ಎಸ್ಪಿ ಬಾಲಸುಬ್ರಮಣ್ಯಂಗೆ ನೋಟೀಸ್ ಕಳಿಸಿದ ಇಳಯರಾಜಾ

Posted By:
Subscribe to Oneindia Kannada

ವಾಷಿಂಗ್ಟನ್, ಮಾರ್ಚ್ 19: ಸದ್ಯಕ್ಕೆ ಅಮೆರಿಕದಲ್ಲಿ ಮ್ಯೂಸಿಕ್ ಷೋ ಸರಣಿಗಳನ್ನು ನಡೆಸುತ್ತಿರುವ ಜನಪ್ರಿಯ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರಿಗೆ ಇಳಯರಾಜಾ ನೋಟಿಸ್ ಕಳುಹಿಸಿದ್ದಾರೆ. ಅವರ ಸಂಗೀತದ ಹಾಡುಗಳನ್ನು ಹಾಡದಿರುವಂತೆ ಎಸ್ ಪಿಬಿ ಅವರಿಗೆ ನಿರ್ಬಂಧ ವಿಧಿಸಿದ್ದಾರೆ ಇಳಯರಾಜಾ. ಇದನ್ನು, ಖುದ್ದು ಎಸ್ ಬಿ ಬಾಲಸುಬ್ರಮಣ್ಯಂ ಅವರು ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

ಅಮೆರಿಕದಲ್ಲಿ ಸದ್ಯಕ್ಕೆ ಬಾಲಸುಬ್ರಹ್ಮಣ್ಯಂ ನಡೆಸುತ್ತಿರುವ ಗಾಯನ ಷೋಗಳಲ್ಲಿ ತಮ್ಮ ಹಾಡುಗಳನ್ನು ಅನುಮತಿ ಇಲ್ಲದೆ ಹಾಡದಂತೆ ಸೂಚಿಸಲಾಗಿದೆ. ತಮ್ಮ ನೋಟೀಸ್ ಉಲ್ಲಂಘಿಸಿದಲ್ಲಿ, ದಂಡ ಕಟ್ಟಬೇಕು ಹಾಗೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದೂ ಇಳಯರಾಜಾ ಎಚ್ಚರಿಕೆಯ ಸಂದೇಶವನ್ನು ನೋಟಿಸ್ ಮೂಲಕ ರವಾನಿಸಿದ್ದಾರೆ. ಇಳಯರಾಜಾ ಅವರ ವಕೀಲರಿಂದ ಈ ನೋಟಿಸ್ ಬಂದಿರುವುದಾಗಿ ಎಸ್ ಪಿ ಬಾಲಸುಬ್ರಮಣ್ಯಂ ಅವರು ತಿಳಿಸಿದ್ದಾರೆ.

Music director sends legal notice to SP Balasubramanyam

ಎಸ್ ಪಿ ಬಾಲಸುಬ್ರಮಣ್ಯಂ ಅವರು, ಸಿನಿಮಾ ರಂಗಕ್ಕೆ ಗಾಯಕರಾಗಿ ಕಾಲಿಟ್ಟು 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅವರ ಪುತ್ರ ಎಸ್.ಪಿ. ಚರಣ್ ಬಾಲಸುಬ್ರಮಣ್ಯಂ ಅವರು ಎಸ್ ಪಿಬಿ 50 ಎಂಬ ವಿಶ್ವ ಪರ್ಯಟನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಕಳೆದ ವರ್ಷದ ಮಧ್ಯಭಾಗದಿಂದಲೇ ಆರಂಭವಾಗಿರುವ ಈ ಪರ್ಯಟನೆ, ಇದೀಗ ಅಮೆರಿಕಕ್ಕೆ ಕಾಲಿಟ್ಟಿದ್ದು ಅಲ್ಲಿ ಕಳೆದ ವಾರಾಂತ್ಯಕ್ಕೆ ಸೀಟಲ್ ಹಾಗೂ ಲಾಸ್ ಏಂಜಲೀಸ್ ಗಳಲ್ಲಿ ಕಾರ್ಯಕ್ರಮಗಳನ್ನು ಎಸ್ ಪಿಬಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಎಸ್ ಪಿ ಬಾಲ ಸುಬ್ರಮಣ್ಯಂ ಸೇರಿದಂತೆ ಅವರ ಟ್ರೂಪ್ ನಲ್ಲಿ ಹೋಗಿರುವ ಗಾಯಕಿ ಚಿತ್ರಾ, ಎಸ್ ಪಿ ಬಾಲಸುಬ್ರಮಣ್ಯಂ ಅವರ ಪುತ್ರ ಚರಣ್, ಕಾರ್ಯಕ್ರಮಗಳ ಆಯೋಜಕರಿಗೆ, ಇಡೀ ವಿಶ್ವ ಪರ್ಯಟನೆಯ ಜವಾಬ್ದಾರಿ ಹೊತ್ತಿರುವ ಸಂಸ್ಥೆಗೂ ನೋಟೀಸ್ ಜಾರಿಗೊಂಡಿದೆ.

ಎಸ್ ಪಿಬಿ ಹೇಳೋದೇನು?

ನೋಟೀಸ್ ಜಾರಿಗೊಳಿಸಿರುವ ಬಗ್ಗೆ ಫೇಸ್ ಬುಕ್ ನಲ್ಲಿ ಬೇಸರ ವ್ಯಕ್ತಪಡಿಸಿರುವ ಎಸ್ ಪಿಬಿ, ''ನನ್ನ ಮಗ ಚರಣ್ ವಿನ್ಯಾಸಗೊಳಿಸಿದ ಎಸ್ ಪಿಬಿ 50 ವಿಶ್ವ ಪರ್ಯಟನೆಯು ಕಳೆದ ವರ್ಷದ ಮಧ್ಯಭಾಗದಿಂದಲೇ ಶುರುವಾಗಿದೆ. ಈಗಾಗಲೇ, ಟೊರಂಟೋ, ರಷ್ಯಾ, ಶ್ರೀಲಂಕಾ, ಮಲೇಷ್ಯಾ, ಸಿಂಗಪೂರ್, ದುಬೈ ಸೇರಿದಂತೆ ಭಾರತದ ವಿವಿದೆಡೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿದ್ದೇನೆ. ಅಲ್ಲೆಲ್ಲಾ ಇಳಯ ರಾಜಾ ಅವರ ಕಂಪೋಸಿಂಗ್ ಹಾಡುಗಳನ್ನು ಹಾಡಿದ್ದೆ. ಆಗ, ಕಾನೂನು ಕ್ರಮದ ಬಗ್ಗೆ ಮಾತನಾಡದಿದ್ದ ಇಳಯರಾಜಾ ಕಚೇರಿಯು ಈಗ ಅದರ ಬಗ್ಗೆ ಮಾತನಾಡುತ್ತಿದೆ. ಏನಾಗಿದೆಯೋ ಗೊತ್ತಿಲ್ಲ. ಅದೇನೇ ಇರಲಿ. ಇನ್ನು ಮುಂದೆ ನಾನು ಇಳಯರಾಜಾ ಅವರ ಹಾಡುಗಳನ್ನು ಸಮಾರಂಭಗಳಲ್ಲಿ ಹಾಡುವುದಿಲ್ಲ. ಹೀಗಾಗಬೇಕು ಎಂಬುದು ದೈವೇಚ್ಛೆಯಿದ್ದರೆ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ'' ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran Tamil Music Director Illaiyaraja has sent la legal notice to famous playback singer S.P. Balasubrahmanyam, restricting the singer not to sing his composition during onegoing 'SPB 50 World Tour'.
Please Wait while comments are loading...