ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಹಯ್ಯ ಕೊಂದವರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದ ಮುಸ್ಲಿಂ ಸಂಘಟನೆ

|
Google Oneindia Kannada News

ನವದೆಹಲಿ, ಜೂನ್ 30: ರಾಜಸ್ಥಾನದ ಉದಯ್‌ಪುರ ಧನ್‌ಮಂಡಿಯಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ನನ್ನು ಬರ್ಬರವಾಗಿ ಕೊಂದವರನ್ನು ರಾಕ್ಷಸರು, ಭಯೋತ್ಪಾದಕರು ಎಂದು ಕರೆದಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಕೊಲೆಗಾರರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದೆ.

ಅಮಾನವೀಯ ಕೃತ್ಯ ಎಸಗುವ ಮೂಲಕ ದುಷ್ಕರ್ಮಿಗಳು ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ್ದಾರೆ, ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿನ ಶಾಂತಿಯುತ ಮುಸ್ಲಿಮರಿಗೆ ಅವಮಾನಿಸಿದ್ದಾರೆ ಎಂದು ಆರ್‌ಎಸ್‌ಎಸ್-ಸಂಯೋಜಿತ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.

ಉದಯಪುರ ಟೈಲರ್‌ನ ಹಂತಕರಿಗೆ ಪಾಕ್‌ ಉಗ್ರಗಾಮಿ ಗುಂಪಿನ ಜೊತೆ ಸಂಪರ್ಕ?ಉದಯಪುರ ಟೈಲರ್‌ನ ಹಂತಕರಿಗೆ ಪಾಕ್‌ ಉಗ್ರಗಾಮಿ ಗುಂಪಿನ ಜೊತೆ ಸಂಪರ್ಕ?

ಟೈಲರ್ ಕನ್ಹಯ್ಯಾ ಲಾಲ್‌ನನ್ನು ಕೊಂದ ರಿಯಾಜ್ ಅಖ್ತಾರಿ ಮತ್ತು ಅಪರಾಧವನ್ನು ಚಿತ್ರೀಕರಿಸಿದ ಗೌಸ್ ಮೊಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಇತರ ಮೂವರನ್ನು ಬಂಧಿಸಿದ್ದಾರೆ.

Muslim Rashtriya Manch Demands Death Sentence For Kanhaiya Lal Murderers

"ಇಂತಹ ಘೋರ ಹತ್ಯೆಯಿಂದ ಮಂಚ್ ತೀವ್ರ ಆಘಾತಕ್ಕೊಳಗಾಗಿದೆ ಮತ್ತು ಈ ಘಟನೆಯನ್ನು ಬಲವಾಗಿ ಖಂಡಿಸುತ್ತದೆ" ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ಹೇಳಿದೆ.

ಮಂಗಳವಾರ ಉದಯಪುರದ ಧನ್ ಮಂಡಿ ಪ್ರದೇಶದಲ್ಲಿ ಕನ್ಹಯ್ಯಾ ಲಾಲ್‌ನನ್ನು ಕೊಂದ ಇಬ್ಬರು ವ್ಯಕ್ತಿಗಳು, ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕಾಗಿ ಹತ್ಯೆ ಮಾಡಿದ್ದೇವೆ ಎಂದು ವಿಡಿಯೋ ಮಾಡುವ ಮೂಲಕ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡಿರುವುದಾಗಿ ಹೇಳಿದ್ದರು, ಇದರಿಂದ ರಾಜಸ್ಥಾನದಲ್ಲಿ ಗಲಭೆ ಉಂಟಾಗಿತ್ತು.

ಕನ್ನಯ್ಯ ಲಾಲ್ ಕೊಲೆ: ದೇಶದಲ್ಲಿ ಮದರಾಸಗಳನ್ನು ಬ್ಯಾನ್ ಮಾಡಬೇಕೆಂದ ಈಶ್ವರಪ್ಪ

ತ್ವರಿತ ನ್ಯಾಯಾಲಯ ಸ್ಥಾಪನೆಗೆ ಒತ್ತಾಯ

ಆರ್‌ಎಸ್‌ಎಸ್-ಸಂಬಂಧಿತ ಮುಸ್ಲಿಂ ಸಂಘಟನೆ ಉದಯಪುರ ಟೈಲರ್ ಕೊಲೆಗಾರರಿಗೆ ಮರಣದಂಡನೆ ಶಿಕ್ಷೆ ನೀಡುವಂತೆ ಮುಸ್ಲಿಂ ಸಂಘಟನೆ ಆಗ್ರಹಿಸಿದೆ.ಆರ್‌ಎಸ್‌ಎಸ್-ಸಂಬಂಧಿತ ಮುಸ್ಲಿಂ ಸಂಘಟನೆ ಉದಯಪುರ ಟೈಲರ್ ಕೊಲೆಗಾರರಿಗೆ ಮರಣದಂಡನೆ ಶಿಕ್ಷೆ ನೀಡುವಂತೆ ಮುಸ್ಲಿಂ ಸಂಘಟನೆ ಆಗ್ರಹಿಸಿದೆ.

Muslim Rashtriya Manch Demands Death Sentence For Kanhaiya Lal Murderers

"ಈ ಭಯೋತ್ಪಾದಕರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಮಂಚ್ ಒತ್ತಾಯಿಸುತ್ತದೆ. ಅವರು ಮಾಡಿದ ಅಮಾನುಷ ಅಪರಾಧಕ್ಕಾಗಿ ಅವರನ್ನು ಗಲ್ಲಿಗೇರಿಸಬೇಕು. ಪ್ರಕರಣದ ಆರೋಪಿಗಳ ವಿಚಾರಣೆಗಾಗಿ ಸರ್ಕಾರವು ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಬೇಕು" ಎಂದು ಮಂಚ್ ಒತ್ತಾಯಿಸಿದೆ.

ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆ

ಕನ್ಹಯ್ಯ ಲಾಲ್ ನೂಪರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಆದರೆ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ತನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಧನ್‌ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಕಾನೂನು ಕ್ರಮ ಜರುಗಿಸುವ ಬದಲು ರಾಜಿ ಸಂಧಾನ ಮಾಡಿ ಕಳುಹಿಸಿದ್ದರು.

ಆದರೆ ಮಂಗಳವಾರ ಅಂಗಡಿಯಲ್ಲಿ ಕೆಲಸ ಮಾಡುವ ವೇಳೆ ಗ್ರಾಹಕರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಕನ್ಹಯ್ಯ ಲಾಲ್‌ ಕೊಲೆ ಮಾಡಿದ್ದಾರೆ. ಕೊಲೆ ಮಾಡುವುದನ್ನು ವೀಡಿಯೋ ಮಾಡಿ ಬಿಡುಗಡೆ ಮಾಡಿದ್ದಲ್ಲದೆ ಪ್ರಧಾನಿ ಮೋದಿಗೂ ಜೀವ ಬೆದರಿಕೆ ಹಾಕಿದ್ದರು.

English summary
Muslim Rashtriya Manch (MRM) demanded Death Sentense punishment For Those who brutally killed Kanhaiya Lal in Udaipur's Dhan Mandi Area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X