ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗವದ್ಗೀತೆ ಸ್ಪರ್ಧೆ: 3 ಸಾವಿರ ಜನರಲ್ಲಿ ಮುಸ್ಲಿಂ ಬಾಲಕಿ ಪ್ರಥಮ

|
Google Oneindia Kannada News

ಮುಂಬೈ, ಏ. 4: ಭಗವದ್ಗೀತೆ ಸಂಬಂಧಿಸಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಮುಂಬೈನ ಮುಸ್ಲಿಂ ಬಾಲಕಿಯೊಬ್ಬಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಭಾಗವಹಿಸಿದ್ದ 3000 ವಿದ್ಯಾರ್ಥಿಗಳಲ್ಲಿ ಬಾಲಕಿ ಮೊದಲಿಗಳಾಗಿ ಹೊರಹೊಮ್ಮಿರುವುದು ವಿಶೇಷ.

6 ನೇ ತರಗತಿ ವಿದ್ಯಾರ್ಥಿನಿ ಮರಿಯಮ್ ಸಿದ್ದಿಕ್ವಿ, ಇಸ್ಕಾನ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಗೀತೆಗೆ ಸಂಬಂಧಿಸಿದ 100 ಅಂಕಗಳ ಪ್ರಶ್ನೆ ಕೇಳಲಾಗಿತ್ತು.[ಭಗವದ್ಗೀತೆ ಸುಡಲೆತ್ನಿಸಿದ ಪ್ರೊ. ಭಗವಾನ್ ವಿರುದ್ಧ ದೂರು]

bhagavad gita

ನನ್ನ ಶಿಕ್ಷಕರು ಸ್ಪರ್ಧೆಯ ಬಗ್ಗೆ ಹೇಳಿದ್ದರು. ಪುಸ್ತಕ ಏನನ್ನು ಹೇಳುತ್ತದೆ ಎಂದು ಅರಿಯಲು ಇದೊಂದು ಉತ್ತಮ ಅವಕಾಶ ಎಂದು ಭಾವಿಸಿದೆ. ಪುಸ್ತಕವನ್ನು ಓದಿ ಪರೀಕ್ಷೆಗೆ ತಯಾರಿ ನಡೆಸಿದ್ದು ಸಫಲವಾಯಿತು ಎಂದು ಬಾಲಕಿ ಪ್ರಶಸ್ತಿ ಸ್ವೀಕರಿಸಿದ ನಂತರ ಹೇಳಿದಳು.

ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಆಂಗ್ಲ ಭಾಷೆಯಲ್ಲಿ ಕೇಳಲಾಗಿತ್ತು. ಸ್ಪರ್ಧೆಗೂ ಒಂದು ತಿಂಗಳ ಮುಂಚೆ ಇಸ್ಕಾನ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿತ್ತು, ನಾನು ಪುಸ್ತಕವನ್ನು ಸಂಪೂರ್ಣವಾಗಿ ಓದಿ ಗೀತೆ ಏನನ್ನು ಹೇಳುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿದೆ ಎಂದು ಬಾಲಕಿ ಅಭಿಪ್ರಾಯ ವ್ಯಕ್ತಪಡಿದ್ದಾಳೆ. [ಭಗವದ್ಗೀತೆ ರಾಷ್ಟ್ರೀಯ ಗ್ರಂಥವಾಗಬೇಕೇ]

ಸಿದ್ದಕ್ವಿ ತನ್ನ ಪಾಲಕರ ಜತೆ ಸದಾ ಧರ್ಮಕ್ಕೆ ಸಂಬಂಧಿಸಿದ ಮತುಕತೆ ನಡೆಸುತ್ತಿರುತ್ತಾಳೆ. ಪ್ರತಿಯೊಬ್ಬರು ಇತರರ ಧರ್ಮವನ್ನು , ಸಂಪ್ರದಾಯವನ್ನು ಗೌರವಿಸಬೇಕು ಎಂದು ನಮ್ಮ ಕುಟುಂಬ ಮೊದಲಿನಿಂದಲೂ ನಂಬಿಕೊಂಡು ಬಂದಿದೆ. ಸಮಾಜದ ಕೆಲ ಜನರ ದಾರಿತಪ್ಪಿಸುವಿಕೆಯಿಂದ ದುರ್ಘಟನೆಗಳು ನಡೆಯುತ್ತವೆ ಎಂದು ಬಾಲಕಿ ತಂದೆ ಆಸಿಫ್ ಸಿದ್ದಕ್ವಿ ಹೇಳುತ್ತಾರೆ.

ಬಾಲಕಿಯ ಸಾಧನೆಯನ್ನು ಶಿಕ್ಷಕರು ಮೆಚ್ಚಿಕೊಂಡಿದ್ದಾರೆ. ಓದಿನಲ್ಲಿಯೂ ಸದಾ ಮುಂದಿರುವ ಮರಿಯಮ್ ಈ ಬಗೆಯ ಸ್ಪರ್ಧಾ ಚಟುವಟಿಕೆಯಲ್ಲೂ ಭಾಗವಹಿಸುತ್ತಾಳೆ ಎಂದು ಆಕೆಯ ಶಿಕ್ಷಕಿ ಸಪ್ನಾ ಬ್ರಹ್ಮಾನಂದಕರ್ ತಿಳಿಸಿದ್ದಾರೆ. ಇಸ್ಕಾನ್ ಕಳೆದ ಜನವರಿ ತಿಂಗಳಿನಲ್ಲಿ ಸ್ಪರ್ಧೆ ಆಯೋಜಿಸಿದ್ದು ಮಾರ್ಚ್ ತಿಂಗಳಲ್ಲಿ ಫಲಿತಾಂಶ ಘೋಷಣೆ ಮಾಡಿತ್ತು.

English summary
Twelve-year-old Maryam Siddiqui is a rank holder at the exams in school. But recently, the class VI student has aced a written competition based on the Bhagwad Gita. The Muslim girl has won the first position among over 3,000 participants at the 'Gita Champions League' contest, organized by International Society for Krishna Consciousness (Iskcon).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X