ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನಿಗೇ ತಲಾಖ್ ನೀಡಿದ ದಿಟ್ಟ ಮುಸ್ಲಿಂ ಮಹಿಳೆ!

By Prasad
|
Google Oneindia Kannada News

ಬರೇಲಿ (ಉತ್ತರಪ್ರದೇಶ), ಮೇ 13 : ಮೂರು ತಲಾಖ್ ನೀಡಿ ವಿಚ್ಛೇದನ ನೀಡುವುದು ಮುಸ್ಲಿಂ ಸಮುದಾಯದಲ್ಲಿ ಕಾನೂನಾತ್ಮಕವೆ ಎಂಬ ಕುರಿತು ಸುಪ್ರೀಂ ಕೋರ್ಟಿನಲ್ಲಿ ವಾದವಿವಾದಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ವರದಕ್ಷಿಣೆಗೆ ಸಂಬಂಧಿಸಿದಂತೆ ದೌರ್ಜನ್ಯಕ್ಕೊಳಾಗಿರುವ ಮುಸ್ಲಿಂ ಮಹಿಳೆಯೊಬ್ಬರು ತನ್ನ ಗಂಡನಿಗೇ ತಲಾಖ್ ನೀಡಿ ಸುದ್ದಿ ಮಾಡಿದ್ದಾರೆ.

ನಿಜಕ್ಕೂ ಇವರ ಧೈರ್ಯವನ್ನು ಮೆಚ್ಚಲೇಬೇಕು. 6 ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆ, ತನ್ನ ಗಂಡ ಮತ್ತು ಮನೆಯವರು ಸತತವಾಗಿ ನೀಡುತ್ತಿದ್ದ ವರದಕ್ಷಿಣೆ ಕಿರುಕುಳವನ್ನು ತಾಳಲಾರದೆ, ತನ್ನ ಗಂಡನಿಗೇ ವಿಚ್ಛೇದನ ನೀಡಿ ಭಲೇ ಎನಿಸಿಕೊಂಡಿದ್ದಾರೆ.[ಐವರು ನ್ಯಾಯಮೂರ್ತಿಗಳ ಕೈಯಲ್ಲಿ ಮೂರು ತಲಾಖ್ ಹಣೆಬರಹ]

ಇದು ಸಾಲದೆಂಬಂತೆ, ಗಂಡು ಮಗುವಿನ ಬದಲು ಹೆಣ್ಣು ಮಗುವಿಗೆ ಜನ್ಮ ನೀಡಿದ ನೆಪವಿಟ್ಟುಕೊಂಡು ಆಕೆಯನ್ನು ಗಂಡ ದನಕ್ಕೆ ಬಡಿದಂತೆ ಬಡಿಯುತ್ತಿದ್ದ. ಈ ಎಲ್ಲ ದೌರ್ಜನ್ಯಗಳಿಗೆ ವಿರಾಮ ಹಾಕುವ ಉದ್ದೇಶದಿಂದ ತನ್ನ ಗಂಡನಿಗೇ ತಲಾಖ್ ನೀಡಿ ಸಮಾಜ ನಿಬ್ಬೆರಗಾಗುವಂತೆ ಮಾಡಿದ್ದಾರೆ.

Muslim woman unable to bear torture gives talaq to husband

"ನನ್ನ ಮತ್ತು ನನ್ನ ಮಗಳ ಮೇಲೆ ಗಂಡನಿಗೆ ಯಾವುದೇ ಪ್ರೀತಿ ಇರಲಿಲ್ಲ. ಜೀವನದ ಬಗ್ಗೆ ಕಾಳಜಿ ಇರಲಿಲ್ಲ. ದಿನನಿತ್ಯ ನನ್ನನ್ನು ಥಳಿಸುತ್ತಿದ್ದ. ಇದನ್ನೆಲ್ಲ ಸಹಿಸಲಾರದೆ ನಾನು ನನ್ನ ತವರುಮನೆಗೆ ಬಂದಿದ್ದೇನೆ. ಶರಿಯತ್ ಪ್ರಕಾರ ಗಂಡನಿಗೆ ತಲಾಖ್ ನೀಡಿದ್ದೇನೆ" ಎಂದಿದ್ದಾರೆ.[ತಲಾಖ್ ವಿರುದ್ಧ ಹನುಮಾನ್ ಮೊರೆಹೋದ ಮುಸ್ಲಿಂ ಮಹಿಳೆಯರು]

ಶರಿಯತ್ ಕಾನೂನಿನ ಪ್ರಕಾರ, ತನಗೆ ಮತ್ತು ಮಗಳಿಗೆ ಗಂಡ ಪರಿಹಾರ ನೀಡಬೇಕು. ಅಲ್ಲದೆ, ವರದಕ್ಷಿಣೆ ಎಂದು ನೀಡಲಾಗಿದ್ದ ಎಲ್ಲ ಹಣ ಮತ್ತು ಒಡವೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆ ಮಹಿಳೆ ಆಗ್ರಹಿಸಿದ್ದಾರೆ. ತನನ್ನು ಅತ್ಯಂತ ಕೀಳಾಗಿ ನೋಡಿದ್ದಕ್ಕೆ ಗಂಡನಿಗೆ ತಕ್ಕ ಶಿಕ್ಷೆಯೂ ಆಗಬೇಕು ಎಂದು ಅವರು ಕೋರಿದ್ದಾರೆ.

ಶರಿಯತ್ ಕಾನೂನಿನ ಪ್ರಕಾರ, ಮದುವೆ ಸಮಯದಲ್ಲಿ ಆದ ಒಪ್ಪಂದದಂತೆ, ಮದುವೆಯ ನಂತರ ಗಂಡ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಆಕೆ ಆತನಿಂದ ದೂರವಾಗಬಹುದು ಎಂದು ಧರ್ಮಗುರುಗಳು ವಿವರಿಸುತ್ತಾರೆ. ಗಂಡನ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕೌಟುಂಬಿಕ ದೌರ್ಜನ್ಯದ ದೂರನ್ನೂ ನೀಡಲಾಗಿದೆ.

English summary
A bold muslim woman has decided to give talaq (divorce) to her husband, who is allegedly torturing her to get more dowry. She has been beaten up as she could not give birth to male child. Under Shariat the woman wants her husband to be punished.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X