ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತೆ ಮೇಲೆ ವೀರ್ಯ ಚೆಲ್ಲಿದ ಕಿಡಿಗೇಡಿಗಳು

|
Google Oneindia Kannada News

ಮುಂಬೈ,ನವೆಂಬರ್, 19: ಮುಂಬೈನಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಮಹಿಳೆಯರನ್ನು ಛೇಡಿಸುವುದು, ಚುಡಾಯಿಸುವುದು ಸಾಮಾನ್ಯವಾಗಿದೆ. ಮಹಿಳೆಯರ ಎದುರೇ ಸಾರ್ವಜನಿಕವಾಗಿ ಹಸ್ತ ಮೈಥುನ ಮಾಡಿಕೊಂಡ ಸುದ್ದಿಗಳನ್ನು ಓದಿದ್ದೇವೆ. ಆದರೆ ಇದೀಗ ಕಿಡಿಗೇಡಿಗಳು ಆಟೊದಲ್ಲಿ ಚಲಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ವೀರ್ಯ ಚೆಲ್ಲಿ ನಾಪತ್ತೆಯಾಗಿದ್ದಾರೆ.

ಮುಂಬೈನ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 29 ವರ್ಷ ವಯಸ್ಸಿನ ಮೆಹಕ್ ಸಬಾತ್ ಎನ್ನುವ ಮಹಿಳೆಗೆ ಆಘಾತಕಾರಿ ಅನುಭವವಾಗಿದೆ. ಹಾಡಹಗಲೇ ಕೆಲ ಕಿಡಿಗೇಡಿಗಳು ಆಕೆಯ ಮೇಲೆ ವೀರ್ಯ ಎಸೆದು ಪರಾರಿಯಾಗಿದ್ದಾರೆ.[ಸಾರ್ವಜನಿಕರ ಎದುರೆ ಹಸ್ತಮೈಥುನ ಮಾಡ್ಕೊಂಡ ]

ಮೆಹಕ್ ಸಬಾತ್, ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವಾಗ ತನ್ನ ಕಾಲ ಮೇಲೆ ನೀರು ಬಿದ್ದಂತಹ ಅನುಭವವಾಗಿದೆ. ನೀರು ಬಿದ್ದಿರಬಹುದು ಎಂದು ಭಾವಿಸುತ್ತಿರುವಾಗಲೇ ಸೂಕ್ಷ್ಮವಾಗಿ ನೋಡಿದಾಗ ಅದು ಪುರುಷರ ವೀರ್ಯ ಎನ್ನುವುದು ಖಚಿತವಾಗಿದೆ.

Mumbai: 29-Year-Old women Assaulted With Semen in public

ತನ್ನ ಮೇಲೆ ವೀರ್ಯ ಎಸೆದವರು ಯಾರಿರಬಹುದು ಎಂದು ತಿರುಗಿ ನೋಡಿದಾಗ ಆದಾಗಲೇ ಆರೋಪಿಗಳು ಪರಾರಿಯಾಗಿದ್ದರು. ಇದರಿಂದ ಆಕ್ರೋಶಗೊಂಡ ಸಬತ್, ಟ್ವಿಟ್ಟರ್‌ನಲ್ಲಿ ಘಟನೆಯ ಬಗ್ಗೆ ಕಿಡಿಕಾರಿ ಸಂದೇಶ ಪೋಸ್ಟ್ ಮಾಡಿದ್ದಾಳೆ. ಆದರೆ, ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದಾಳೆ.[ಅತ್ಯಾಚಾರಿಗಳ ಪುರುಷತ್ವ ಹರಣ ಮಾಡಿ]

ಇಂತಹ ಘಟನೆ ಕೇವಲ ಮೆಹಕ್ ಸಬತ್‌ಗೆ ಮಾತ್ರ ನಡೆದಿಲ್ಲ. ಇಂತಹ ಅನೇಕ ಘಟನೆಗಳು ಪ್ರತಿನಿತ್ಯ ನಡೆಯುತ್ತಿವೆ. ಆದರೆ, ಇಂತಹ ಪ್ರಕರಣಗಳನ್ನು ಗಂಬೀರವಾಗಿ ಪರಿಗಣಿಸಲಾಗುತ್ತಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ ಎಂದು ಮಹಿಳಾ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.

English summary
Mumbai: On Tuesday , Mehak Sabat, a media professional from Mumbai, experienced an assault which would leave most people at a loss for words. Sabat was traveling in an auto rickshaw when she felt something trickle down her leg. The 29-year-old thought it was water. But she was shocked to discover that it was actually semen that had been thrown at her by some men for absolutely no reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X