ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Delhi MCD Election Results 2022 : ದೆಹಲಿ ಮಹಾನಗರ ಪಾಲಿಕೆ: ಇಂದು 8 ಗಂಟೆಗೆ ಮತ ಎಣಿಕೆ ಆರಂಭ

|
Google Oneindia Kannada News

ದೆಹಲಿ ಡಿಸೆಂಬರ್ 7: ದೆಹಲಿ ಮಹಾನಗರ ಪಾಲಿಕೆಯ (MCD) 250 ವಾರ್ಡ್‌ಗಳಲ್ಲಿ ಚುನಾವಣೆಯಾದ ಮತಗಳನ್ನು ಎಣಿಸಲು ಇಂದು ರಾಷ್ಟ್ರ ರಾಜಧಾನಿ ಸಜ್ಜಾಗಿದೆ. 42 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಎಲ್ಲರಿಗೂ ಗೊತ್ತಾಗಲಿದೆ. ಇದು 15 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಹಾಗೂ ಎಎಪಿ ನಡುವಿನ ತ್ರಿಕೋನ ಸ್ಪರ್ಧೆಯಾಗಿದೆ. ಡಿಸೆಂಬರ್ 4 ರಂದು ಮತದಾನ ನಡೆಯಿತು. ಚುನಾವಣೆಯಲ್ಲಿ ಒಟ್ಟು 1349 ಅಭ್ಯರ್ಥಿಗಳು ನಿಂತಿದ್ದರು. ಇವರಲ್ಲಿ 709 ಮಹಿಳೆಯರಿದ್ದಾರೆ. ದೆಹಲಿಯ ಹಿಂದಿನ ಮೂರು ಮುನ್ಸಿಪಲ್ ಕಾರ್ಪೊರೇಶನ್‌ಗಳನ್ನು ಒಂದು ಸಂಸ್ಥೆಯಾಗಿ ಏಕೀಕರಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ.

ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಎಎಪಿ ಚುನಾವಣೆಯಲ್ಲಿ 140 ರಿಂದ 171 ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಜಯಗಳಿಸಲಿದೆ. ಬಿಜೆಪಿ 69 ಮತ್ತು 91 ವಾರ್ಡ್‌ಗಳನ್ನು ಗೆಲ್ಲುವ ಸಾಧ್ಯತೆ ಇದ್ದು ಕಾಂಗ್ರೆಸ್ ಮೂರರಿಂದ ಏಳು ವಾರ್ಡ್‌ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತೋರಿಸಿದೆ.

ಎಲ್ಲ ಸಮೀಕ್ಷೆಗಳಲ್ಲಿ ಎಎಪಿಗೆ ಜಯ

ಎಲ್ಲ ಸಮೀಕ್ಷೆಗಳಲ್ಲಿ ಎಎಪಿಗೆ ಜಯ

ಆಮ್ ಆದ್ಮಿ ಪಕ್ಷ ಶೇ.43ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದ್ದು, ಬಿಜೆಪಿ ಶೇ.35ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಇದರಲ್ಲಿ 10 ರಷ್ಟು ಪಾಲು ಕಾಂಗ್ರೆಸ್‌ಗೆ ಸಿಗಲಿದೆ ಎಂದು ಅದು ತೋರಿಸಿದೆ. ಹೆಚ್ಚಿನ ಸಮೀಕ್ಷೆಗಳು ದೆಹಲಿಯ ಆಡಳಿತ ಪಕ್ಷವಾದ ಎಎಪಿ ಎಂಸಿಡಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಆಜ್ ತಕ್‌ನ ನಿರ್ಗಮನ ಸಮೀಕ್ಷೆಯ ಪ್ರಕಾರ, ಎಎಪಿ 149-171 ವಾರ್ಡ್‌ಗಳನ್ನು ಪಡೆಯಬಹುದು. ಟೈಮ್ಸ್ ನೌ ನಡೆಸಿದ ಮತ್ತೊಂದು ಸಮೀಕ್ಷೆಯು ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು 146 ರಿಂದ 156 ವಾರ್ಡ್‌ಗಳ ನಡುವೆ ಜಯ ಸಾಧಿಸಬಹುದು ಎಂದಿದೆ. ಎರಡೂ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ 10 ಅಥವಾ ಅದಕ್ಕಿಂತ ಕಡಿಮೆ ವಾರ್ಡ್‌ಗಳನ್ನು ಪಡೆಯುತ್ತವೆ ಎಂದು ತೋರಿಸಿವೆ.

ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ

ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ

ದೆಹಲಿಯ ಮುನ್ಸಿಪಲ್ ಕಾರ್ಪ್ರೈಯೇಷನ್ (MCD) ಚುನಾವಣೆ 2022 ರ ಫಲಿತಾಂಶವನ್ನು ಇಂದು ಪ್ರಕಟಿಸಲಾಗುವುದು. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಎಲ್ಲಾ 250 ವಾರ್ಡ್‌ಗಳಲ್ಲಿ ಡಿಸೆಂಬರ್ 4 ರಂದು ಮತದಾನ ನಡೆಯಿತು. ಚುನಾವಣೆಯಲ್ಲಿ ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಹೋರಾಟ ಕಂಡುಬಂದಿದೆ.

ಬಿಗಿ ಭದ್ರತೆಯ ನಡುವೆ ಮತ ಎಣಿಕೆ

ಎಣಿಕೆಗೆ ನಲವತ್ತೆರಡು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬಿಗಿ ಭದ್ರತೆಯ ನಡುವೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಕೇಂದ್ರಗಳು ಶಾಸ್ತ್ರಿ ಪಾರ್ಕ್, ಯಮುನಾ ವಿಹಾರ್, ಮಯೂರ್ ವಿಹಾರ್, ನಂದ್ ನಗರಿ, ದ್ವಾರಕಾ, ಓಖ್ಲಾ, ಮಂಗೋಲ್‌ಪುರಿ, ಪಿತಾಂಪುರ, ಅಲಿಪುರ್ ಮತ್ತು ಮಾಡೆಲ್ ಟೌನ್, ಇತರ ಸ್ಥಳಗಳಲ್ಲಿವೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 20 ಕಂಪನಿಗಳು ಮತ್ತು 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಕೇಂದ್ರಗಳಲ್ಲಿ ನಿಯೋಜಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮತ ಎಣಿಕೆಗೆ ಸಜ್ಜಾಗಿದ್ದು, ಇದಕ್ಕಾಗಿ 42 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಿಗಿ ಭದ್ರತೆಯ ನಡುವೆ ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

2017ರಲ್ಲಿ ಬಿಜೆಪಿ ಗೆಲುವು

2017ರಲ್ಲಿ ಬಿಜೆಪಿ ಗೆಲುವು

2017ರ ಪೌರ ಚುನಾವಣೆಯಲ್ಲಿ ಬಿಜೆಪಿ 250 ವಾರ್ಡ್‌ಗಳಲ್ಲಿ 181ರಲ್ಲಿ ಗೆಲುವು ಸಾಧಿಸಿತ್ತು. ಎಎಪಿ 48 ವಾರ್ಡ್‌ಗಳಲ್ಲಿ ಮತ್ತು ಕಾಂಗ್ರೆಸ್ 27 ರಲ್ಲಿ ಜಯಗಳಿಸಿತ್ತು. 2017 ರಲ್ಲಿ ಶೇಕಡಾವಾರು ಮತದಾನವು 53 ರಷ್ಟಿತ್ತು.


ಮತದಾನಕ್ಕಾಗಿ ದೆಹಲಿಯಾದ್ಯಂತ 13,600 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅವುಗಳಲ್ಲಿ 68 ಮಾದರಿ ಮತಗಟ್ಟೆಗಳು ಮತ್ತು ಅನೇಕ ಪಿಂಕ್ ಮತಗಟ್ಟೆಗಳಾಗಿದ್ದವು. ಈ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರವು ಬೃಹತ್ ಡಿಲಿಮಿಟೇಶನ್ ನಡೆಸಿದ ನಂತರ ವಾರ್ಡ್‌ಗಳ ಸಂಖ್ಯೆಯನ್ನು ಹಿಂದಿನ 272 ರಿಂದ 250 ಕ್ಕೆ ಇಳಿಸಲಾಯಿತು. ಇದು ದೆಹಲಿಯ ಹಿಂದಿನ ಮೂರು ಮುನ್ಸಿಪಲ್ ಕಾರ್ಪೊರೇಶನ್‌ಗಳನ್ನು ಒಂದು ಸಂಸ್ಥೆಯಾಗಿ ಏಕೀಕರಿಸಿತು.

English summary
Votes will be counted for the Municipal Corporation of Delhi (MCD) polls today at 8 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X