ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಳಿ ಮೂಲಕವೂ ಬ್ಲ್ಯಾಕ್ ಫಂಗಸ್ ಹರಡುತ್ತದೆ: ಏಮ್ಸ್ ವೈದ್ಯರು

|
Google Oneindia Kannada News

ನವದೆಹಲಿ, ಮೇ 22: ಗಾಳಿ ಮೂಲಕವೂ ಬ್ಲ್ಯಾಕ್ ಫಂಗಸ್ ಹರಡಬಲ್ಲದು ಎಂದು ಏಮ್ಸ್ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆದರೆ, ಈ ಶಿಲೀಂಧ್ರವು ಆರೋಗ್ಯವಂತ ವ್ಯಕ್ತಿಯ ದೇಹ ಹೊಕ್ಕರೂ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಕಪ್ಪು ಶಿಲೀಂಧ್ರವು ಶ್ವಾಸಕೋಶಕ್ಕೆ ಪ್ರವೇಶಿಸಬಹುದು, ಆದರೆ ಆ ಸಾಧ್ಯತೆ ಕಡಿಮೆ ಇರುತ್ತದೆ, ನಮ್ಮ ದೇಶಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ದೇಹವು ಅದರ ವಿರುದ್ಧ ಹೋರಾಡಲು ಸಮರ್ಥವಾಗಿರುತ್ತದೆ ಎಂದು ಏಮ್ಸ್‌ನ ಡೋಕ್ರೈನಾಲಜಿ ಮತ್ತು ಮೆಟಾಬಾಲಿಸಂ ವಿಭಾಗದ ಪ್ರೊ.ಡ. ನಿಖಿಲ್ ಟಂಡನ್ ಹೇಳಿದ್ದಾರೆ.

ವೈಟ್ ಫಂಗಸ್ ಪ್ರಕರಣ ಕರ್ನಾಟಕದಲ್ಲಿ ವರದಿಯಾಗಿಲ್ಲ: ವೈದ್ಯರುವೈಟ್ ಫಂಗಸ್ ಪ್ರಕರಣ ಕರ್ನಾಟಕದಲ್ಲಿ ವರದಿಯಾಗಿಲ್ಲ: ವೈದ್ಯರು

ಭಯ ಬೇಡ, ವೈಟ್ ಫಂಗಸ್, ಬ್ಲ್ಯಾಕ್ ಫಂಗಸ್‌ನಷ್ಟು ಅಪಾಯಕಾರಿಯಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತು ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ಎಂಡಿ ಡಾ.ಸುರೇಶ್ ಕುಮಾರ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

Murormycosis Can Spread Through Air, Enter Into Lungs: AIIMS Doctor On Black Fungus

'ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ ಸೋಂಕಿನಷ್ಟು ಅಪಾಯಕಾರಿ ಅಲ್ಲ. ಆದರೆ ಸ್ಟಿರಾಯ್ಡ್ ಗಳ ಅನಗತ್ಯ ಬಳಕೆ ಅಥವಾ ವೈದ್ಯರನ್ನು ಸಂಪರ್ಕಿಸದೇ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದೆಡೆ ಬ್ಲಾಕ್ ಫಂಗಸ್ ಸೋಂಕು ರೋಗಿಗಳನ್ನು ಹೈರಾಣಾಗಿಸುತ್ತಿದ್ದರೆ ಇತ್ತ ಮತ್ತೊಂದೆಡೆ ವೈಟ್ ಫಂಗಸ್ ಸೋಂಕು ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಇದರ ನಡುವೆಯೇ ದೇಶದ ನುರಿತ ವೈದ್ಯರು ವೈಟ್ ಫಂಗಸ್ ಸೋಂಕು ಬ್ಲ್ಯಾಕ್ ಫಂಗಸ್ ಸೋಂಕಿನಷ್ಟು ಅಪಾಯಕಾರಿ ಅಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ಎಂಡಿ ಡಾ.ಸುರೇಶ್ ಕುಮಾರ್ ಅವರು, 'ಬಿಳಿ ಶಿಲೀಂಧ್ರ (ಆಸ್ಪರ್ಜಿಲೊಸಿಸ್) ಕಪ್ಪು ಶಿಲೀಂಧ್ರದಷ್ಟು ಅಪಾಯಕಾರಿ ಅಲ್ಲ ಎಂದು ಹೇಳಿದ್ದಾರೆ.

English summary
In view of the rising number of cases of Mucormycosis or black fungus infections in various states, AIIMS Professor and Head of Department of Endocrinology and Metabolism, Dr Nikhil Tandon has said that mucor may enter into lungs but its chances are very low.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X