಗಿ ಮೊದಲ ಸಲ ಮಗುವಿನ ಕೂಗು ಕೇಳಿಬಂತು. ಆಪರೇಷನ್ ಥಿಯೇಟರ್ ನೊಳಗೆ ಹೋದಾಗ ಮೊದಲ ಸಲ ಮಗುವನ್ನು ನೋಡಿದೆ. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ದಕ್ಷ್ ಹುಟ್ಟಿದ ದಿನವನ್ನು ಭಾವುಕರಾಗಿ ನೆನಪಿಸಿಕೊಳ್ಳುತ್ತಾರೆ ದಕ್ಷ್ ನ ತಂದೆ.

ನಮ್ಮದೇ ಪ್ರಪಂಚದಲ್ಲಿದ್ದೆವು ಮತ್ತು ಅವನೊಂದಿಗೆ ನಾನು ಆಟವಾಡುತ್ತಿದ್ದೆ. ಅವನನ್ನು ನೋಡಿದ ಆ ದಿನದ ಮೊದಲ ಕ್ಷಣದಿಂದಲೇ ದಕ್ಷ್ ನನಗೆ ಒಳ್ಳೆಯ ಗೆಳೆಯನಾದ. ಅವನೊಂದಿಗೆ ಇರುವುದು ತುಂಬಾ ಸಂತೋಷವಾಗುತ್ತಿತ್ತು ಎಂದು ತಮ್ಮ ಪ್ರೀತಿಯ ಮಗನ ಬಗ್ಗೆ ದಕ್ಷ್ ನ ತಾಯಿ ಹೇಳುವಷ್ಟರಲ್ಲಿ ಗಂಟಲು ಉಬ್ಬಿ ಬಂದು, ಮಾತೇ ನಿಲ್ಲಿಸುತ್ತಾರೆ. ಆ ನಂತರ ತಮ್ಮ ಮಗನ ಆರೋಗ್ಯ ಸಮಸ್ಯೆ ಬಗ್ಗೆ ಹೇಳಲು ಶುರು ಮಾಡಿದರು.

ದಕ್ಷ್ ಯಾವಾಗಲೂ ಬೆವರುತ್ತಿದ್ದ. ಆದರೆ ಆ ಬಗ್ಗೆ ಹೆಚ್ಚು ಚಿಂತೆ ಮಾಡಲು ಹೋಗಲಿಲ್ಲ. ಯಾಕೆಂದರೆ ಮುಂಬೈ ವಾತಾವರಣವು ತುಂಬಾ ಉಷ್ಣತೆಯಿಂದ ಕೂಡಿದ್ದು, ಬೆವರುವುದು ಸಾಮಾನ್ಯ. ನಲಾಸೋಪಾರದಲ್ಲಿ ಇರುವ ನಮ್ಮ ಸಣ್ಣ ಮನೆಗೆ ಸರಿಯಾಗಿ ಗಾಳಿ ಕೂಡ ಬರುತ್ತಿರಲಿಲ್ಲ. ಅದು ಅರ್ಧ ನಿರ್ಮಿಸಿದ ಕಟ್ಟಡವಾಗಿತ್ತು. ಆದರೆ ಒಂದು ದಿನ ಬೀಚ್ ಗೆ ಹೋದಾಗಲೂ ಅವನು ತುಂಬಾ ಬೆವರುವುದನ್ನು ನೋಡಿ ಗಾಬರಿಯಾಯಿತು.

ದಕ್ಷ್ ಬೆವರುತ್ತಿದ್ದುದನ್ನು ನೋಡಿ ನನಗೆ ತುಂಬಾ ಗಾಬರಿಯಾಗಿತ್ತು. ಮನೆಗೆ ಹೋಗಿ ಅವನ ಎಲ್ಲಾ ಬಟ್ಟೆ ತೆಗೆದರೂ ಬೆವರು ಬರುತ್ತಲೇ ಇತ್ತು. ಆತ ನಿಲ್ಲಿಸದೆ ಅಳುತ್ತಿದ್ದ ಮತ್ತು ಹಾಲುಣಿಸಲು ಪ್ರಯತ್ನಿಸಿದರೂ ಆತ ಕುಡಿಯುತ್ತಿರಲಿಲ್ಲ. ಕಿಟಕಿ ತೆರೆಯುವುದರಿಂದ ಏನಾದರೂ ಉಪಯೋಗ ಆಗಲಿದೆಯಾ ಎಂದುಕೊಂಡೆ. ಆದರೆ ಇದರಿಂದ ಆತನಿಗೆ ಹಿಂಸೆ ಆಗಿರುವುದು ತಿಳಿಯಿತು. ಅವನಿಗೆ ಉಸಿರಾಡಲು ಕಷ್ಟವಾಗುತ್ತಿತ್ತು ಎಂದು ದಕ್ಷ್ ತಾಯಿ ವಿವರಿಸುತ್ತಾರೆ.

ದಕ್ಷ್ ನ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಆತನ ಪರಿಸ್ಥಿತಿಗೆ ಚಿಕಿತ್ಸೆ ನೀಡುವಂತಹ ಸಾಧನವಾಗಲಿ ಅಥವಾ ವೈದ್ಯರಾಗಲಿ ಇರಲಿಲ್ಲ. ಆ ಬಳಿಕ ಅವರು ಯಾವುದೇ ಉಪಾಯವಿಲ್ಲದೆ ತಮ್ಮ ಮನೆಯಿಂದ ಸುಮಾರು 1.5 ಗಂಟೆ ದೂರವಿರುವ ನಾನಾವತಿ ಆಸ್ಪತ್ರೆಗೆ ತೆರಳಿದರು. ಮಗುವಿಗೆ ಸಾಮಾನ್ಯವಾಗಿರುವ ಶೀತ ಅಥವಾ ಜ್ವರ ಬಂದಿರುವ ಸಾಧ್ಯತೆ ಕಡಿಮೆ ಇರುವ ಕಾರಣ 1.5 ಗಂಟೆ ಪ್ರಯಾಣವು ತುಂಬಾ ಕಠಿಣವಾಗಲಿದೆ ಎಂದು ಅವರು ಭಾವಿಸಿದ್ದಾರೆ. ಅವರ ಯೋಚನೆ ಸರಿಯಾಗಿತ್ತು.

ಮಗುವಿಗೆ ಮಹಾಪಧಮನಿ ಸಂಯೋಜನೆ ಸಮಸ್ಯೆಯಿದೆ ಎಂದು ಹೇಳಿದರು. ಅಂದರೆ ಮಗುವಿನ ಹೃದಯವು ಬೇಕಿರುವ ರಕ್ತವನ್ನು ಪಂಪ್ ಮಾಡುತ್ತಿರಲಿಲ್ಲ. ಶಸ್ತ್ರಚಿಕಿತ್ಸೆಗೆ 6 ಲಕ್ಷ ರುಪಾಯಿ ಬೇಕಾಗಬಹುದು ಎಂದು ವೈದ್ಯರು ಹೇಳಿದರು. ದಕ್ಷ್ ನನ್ನು ತಕ್ಷಣ ಎನ್ ಐಸಿಯುಗೆ ದಾಖಲಿಸಲಾಯಿತು ಮತ್ತು ಪೋಷಕರಿಗೂ ಆತನನ್ನು ನೋಡಲು ಅವಕಾಶ ನೀಡಲಿಲ್ಲ.

ದಿನಕೂಲಿಗೆ ದುಡಿಯುತ್ತಿರುವ ದಕ್ಷ್ ನ ತಂದೆ ಜೀವನ ಸಾಗಿಸುವುದೇ ತುಂಬಾ ಕಷ್ಟದಲ್ಲಿ. ಪರೀಕ್ಷೆ ಮುಂತಾದವುಗಳಿಗೆ ಆಗಿರುವಂತಹ ಸುಮಾರು 15,000 ರುಪಾಯಿಯನ್ನು ಪಾವತಿಸಲು ಅವರು ಕಷ್ಟಪಡುತ್ತಿದ್ದಾರೆ. ಅವರ ಮಗನ ಶಸ್ತ್ರಚಿಕಿತ್ಸೆಗೆ ನೆರವಾಗೋಣ.

My 2 month old baby’s heart is not able to pump blood

'ಅತೀ ಶೀಘ್ರದಲ್ಲಿ ಶಸ್ತ್ರಚಿಕಿತ್ಸೆ ಮಾಡದೆ ಇದ್ದರೆ ನಮ್ಮ ಮಗು ಸಾವನ್ನಪ್ಪಬಹುದು. ಎರಡು ತಿಂಗಳ ಮಗುವು ಒದ್ದಾಡುತ್ತಿದೆ ಮತ್ತು ನಾವು ಏನೂ ಮಾಡಲಾಗದೆ ಸಂಕಟಪಡುತ್ತಿದ್ದೇವೆ. ಆತನನ್ನು ಒಮ್ಮೆ ಸ್ಪರ್ಶಿಸಿ, ಆರಾಮ ನೀಡಬೇಕೆಂದು ನನ್ನ ಮನಸ್ಸು ಬಯಸುತ್ತಿದೆ. ಆದರೆ ನಾನು ಅಸಹಾಯಕಳಾಗಿದ್ದೇನೆ' ಎಂದು ದಕ್ಷ್ ನ ತಾಯಿ ಕಣ್ಣೀರಿಡುತ್ತಾರೆ.

'ನನ್ನ ಎರಡು ತಿಂಗಳ ಮಗು ಒದ್ದಾಡುತ್ತಿದೆ. ಆದರೆ ನಾನು ಅಸಹಾಯಕನಾಗಿದ್ದೇನೆ. ಅವನ ದೇಹಕ್ಕೆ ಅಳವಡಿಸಿರುವ ಟ್ಯೂಬ್ ಗಳು ಕಿರಿಕಿರಿ ಉಂಟು ಮಾಡುತ್ತಿವೆ. ಹೃದಯವು ದೇಹಕ್ಕೆ ರಕ್ತವನ್ನು ಸರಿಯಾಗಿ ಪಂಪ್ ಮಾಡುತ್ತಿಲ್ಲ. ಶಸ್ತ್ರಚಿಕಿತ್ಸೆಯು ಉಳಿದಿರುವ ಒಂದೇ ದಾರಿ. ಇದಕ್ಕಾಗಿ ಆರು ಲಕ್ಷ ರುಪಾಯಿ ಬೇಕಾಗಿದೆ. ದಿನಗೂಲಿ ಮಾಡುವ ನಾನು ಇಷ್ಟು ಹಣದ ಬಗ್ಗೆ ಕಲ್ಪನೆ ಮಾಡಲು ಸಾಧ್ಯವಿಲ್ಲ ಮತ್ತು ಅದನ್ನು ಕಟ್ಟುವುದು ಹೇಗೆ?' ಎಂದು ದಕ್ಷ್ ನ ತಂದೆ ಹೇಳುತ್ತಾರೆ.

My 2 month old baby’s heart is not able to pump blood

ದಕ್ಷ್ ನ ಶಸ್ತ್ರಚಿಕಿತ್ಸೆಗೆ ಸುಮಾರು ಆರು ಲಕ್ಷ ರುಪಾಯಿ ಬೇಕಾಗಿದೆ. ಅವನ ತಂದೆ-ತಾಯಿ ಈಗ ಜನರ ನೆರವು ಕೇಳಿದ್ದಾರೆ. ನಮ್ಮ ನೆರವು ಬೇಕಾಗಿರುವ ಕುಟುಂಬಕ್ಕೆ ಸಹಾಯಹಸ್ತ ಚಾಚೋಣ. ಸಣ್ಣ ದೇಣಿಗೆಯು ದೊಡ್ಡ ಮಟ್ಟದಲ್ಲಿ ನೆರವಾಗುವುದು. ದಕ್ಷ್ ಬದುಕುಳಿಯಲಿ ಎಂದು ಹಾರೈಸೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X