ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ನಾಗರಿಕರಿಗೆ ಸಿಯಾಚಿನ್ ಪ್ರವೇಶ; ಗೊತ್ತಿರಬೇಕಾದ 5 ಸಂಗತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಸಾಮಾನ್ಯ ನಾಗರಿಕರಿಗೂ ಸಿಯಾಚಿನ್ ನೀರ್ಗಲ್ಲು ಹೇಗಿರುತ್ತದೆ ಎಂಬ ಅನುಭವ ದೊರೆಯಲಿ ಎಂಬ ಕಾರಣಕ್ಕೆ ಭಾರತೀಯ ಸೇನೆ ಪ್ರಸ್ತಾವವೊಂದನ್ನು ಮುಂದಿಟ್ಟಿದೆ. ಸೈನಿಕರು ಸಿಯಾಚಿನ್ ನಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬುದನ್ನು ಕಣ್ಣಾರೆ ನೋಡುವುದಕ್ಕೆ ಅವಕಾಶ ಒದಗಿಸಬೇಕು ಎಂಬುದು ಆ ಪ್ರಸ್ತಾವ.

ವಿಶ್ವದ ಅತ್ಯಂತ ಎತ್ತರದ ಕದನ ಭೂಮಿ ಸಿಯಾಚಿನ್ ಬಗ್ಗೆ ತುಂಬ ಆಸಕ್ತಿಕರವಾದ ಐದು ಸಂಗತಿಗಳು ಇಲ್ಲಿವೆ:
* ವ್ಯೂಹಾತ್ಮಕ ಕಾರಣಕ್ಕೆ ಸಿಯಾಚಿನ್ ಬಹಳ ಮುಖ್ಯವಾದದ್ದು. ಎಲ್ಲಿಯ ತನಕ ಇದರ ಮೇಲೆ ಭಾರತದ ಹತೋಟಿ ಇರುತ್ತದೋ ಅಲ್ಲಿಯವರೆಗೆ ಪಾಕಿಸ್ತಾನಿ ಸೇನೆಗೆ ಚೀನಿಯರ ಜತೆ ಸಂಪರ್ಕ ಸಾಧ್ಯವಿಲ್ಲ. ಆ ಮೂಲಕ ಲಡಾಖ್ ಗೆ ಯಾವುದೇ ಆತಂಕ ಎದುರಾಗುವುದಿಲ್ಲ. ಚೀನಾ ನಿಯಂತ್ರಣದಲ್ಲಿ ಇರುವ ಶಾಕ್ಸಗಂ ಕಣಿವೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಬಾಲ್ಟಿಸ್ತಾನ್ ಮಧ್ಯೆ ಈ ಸ್ಥಳವು ತಡೆಯಂತೆ ಇದೆ.

ಇಟ್ಟಿಗೆಯಂತಾಗುವ ಜ್ಯೂಸ್, ಕಲ್ಲಿನಂತಾಗುವ ಮೊಟ್ಟೆ; ಇದು ಸಿಯಾಚಿನ್ಇಟ್ಟಿಗೆಯಂತಾಗುವ ಜ್ಯೂಸ್, ಕಲ್ಲಿನಂತಾಗುವ ಮೊಟ್ಟೆ; ಇದು ಸಿಯಾಚಿನ್

* ಒಂದು ದಿನ ಭಾರತವು ಸಿಯಾಚಿನ್ ನ ಭದ್ರತೆಗೆ ಅಂತಲೇ ಐದರಿಂದ ಏಳು ಕೋಟಿ ವ್ಯಯಿಸುತ್ತದೆ. ಸಿಯಾಚಿನ್ ನಲ್ಲಿ ಮೂರು ಸಾವಿರ ಮಂದಿ ಸೈನಿಕರನ್ನು ನಿಯೋಜಿಸಿದೆ. ಅಂದಹಾಗೆ ಸಿಯಾಚಿನ್ ನಲ್ಲಿ ಕೆಲವೊಮ್ಮೆ ಮೈನಸ್ ಅರವತ್ತು ಡಿಗ್ರಿ ಸೆಲ್ಷಿಯಸ್ ತನಕ ತಾಪಮಾನ ಕುಸಿಯುತ್ತದೆ.

Must Know Facts About Siachen Glacier Before You Visit

* ಮೂವತ್ತೈದು ವರ್ಷಗಳ ಹಿಂದೆ ಸಿಯಾಚಿನ್ ಅನ್ನು ಭಾರತ ನಿಯಂತ್ರಣಕ್ಕೆ ತೆಗೆದುಕೊಂಡ ಮೇಲೆ ಸಾವಿರಕ್ಕೂ ಹೆಚ್ಚು ಯೋಧರು ಇಲ್ಲಿ ಸಾವನ್ನಪ್ಪಿದ್ದಾರೆ. ಸಂಖ್ಯಾ ದೃಷ್ಟಿಯಿಂದ ಹೇಳಬೇಕು ಅಂದರೆ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರಿಗಿಂತ ದುಪ್ಪಟ್ಟು ಸೈನಿಕರು ಸಿಯಾಚಿನ್ ನಲ್ಲಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿಯಿಂದಲೇ ಇನ್ನೂರಾ ಇಪ್ಪತ್ತು ಮಂದಿ ಮೃತಪಟ್ಟಿದ್ದರೆ, ಇಲ್ಲಿನ ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಹಲವರು ಸಾವನ್ನಪ್ಪಿದ್ದಾರೆ.

ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ

* ಸಮುದ್ರ ಮಟ್ಟಕ್ಕಿಂತ ಇಪ್ಪತ್ತೊಂದು ಸಾವಿರ ಅಡಿಗೂ ಮೇಲೆ ಇರುವ ಈ ನೀರ್ಗಲ್ಲಿನಲ್ಲಿ ಸಾಮಾನ್ಯವಾಗಿ ಸೈನಿಕರಿಗೆ ಮೂರು ತಿಂಗಳು ನಿಯೋಜನೆ ಮಾಡಲಾಗುತ್ತದೆ. ಸಿಯಾಚಿನ್ ನ ಕೆಲವು ಸ್ಥಳಗಳನ್ನು ತಲುಪುವುದಕ್ಕೆ ಅಂದರೆ ಯೋಧರು ನೂರಾ ಇಪ್ಪತ್ತೆಂಟು ಕಿಲೋಮೀಟರ್ ದೂರ ಕ್ರಮಿಸಲು ಇಪ್ಪತ್ತೆಂಟು ದಿನಗಳ ಕಾಲ ಟ್ರೆಕ್ಕಿಂಗ್ ಮಾಡಿಕೊಂಡು ಹೋಗಬೇಕಾಗುತ್ತದೆ.

ಸಿಯಾಚಿನ್ ನಲ್ಲಿನ ಯೋಧರು ಸ್ನಾನಕ್ಕಾಗಿ ಇನ್ನು 90 ದಿನ ಕಾಯಬೇಕಿಲ್ಲಸಿಯಾಚಿನ್ ನಲ್ಲಿನ ಯೋಧರು ಸ್ನಾನಕ್ಕಾಗಿ ಇನ್ನು 90 ದಿನ ಕಾಯಬೇಕಿಲ್ಲ

* ಸದ್ಯಕ್ಕೆ ಸಿಯಾಚಿನ್ ನಲ್ಲಿ ಭಾರತದ್ದೇ ಮೇಲುಗೈ. ಪಾಕಿಸ್ತಾನದ ನೆಲೆಗಳು ಮೂರು ಸಾವಿರ ಅಡಿ ಕೆಳಗೆ ಇವೆ. ಸಿಯಾಚಿನ್ ನಲ್ಲಿನ ಸೇನೆ ನಿಯೋಜನೆ ತೆಗೆಯಬೇಕು ಎಂದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹಲವು ಸುತ್ತಿನ ಮಾತುಕತೆ ಆಗಿದೆ. ದ್ವಿಪಕ್ಷೀಯ ಮಾತುಕತೆಗಳು ವಿಫಲವಾಗಿವೆ.

English summary
Siachen glacier is the world's highest battle field. Here is the must know facts about this place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X