ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಗಲ್ವಾನ್ ಕಣಿವೆಯಿಂದ ಹಿಂದಕ್ಕೆ ಸರಿದ ಭಾರತ-ಚೀನಾ ಪಡೆ

|
Google Oneindia Kannada News

ಲಡಾಖ್, ಜುಲೈ 6: ಗಲ್ವಾನ್ ಕಣಿವೆ ಪ್ರದೇಶದಿಂದ ಭಾರತ ಹಾಗೂ ಚೀನಾ ಸೇನೆ ಹಿಂದಕ್ಕೆ ಸರಿದಿದೆ.

Recommended Video

ಚಿತ್ರದುರ್ಗ ರೈತನ ಬದುಕನ್ನು ನಾಶ ಮಾಡಿದ ಕೊರೊನ | Chitradurga | Oneindia Kannada

ಚೀನಾ ಸೇನಾ ಪಡೆ ಗಡಿ ಭಾಗದಿಂದ ಹಿಂದೆ ಸರಿದಿರುವುದು ಸತ್ಯವೇ ಎಂಬುದರ ಕುರಿತು ಭಾರತೀಯ ಸೇನೆ ಪರಿಶೀಲನೆ ನಡೆಸುತ್ತಿದೆ.

ಜೂನ್ 30 ರಂದು ನಡೆದ ಒಪ್ಪಂದದ ಪ್ರಕಾರ ಎರಡೂ ಸೇನೆಯು ಗಲ್ವಾನ್ ಕಣಿವೆಯಿಂದ ಹಿಂದಕ್ಕೆ ಸರಿಯಬೇಕಿತ್ತು.

Re-location Has Taken Place At Galwan Valley From Both Sides

ಚೀನಾವು ತನ್ನ ಪಡೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿಜವಾಗಿಯೂ ಆಸಕ್ತಿ ಹೊಂದಿದ್ದಾರೆಯೇ ಎಂಬ ಮಾಹಿತಿ ಹೊರಬರಬೇಕಿದೆ.
ಕಳೆದ ವಾರ ಕಮಾಂಡರ್ ಹಂತದ ಸಭೆಯಲ್ಲಿ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಇಬ್ಬರೂ ಕೂಡ ತನ್ನ ಸೇನೆಯನ್ನು ಹಿಂಪಡೆಯುವ ಕುರಿತು ಒಪ್ಪಂದ ಮಾಡಿಕೊಮಡಿದ್ದರು. ಅವರಿರುವ ಪ್ರದೇಶದಿಂದ 2-3 ಕಿ.ಮೀ ಹಿಂದಕ್ಕೆ ಕರೆದುಕೊಳ್ಳಬೇಕು ಎಂದು ಹೇಳಲಾಗಿತ್ತು. ಜೂನ್ 15 ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತದ ಸೈನಿಕರು ಹುತಾತ್ಮರಾಗಿದ್ದರು.

ಇಡೀ ಪ್ರದೇಶ ಹೆಪ್ಪುಗಟ್ಟುವ ಚಳಿಯಿಂದ ಮುದುಡಿ ಹೋಗುತ್ತದೆ. ನದಿ ನೀರಿನ ಪ್ರವಾಹ ಚೀನಿ ಸೈನಿಕರ ಟೆಂಟ್‌ಗಳವರೆಗೆ ಚಾಚಿರುವುದು ಸ್ಯಾಟಲೈಟ್‌ ಚಿತ್ರಗಳಿಂದ ತಿಳಿದು ಬಂದಿದೆ.

ಪರಿಸ್ಥಿತಿ ಹೀಗೇ ಮುಂದುವರಿದರೆ ಶತ್ರು ಸೈನಿಕರು ಅಲ್ಲಿಂದ ಜಾಗ ಖಾಲಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಭಾರತೀಯ ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Explained Story: ದೂರದ ಚೀನಾ ಭಾರತದ ಗಡಿಗೆ ಹೊಂದಿಕೊಂಡಿದ್ದು ಹೇಗೆ?
ಕಣಿವೆ ಭಾಗದ ವಾತಾವರಣದಲ್ಲಿ ತಾಪಮಾನ ದಿಢೀರ್‌ ಏರಿಕೆಯಾಗಿದ್ದು ಸುತ್ತಲಿನ ಹಿಮ ಶಿಖರಗಳು ಕರಗಿ ನೀರಾಗಿ ಹರಿಯತೊಡಗಿವೆ.ಇದರಿಂದ ಗಲ್ವಾನ್‌ ನದಿಗೆ ಹಿಮ ಬಂಡೆಗಳೇ ಹರಿದು ಬರುತ್ತಿದ್ದು, ನೀರಿನ ಹರಿವಿನ ಮಟ್ಟ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ.

ಇದರ ಪರಿಣಾಮ ಇಡೀ ಪ್ರದೇಶದಲ್ಲಿ ರಕ್ತ ಹೆಪ್ಪುಗಟ್ಟಿಸುವ ಚಳಿಯ ವಾತಾವರಣವಿದೆ. ಸಂಘರ್ಷ ನಡೆದ ತಾಣದಿಂದ 5 ಕಿ.ಮೀ ದೂರದಲ್ಲಿ ಠಿಕಾಣಿ ಹೂಡಿರುವ ಚೀನಿ ಸೈನಿಕ

ಹಂತ ಹಂತವಾಗಿ ತಮ್ಮ ಸೇನೆಯನ್ನು ಹಿಂದಕ್ಕೆ ಪಡೆಯುವಂತೆ ಮಾತಾಗಿತ್ತು. ಇದಕ್ಕೆ ತಿಂಗಳುಗಳೇ ಹಿಡಿಯಬಹುದು ಎಂದು ಹೇಳಲಾಗಿತ್ತು. ಚೀನಾವು ಎಲ್‌ಎಸಿಯಲ್ಲಿ 20 ಸಾವಿರ ಸೈನಿಕರನ್ನು ನಿಯೋಜಿಸಿತ್ತು.

English summary
An confirm re-location has taken place at Galwan Valley Patrol Point 14 from both sides. A buffer zone has been created to avoid escalation. Equidistant from both India And China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X