ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರ ಸ್ಮಶಾನದಲ್ಲಿ ಭಯೋತ್ಪಾದಕರ ಶವಸಂಸ್ಕಾರಕ್ಕೆ ಸಿಗಲಿಲ್ಲ ಜಾಗ!

|
Google Oneindia Kannada News

ಜಮ್ಮು, ಸೆಪ್ಟೆಂಬರ್ 21: ಭಾರತೀಯ ಸೇನೆ ಹೊಡೆದುರುಳಿಸಿದ ಮೂವರು ಭಯೋತ್ಪಾದಕರ ಶವದ ಅಮತಿಮ ಸಂಸ್ಕಾರಕ್ಕೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಸ್ಮಶಾನವೊಂದರಲ್ಲಿ ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡದ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಯ್ಸಿ ಜಿಲ್ಲೆಯ ಕಕ್ರಯಾಲ್ ನಲ್ಲಿ ನಡೆದಿದೆ.

ಸೆಪ್ಟೆಂಬರ್ 13 ರಂದು ಭಾರತೀಯ ಸೇನೆ ಮತ್ತು ಭಯೋತಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಜೈಶ್ ಇ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮೂವರು ಭಯೋತ್ಪಾದಕರನ್ನು ಹತ್ಯೆಮಾಡಲಾಗಿತ್ತು.

ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಅವರ ದೇಹದ ಅಂತ್ಯ ಸಂಸ್ಕಾರಕ್ಕೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಸ್ಮಶಾನವೊಂದರಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, 'ಭಯೋತ್ಪಾದಕರಿಗೂ ನಾವು ನಂಬಿರುವ ಇಸ್ಲಾಮಿಕ್ ತತ್ತ್ವಗಳಿಗೂ ತಾಳತಂತು ಇಲ್ಲ. ಅವರು ಪಾಕಿಸ್ತಾನಕ್ಕೆ ಸೇರಿದವರು. ಅವರು ತುಳಿದ ಹಾದಿಯನ್ನು ನಾವೆಂದಿಗೂ ಬೆಂಬಲಿಸುವುದಿಲ್ಲ. ಆದ್ದರಿಂದ ಅವರ ಶವಕ್ಕೂ ನಮ್ಮಲ್ಲಿ ಜಾಗವಿಲ್ಲ' ಎಂದು ಸ್ಮಶಾನದ ವ್ಯವಸ್ಥಾಪಕರು ಹೇಳಿದ್ದಾರೆ.

Muslim graveyards say no to Pak terrorists, police conduct burial

ಆದರೆ ಶವವನ್ನು ಬಹಳ ದಿನ ಹಾಗೇ ಇಟ್ಟುಕೊಳ್ಳುವುದಕ್ಕಾಗುವುದಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಮೌಲ್ವಿಯೊಬ್ಬರನ್ನು ಕರೆಸಿ ಬೇರೆಡೆಗೆ ಅವರ ಶವಸಂಸ್ಕಾರ ಮಾಡಲಾಗಿದೆ. ಸೆಪ್ಟೆಂಬರ್ 17 ರಂದು ರಾತ್ರಿ ಗುಪ್ತ ಸ್ಥಳವೊಂದರಲ್ಲಿ ಶವ ಸಂಸ್ಕಾರ ಮಾಡಲಾಗಿದೆ.

English summary
Authorities in Jammu gave Islamic burial to three slain terrorists after the Muslim graveyards denied space to them. The three terrorists, belonging to the Jaish-e-Mohammad outfit, were Pakistan nationals, who were smoked out during a fierce gun-battle with the security forces on September 13 in Dirthi village in the Kakryal area of Reasi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X