• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ ಹೋರಾಟ: ಮುಂಬೈನಲ್ಲಿ ಯಶಸ್ವಿ ಪ್ರದರ್ಶನ ಕಂಡ 'ಕಾಲಾ'

By Nayana
|

ಬೆಂಗಳೂರು, ಜೂನ್ 7: ಕಳೆದ ಒಂದು ವಾರದಿಂದ ರಜನಿಕಾಂತ್ ಅಭಿನಯದ ಕಾಲಾ ಚಿತ್ರಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕರವೇಯಂತಹ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ.

ಸುಪ್ರೀಂಕೋರ್ಟ್ ಕಾಲಾ ಬಿಡುಗಡೆಗೆ ಸಂಬಂಧಿಸಿದಂತೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆಯೇ ಹಲವು ಕಡೆ ಚಿತ್ರ ಬಿಡುಗಡೆಯಾಗಿದೆ. ಮುಂಬೈನಲ್ಲೂ ಚಿತ್ರ ಯಶಸ್ವಿಯಾಗಿ ಬಿಡುಗಡೆಯಾಗಿದೆ.

'ಕಾಲಾ' ಪ್ರದರ್ಶನ ರದ್ದುಗೊಳಿಸಿ ಹಣ ವಾಪಸ್ಸು ಮಾಡಿದ ಥಿಯೇಟರ್ ಮಾಲೀಕ

ಆದರೆ ಕರ್ನಾಟಕದಲ್ಲಿ ಪ್ರತಿಭಟನೆ ತೀವ್ರ ಹಂತಕ್ಕೆ ತಲುಪಿದೆ. ಚಿತ್ರಮಂದಿರಗಳಿಗೆ ತೆರಳಿ ಪ್ರತಿಭಟನಾಕಾರರು ಟಿಕೆಟ್ ನೀಡದಂತೆ ಒತ್ತಾಯಿಸುತ್ತಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಕಾಲ ಚಿತ್ರ ಪ್ರದರ್ಶನವಿಲ್ಲ ಎನ್ನುವ ಫಲಕಗಳನ್ನು ಅಳವಡಿಸಲಾಗಿದೆ.

ಇನ್ನೂ ಕೆಲವೆಡೆ ಟಿಕೇಟ್‌ನ್ನು ಹಿಂಪಡೆದು ಹಣವನ್ನು ವಾಪಾಸ್ ನೀಡಲಾಗುತ್ತಿದೆ. ಮಂಗಳೂರಿನಲ್ಲಿ ಪೊಲೀಸರ ಭದ್ರತೆ ನಡುವೆ ಚಿತ್ರ ಪ್ರದರ್ಶನ ಕಾಣುತ್ತಿದೆ. ಆದರೆ ಬೆಂಗಳೂರಿನಲ್ಲಿ ಯಾವ ಚಿತ್ರಮಂದಿರದಲ್ಲೂ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ.

'ಕಾಲಾ' ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇನ್ಫೋಗ್ರಾಫಿಕ್ಸ್‌ನಲ್ಲಿ

ಮುಂಬೈನಲ್ಲಿ ಬುಧವಾರ ರಾತ್ರಿ ಕಾಲಾ ಚಿತ್ರವನ್ನು ನೋಡಿ ರಜನಿಕಾಂತ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಮುಂಬೈ ಚಿತ್ರಮಂದಿರದ ಕೆಲವು ಚಿತ್ರಗಳನ್ನು ನೀವು ಇಲ್ಲಿ ನೋಡಬಹುದಾಗಿದೆ.

ಕಾಲಾ ಚಿತ್ರ ಬಿಡುಗಡೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

ಕಾಲಾ ಚಿತ್ರ ಬಿಡುಗಡೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

ಮುಂಬೈನಲ್ಲಿ ಬುಧವಾರ ಸಂಜೆ ಬಿಡುಗಡೆಯಾದ ರಜನಿಕಾಂತ್ ಅಭಿನಯದ ಕಾಲಾ ಚಿತ್ರವನ್ನು ನೋಡಿ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದು ಹೀಗೆ

 ಅಭಿಮಾನಿಗಳ ಮೈಮೇಲೆ ರಜನೀಕಾಂತ್

ಅಭಿಮಾನಿಗಳ ಮೈಮೇಲೆ ರಜನೀಕಾಂತ್

ಸೂಪರ್‌ ಸ್ಟಾರ್ ರಜನಿಕಾಂತ್ ಅವರ ಕಾಲಾ ಚಿತ್ರ ಬುಧವಾರ ಮುಂಬೈನಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಆ ಸಂದರ್ಭದಲ್ಲಿ ರಜನೀಕಾಂತ್ ಅಭಿಮಾನಿಗಳು ಅವರ ಮೈಮೇಲೆ ರಜನೀಕಾಂತ್ ಚಿತ್ರವನ್ನು ಬಿಡಿಸಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಕಪ್ಪುಬಟ್ಟೆಯೊಂದಿಗೆ ಕಾಲಾ ಚಿತ್ರ ವೀಕ್ಷಿಸಿದ ಯುವಕರು

ಕಪ್ಪುಬಟ್ಟೆಯೊಂದಿಗೆ ಕಾಲಾ ಚಿತ್ರ ವೀಕ್ಷಿಸಿದ ಯುವಕರು

ಮುಂಬೈನಲ್ಲಿ ರಜನಿಕಾಂತ್ ನಟಿಸಿರುವ ಕಾಲಾ ಚಿತ್ರ ಬಿಡುಗಡೆಗೊಂಡಿದೆ ಈ ಹಿನ್ನೆಲೆಯಲ್ಲಿ ಯುವಕ ಯುವತಿಯರು ಕಪ್ಪು ಬಟ್ಟೆ ಧರಿಸಿ ಚಿತ್ರವನ್ನು ವೀಕ್ಷಿಸಿದರು.

ಕಾಲಾ ಚಿತ್ರ ಬಿಡುಗಡೆ ಮಾಡದಂತೆ ಸಾ.ರಾ. ಗೋವಿಂದು ಸಿಎಂಗೆ ಮನವಿ

ಕಾಲಾ ಚಿತ್ರ ಬಿಡುಗಡೆ ಮಾಡದಂತೆ ಸಾ.ರಾ. ಗೋವಿಂದು ಸಿಎಂಗೆ ಮನವಿ

ಕಾಲಾಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಶೆಟ್ಟಿ, ಸಾ.ರಾ. ಗೋವಿಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭ

ಕಾಲಾ ಪ್ರತಿಭಟನೆ ಮಂತ್ರಿ ಮಾಲ್ ಎದುರು ಪೊಲೀಸರ ಬಿಗಿ ಭದ್ರತೆ

ಕಾಲಾ ಪ್ರತಿಭಟನೆ ಮಂತ್ರಿ ಮಾಲ್ ಎದುರು ಪೊಲೀಸರ ಬಿಗಿ ಭದ್ರತೆ

ರಜನಿಕಾಂತ್ ಅಭಿನಯದ ತಮಿಳು ಚಿತ್ರ ಕಾಲಾ ವಿರೋಧಿಸಿ ಕನ್ನಡಪರ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಮಂತ್ರಿ ಮಾಲ್ ಎದುರು ಭದ್ರತೆ ನೀಡುತ್ತಿರುವುದು.

ಮಾಲ್ ಒಳಗೆ ಪ್ರವೇಶಿಸ ಪ್ರತಿಭಟನಾಕಾರರನ್ನು ಪೊಲೀಸರು ತಡೆಯುತ್ತಿರುವ ದೃಶ್ಯ

ಮಾಲ್ ಒಳಗೆ ಪ್ರವೇಶಿಸ ಪ್ರತಿಭಟನಾಕಾರರನ್ನು ಪೊಲೀಸರು ತಡೆಯುತ್ತಿರುವ ದೃಶ್ಯ

ಕಾಲಾ ಚಿತ್ರ ಬಿಡುಗಡೆ ವಿರೋಧಿಸಿ ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿದೆ. ಗುರುವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆಗೊಳ್ಳಬೇಕಾಗಿತ್ತು. ಚಿತ್ರವನ್ನು ಬಿಡುಗಡೆ ಮಾಡಲು ಹೊರಟ ಕೆಲವು ಮಾಲ್‌ಗಳ ಕ್ರಮ ವಿರೋಧಿಸಿ ಮಾಲ್‌ ಒಳಗೆ ಪ್ರವೇಶಿಸಲು ಮುಂದಾಗಿದ್ದರು. ಪೊಲೀಸರು ಅವರನ್ನು ಮಾಲ್ ಪ್ರವೇಶಿಸದಂತೆ ತಡೆಯೊಡ್ಡಿದರು.

ಕಾಲಾ ಚಿತ್ರ ವಿರೋಧಿಸಿ ಪ್ರತಿಭಟನೆ: ಬಂಧನ

ಕಾಲಾ ಚಿತ್ರ ವಿರೋಧಿಸಿ ಪ್ರತಿಭಟನೆ: ಬಂಧನ

ಕಾಳಾ ತಮಿಳು ಚಿತ್ರ ವಿರೋಧಿಸಿ ಕನ್ನಡ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka has rejected exhibition of Kaala, starred by RajiniKanth since he was made statement against Karnataka in Cauvery river issue. But rest of Karnataka the film has got good response in Mumbai and other parts of India and abroad too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more