ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ನ್‍ಬಿಲ್ ಫೆಸ್ಟಿವಲ್-2019 ಗ್ರ್ಯಾಂಡ್ ಫಿನಾಲೆಗೆ ಸಂಗೀತ ಸಾಮ್ರಾಟ ಎ.ಆರ್.ರಹಮಾನ್

|
Google Oneindia Kannada News

ಕಿಸಾಮ, ಡಿಸೆಂಬರ್ 12: ಭಾರತದ ಸುದೀರ್ಘ ಸಾಂಸ್ಕೃತಿಕ ಉತ್ಸವ ಎನಿಸಿದ 'ದ ಹಾರ್ನ್‍ಬಿಲ್ ಫೆಸ್ಟಿವಲ್' ತನ್ನ ಬ್ಯಾಂಗ್‍ನ 10 ದಿನಗಳ ಪಯಣವನ್ನು ಕೊನೆಗೊಳಿಸಿದೆ. ಸಂಗೀತ ಸಾಮ್ರಾಟ ಮತ್ತು ಗ್ರಾಮಿ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಅವರು ಕಿಸಾಮಾದಲ್ಲಿ ನಡೆದ ಉತ್ಸವದ ಕೊನೆಯ ದಿನಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿದ್ದರು.

ನಾಗಾಲ್ಯಾಂಡ್‍ನ ಮುಖ್ಯಮಂತ್ರಿ ನೀಪು ರಿಯೊ ಸಮಾರೋಪ ಸಮಾರಂಭದ ಅತಿಥಿಗಳಾಗಿ ಆಗಮಿಸಿ, 10 ದಿನಗಳ ಸಾಂಸ್ಕೃತಿಕ ಉತ್ಸವಕ್ಕೆ ಮಂಗಲ ಹಾಡಿದರು. ಕಳೆದ ಹಲವು ವರ್ಷಗಳಿಂದ ಈ ಉತ್ಸವ ವಿಶ್ವಮನ್ನಣೆ ಗಳಿಸಿದ್ದು, ಕಲೆ, ಸಂಗೀತ ಹಾಗೂ ಸಂಸ್ಕೃತಿಯ ಸಮ್ಮಿಲನದೊಂದಿಗೆ ಅಗಾಧ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಈ ಅಪೂರ್ವ ಸಮಾರಂಭದಲ್ಲಿ ವಿಶ್ವದ ವಿವಿಧೆಡೆಗಳಿಂದ ಆಗಮಿಸಿದ್ದ 2.5 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇದು ಮತ್ತೆ ಭಾರತದ ಅತಿದೊಡ್ಡ ಸಾಂಸ್ಕೃತಿಕ ಹಬ್ಬ ಎಂಬ ಹೆಗ್ಗಳಿಕೆ ಪಡೆಯಿತು.

ಹಾರ್ನ್‍ಬಿಲ್ ಫೆಸ್ಟಿವಲ್‍ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಎ.ಆರ್. ರೆಹಮಾನ್ ಅವರು, ನಾಗಾಲ್ಯಾಂಡ್‍ನ ರಾಜಧಾನಿ ಕೋಹಿಮಾದ ಬೈಪಾಸ್‍ನಲ್ಲಿರುವ ಕೋಹಿಮಾ ಅನಾಥಾಲಯ ಮತ್ತು ನಿರ್ಗತಿಕರ ಗೃಹಕ್ಕೆ ಭೇಟಿ ನೀಡಿದರು.

ಅನಾಥಾಶ್ರಮದಲ್ಲಿ ಅವರನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸಲಾಯಿತು. ನೆರೆದಿದ್ದ ಸಮಸ್ತ ಮಕ್ಕಳು "ವೆಲ್‍ಕಮ್ ಟೂ ದ ಫ್ಯಾಮಿಲಿ" ಗೀತೆಯನ್ನು ಹಾಡುವ ಮೂಲಕ ಸಂಗೀತ ದಿಗ್ಗಜನನ್ನು ಸ್ವಾಗತಿಸಿದರು. ಸಂಗೀತ ಮತ್ತು ಕಲಾ ಕಾರ್ಯಪಡೆಯ ಸಲಹೆಗಾರ ತೇಜಾ ಮೆರು, ಈ ಅನಾಥಾಲಯದ ಬಗ್ಗೆ ಸಂಕ್ಷಿಪ್ತ ವಿವರ ನೀಡಿದರು. ಜತೆಗೆ ಕಳೆದ 50 ವರ್ಷಗಳಿಂದ ತಮ್ಮ ಪಯಣ ಈ ಅನಾಥಾಲಯದ ಜತೆಜತೆಗೆ ಹೇಗೆ ಸಾಗಿದೆ ಎನ್ನುವುದನ್ನು ಭಾವಸ್ಪರ್ಶಿಯಾಗಿ ಬಣ್ಣಿಸಿದರು.

ಮಕ್ಕಳ ಶಿಕ್ಷಣಕ್ಕಾಗಿ ರೆಹಮಾನ್ ಯೋಜನೆ

ಮಕ್ಕಳ ಶಿಕ್ಷಣಕ್ಕಾಗಿ ರೆಹಮಾನ್ ಯೋಜನೆ

ಸಂಗೀತ ದಿಗ್ಗಜರ ಮುಂದೆ ಅನಾಥಾಲಯದ ಮಕ್ಕಳು ಆಕರ್ಷಕ ಸಂಗೀತ ಪ್ರದರ್ಶನ ನೀಡಿದರು. ಜತೆಗೆ ಸಮೂಹಗೀತೆ ಹಾಡಿ ರಂಜಿಸಿದರು. ರಹಮಾನ್ ಅವರ ಸನ್‍ಶೈನ್ ಆರ್ಕೆಸ್ಟ್ರಾ ತಂಡಕ್ಕೆ 20 ಮಕ್ಕಳನ್ನು ಈ ಅನಾಥಾಲಯದಿಂದ ಆಯ್ಕೆ ಮಾಡಲಾಗಿದೆ ಎಂದು ಈ ಸಂದರ್ಭದಲ್ಲಿ ಮೆರು ಘೋಷಿಸಿದರು. ಕಡಿಮೆ ಆದಾಯದ ಕುಟುಂಬಗಳ ಮಕ್ಕಳ ಶಿಕ್ಷಣಕ್ಕಾಗಿ ರಹಮಾನ್ ಅವರು ಚೆನ್ನೈನಲ್ಲಿ ಆರಂಭಿಸಿರುವ ವಿನೂತನ ಯೋಜನೆ ಇದಾಗಿದ್ದು, ಕ್ರಮೇಣ ಇವರನ್ನು ತಮ್ಮ ಸಂಗೀತ ತಂಡದಲ್ಲಿ ಸೇರಿಸಿಕೊಳ್ಳಲು ರಹಮನ್ ಉದ್ದೇಶಿಸಿದ್ದಾರೆ. ರಹಮಾನ್ ಅವರ ಸನ್‍ಶೈನ್ ಆರ್ಕೆಸ್ಟ್ರಾದಲ್ಲಿರುವ ಸೌಲಭ್ಯವಂಚಿತ ಮಕ್ಕಳು ಈಗಾಗಲೇ ಬ್ರಿಟನ್, ಸಿಂಗಾಪುರ ಮತ್ತು ಇತರ ಕಡೆಗಳಲ್ಲಿ ಕಾರ್ಯಕ್ರಮ ನೀಡಿದ್ದು, ರೆಹಮಾನ್ ಅವರ ರೆಕಾರ್ಡಿಂಗ್ ಸೌಂಡ್‍ಟ್ರ್ಯಾಕ್‍ನ ಅವಿಭಾಜ್ಯ ಅಂಗವಾಗಿದ್ದಾರೆ.

ವಿಶ್ವಖ್ಯಾತಿಯ ಸಂಗೀತ ಬ್ಯಾಂಡ್‍ಗಳು ಭಾಗಿ

ವಿಶ್ವಖ್ಯಾತಿಯ ಸಂಗೀತ ಬ್ಯಾಂಡ್‍ಗಳು ಭಾಗಿ

ಹಾರ್ನ್‍ಬಿಲ್ ಫೆಸ್ಟಿವಲ್-2019ರಲ್ಲಿ 50ಕ್ಕೂ ಹೆಚ್ಚು ವಿಶ್ವಖ್ಯಾತಿಯ ಸಂಗೀತ ಬ್ಯಾಂಡ್‍ಗಳು ಮತ್ತು ಖ್ಯಾತ ಸಂಗೀತಗಾರರು ಕಾರ್ಯಕ್ರಮ ನೀಡಿ ರಂಜಿಸಿದರು. ಪದ್ಮಭೂಷಣ ಮತ್ತು ಗ್ರ್ಯಾಮ ಪ್ರಶಸ್ತಿ ವಿಜೇತ ಪಂಡಿತ್ ವಿಶ್ವಮೋಹನ ಭಟ್ ಅವರ ವೀಣಾವಾದನ ರಾಜಭವನದಲ್ಲಿ ನಡೆಯಿತು. ನಾಗಾಲ್ಯಾಂಡ್ ರಾಜ್ಯಪಾಲರು ಈ ವಿಶೇಷ ಆವೃತ್ತಿಯ ಹ್ಯಾಂಡ್‍ಶೇಕ್ ಕಚೇರಿಯನ್ನು ಆಯೋಜಿಸಿದ್ದರು. ಅಪೆ ಎಕೋಸ್ ಮತ್ತು ದುವಾಲಿಸ್ಟ್ ಎನ್‍ಕ್ವಯರಿ ಡಿಸೆಂಬರ್ 5ರಂದು ಕಾರ್ಯಕ್ರಮ ಸಾದರಪಡಿಸಿದರು.

ಅತ್ಯಾಕರ್ಷಕ ರಾಕ್ ಪ್ರದರ್ಶನ

ಅತ್ಯಾಕರ್ಷಕ ರಾಕ್ ಪ್ರದರ್ಶನ

ಸೊರಾಂಟಂಗ್ ಅಂಡ್ ದ ಬ್ಯಾಂಡ್, ನಾಗಾ ಇನ್‍ಕ್ರೇಂಟ್, ಪಿನ್ ಡ್ರಾಪ್ ಸೈಲನ್ಸ್, ಡಿಸೈಪಲ್ ಆಫ್ ಲವ್, ಟೀ ಸ್ಪೂನ್ ಪ್ರಾಜಕ್ಟ್, ಪರ್ಫೆಕ್ಟ್ ಸ್ಟ್ರೇಂಜರ್ಸ್ ಅವರು ಡಿಸೆಂಬರ್ 7ರಂಉ ಕಾರ್ಯಕ್ರಮ ನೀಡಿದರು. ಉತ್ಸವ ಕೊನೆಯ ಮೂರು ದಿನಗಳಲ್ಲಿ ಪ್ರಮುಖವಾಗಿ ವಿಶ್ವದ ವಿವಿಧೆಡೆಗಳಿಂದ ಆಗಮಿಸಿದ್ದ ರಾಕ್‍ಸ್ಟಾರ್‍ಗಳು ಕಾರ್ಯಕ್ರಮ ಪ್ರಸ್ತುಪಡಿಸಿದರು. ಅಲೈವ್, ದ ಮಿಸ್ಟೀರಿಯಸ್, ಸಂಗೀತಾ ಭಟ್ಟಾಚಾರ್ಯ, ಸ್ವರಥಮ ಇಂಡೂಸ್ ಕ್ರೀಡ್, ಫಿಫ್ತ್ ನೋಟ್, ಸೆವೆನ್ ಸ್ಪೇಸ್‍ಬಾರ್, ಪೋಲಾರ್ ಲೈಟ್ಸ್, ಗಿರೀಶ್ ಅಂಡ್ ದ ಕ್ರಾನಿಕಲ್ಸ್, ಗ್ರೇಡ್ ಡಿಕೇಡ್, ಅಲೋಬೊ ಬಾಗಾ ಮತ್ತು ದ ಬ್ಯಾಂಡ್ ತಂಡಗಳು ಅತ್ಯಾಕರ್ಷಕ ರಾಕ್ ಪ್ರದರ್ಶನದ ಮೂಲಕ ಜನರ ಮನಸ್ಸು ಸೂರೆಗೊಂಡವು.

ಈ ವರ್ಷದ ಉತ್ಸವದಲ್ಲಿ ಟೆಸ್ಟಿಯೊ ಸಿಸ್ಟರ್ಸ್‍ರವರ ಬಾಕ್ಸ್ ಆಫೀಸ್ ಶೋಗಳನ್ನು ಕೂಡಾ ಡಿಸೆಂಬರ್ 2ರಿಂದ 9ರವರೆಗೆ ಆಯೋಜಿಸಲಾಗಿತ್ತು. ಅಂತಿಮದಿನದಂದು ಧಿಮ್‍ಪುರದಲ್ಲಿ ಇಂಗ್ಲೆಂಡ್ ಮೂಲದ ದ ಕ್ಲಾಸಿಕ್ ರಾಕ್ ಶೋ ಆಕರ್ಷಕವಾಗಿ ಮೂಡಿ ಬಂತು. ದೇಶೀಯ ಸಂಗೀತದ ರಸದೌತಣ ಡಿಸೆಂಬರ್ 1ರಿಂದ 10ರವರೆಗೆ ಮತ್ತು ನಾಗಾ ಸಂಗೀತ ಕಾರ್ಯಕ್ರಮ ಡಿಸೆಂಬರ್ 2ರಿಂದ 7ರವರೆಗೆ ನಡೆಯಿತು.

ಭಾರತದ ಅತಿದೊಡ್ಡ ಉತ್ಸವ

ಭಾರತದ ಅತಿದೊಡ್ಡ ಉತ್ಸವ

ಈ ಬಗ್ಗೆ ಮಾತನಾಡಿದ ನಾಗಾಲ್ಯಾಂಡ್ ಸರ್ಕಾರದ ಸಂಗೀತ ಮತ್ತು ಕಲೆ ಕಾರ್ಯಪಡೆ ಸಲಹೆಗಾರ ತೇಜಾ ಮೆರು, "ಈ ಅದ್ದೂರಿ ಉತ್ಸವಕ್ಕೆ ಸಂಗೀತ ದಿಗ್ಗಜ ಎ.ಆರ್.ರೆಹಮಾನ್ ಅವರನ್ನು ವಿಶೇಷ ಅತಿಥಿಯಾಗಿ ಕರೆಯುವ ಮೂಲಕ ಅದ್ದೂರಿಯಾಗಿ ಮಂಗಲ ಹಾಡಲಾಗಿದೆ. ಈ ಉತ್ಸವದ ಯಶಸ್ಸಿಗೆ ಕಾರಣರಾದ ಜನತೆ, ಬ್ಯಾಂಡ್ ಮತ್ತು ಕಲಾವಿದರಿಗೆ ನಾನು ಆಭಾರಿ. ಕಲೆ, ಸಂಗೀತ ಮತ್ತು ಸಂಸ್ಕೃತಿಯ ಪರಿಪೂರ್ಣ ರಸದೌತಣವನ್ನು ಈ ಉತ್ಸವದ ಮೂಲಕ ನೀಡಲು ಸಾಧ್ಯವಾಗಿದೆ ಎಂಬ ಭಾವನೆ ನಮ್ಮದು. ಇದು ನಮ್ಮ ಸಂಸ್ಕೃತಿ ಸಾಮರಸ್ಯವನ್ನು ಬಲಗೊಳಿಸುವ ಉದ್ದೇಶ ಹೊಂದಿದೆ. ಇದನ್ನು ವರ್ಷದಿಂದ ವರ್ಷಕ್ಕೆ ಭಾರತದ ಅತಿದೊಡ್ಡ ಉತ್ಸವವಾಗಿ ಬೆಳೆಸುತ್ತಿರುವುದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ" ಎಂದು ಹೇಳಿದರು.

English summary
India’s longest cultural extravaganza ‘The Hornbill Festival’ ended its 10 day journey with a bang. Musical maestro and Grammy award winner AR Rahman was the ‘guest of honour’ on the last day of the festival that took place in Kisama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X