ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್ ಪ್ರಕಟಿಸಿದ ದೇಶದ 100 ಶ್ರೀಮಂತರ ಪಟ್ಟಿಯಲ್ಲಿ ಯಾರಿದ್ದಾರೆ?

By Ramesh
|
Google Oneindia Kannada News

ಬೆಂಗಳೂರು, ಸೆ. 22 : ಫೋರ್ಬ್ಸ್ ಈ ವರ್ಷದ ಭಾರತದ 100 ಮಂದಿ ಅತಿ ದೊಡ್ಡ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ರಿಲಾಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಖೇಶ್ ಅಂಬಾನಿ ಈ ಬಾರಿಯೂ ಅಗ್ರಸ್ಥಾನ ಸ್ಥಾನದಲ್ಲಿದ್ದಾರೆ. ಈ ಮೂಲಕ ಸತತ 9 ನೇ ಬಾರಿಗೆ ದೇಶದ ಪ್ರಥಮ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಿಲಾಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಖೇಶ್ ಅಂಬಾನಿ ಕಳೆದ ಎಂಟು ಬಾರಿಯೂ ದೇಶದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಕಳೆದ ವರ್ಷ 18.9 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದರು. ಆದರೆ ಈ ವರ್ಷ ಮುಖೇಶ್ ಅಂಬಾನಿ ಅವರ ಆಸ್ತಿ 22.7 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ . ಇವರು ತಮ್ಮ ಆಸ್ತಿಯ ಶೇ.21 ರಷ್ಟು ರಿಲಾಯನ್ಸ್ ಇಂಡಸ್ಟ್ರೀಸ್ ಗೆ ಹೂಡಿಕೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ ಅವರ ಒಡೆತನದ ರಿಲಾಯನ್ಸ್ ಕಂಪನಿ 4ಜಿ ಆರಂಭಿಸಿದೆ. ಅದು ಈಗ ಬಾರತದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಇನ್ನು ಮುಖೇಶ್ ಅಂಬಾನಿಯವರ ಸಹೋದರ ಅನಿಲ್ ಅಂಬಾನಿ ಅವರ ಆಸ್ತಿಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕೊಂಚ ಇಳಿಮುಖ ಕಂಡಿದ್ದು, ಕಳೆದ ವರ್ಷ ದೇಶದ ಶ್ರೀಮಂತರ ಪಟ್ಟಿಯಲ್ಲಿ 29ನೇ ಸ್ಥಾನದಲ್ಲಿದ್ದ ಅನಿಲ್ ಅಂಬಾನಿ ಈ ವರ್ಷ ಫೋರ್ಬ್ಸ್ ಪಟ್ಟಿಯಲ್ಲಿ 32ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಭಾರತದ ಶ್ರೀಮಂತರ ಪಟ್ಟಿಯಲ್ಲಿ ಯಾರು ಎಷ್ಟು ಆಸ್ತಿಯನ್ನು ಹೊಂದಿದ್ದಾರೆ ಎನ್ನುವುದನ್ನು ಮುಂದೆ ಓದಿ.

ಅಗ್ರಸ್ಥಾನದಲ್ಲಿ ಮುಖೇಶ್ ಅಂಬಾನಿ

ಅಗ್ರಸ್ಥಾನದಲ್ಲಿ ಮುಖೇಶ್ ಅಂಬಾನಿ

ಮುಕೇಶ್ ಅಂಬಾನಿಯವರ ಆಸ್ತಿ ಮೌಲ್ಯ 22.7 ಬಿಲಿಯನ್ ಡಾಲರ್ ಗಳಾಗಿದ್ದು, ಇವರು ದೇಶದ ಶ್ರೀಮಂತರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಸತತ 9ನೇ ಬಾರಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡು ಬಂದಿರುವುದು ವಿಶೇಷ.

ಸನ್ ಫಾರ್ಮಾದ ದಿಲೀಪ್ ಸಾಂಘ್ವಿ

ಸನ್ ಫಾರ್ಮಾದ ದಿಲೀಪ್ ಸಾಂಘ್ವಿ

ಸನ್ ಫಾರ್ಮಾದ ದಿಲೀಪ್ ಸಾಂಘ್ವಿಯವರ ಆಸ್ತಿ ಮೌಲ್ಯ 16.9 ಬಿಲಿಯನ್ ಡಾಲರ್ ಗಳಾಗಿದೆ. ಇದರಿಂದ ಸಾಂಘ್ವಿ ಅವರು ದೇಶದ ಎರಡನೇ ಸ್ಥಾನದಲ್ಲಿದ್ದಾರೆ.

ಹಿಂದುಜಾ ಕುಟುಂಬ

ಹಿಂದುಜಾ ಕುಟುಂಬ

ಮೂರನೇ ಸ್ಥಾನದಲ್ಲಿ ಹಿಂದುಜಾ ಕುಟುಂಬವಿದ್ದು, ಅವರ ಆಸ್ತಿ ಮೌಲ್ಯ 15.ಬಿಲಿಯನ್ ಡಾಲರ್ ಗಳಾಗಿದೆ.

ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ

ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ

15 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿರುವ ವಿಪ್ರೋದ ಅಜೀಂ ಪ್ರೇಂಜಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅನಿಲ್ ಅಂಬಾನಿ ಆಸ್ತಿಮೌಲ್ಯ ಎಷ್ಟು?

ಅನಿಲ್ ಅಂಬಾನಿ ಆಸ್ತಿಮೌಲ್ಯ ಎಷ್ಟು?

ದೇಶದ ಅತಿ ದೊಡ್ಡ ಸಿರಿವಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಸಹೋದರ ಅನಿಲ್ ಅಂಬಾನಿ 3.4 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ 32 ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಇವರು 29ನೇ ಸ್ಥಾನದಲ್ಲಿದ್ದರು.

ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ

ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ

ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ 2.5 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಫೋರ್ಬ್ಸ್ ಪಟ್ಟಿಯಲ್ಲಿ 48 ನೇ ಸ್ಥಾನದಲ್ಲಿದ್ದಾರೆ.

ದೇಶದ ನೂರು ಶ್ರೀಮಂತರ ಒಟ್ಟು ಆಸ್ತಿ ಎಷ್ಟು

ದೇಶದ ನೂರು ಶ್ರೀಮಂತರ ಒಟ್ಟು ಆಸ್ತಿ ಎಷ್ಟು

ದೇಶದ ನೂರು ಶ್ರೀಮಂತರ ಒಟ್ಟು ಆಸ್ತಿ ಎಷ್ಟು? ದೇಶದ ನೂರು ಶ್ರೀಮಂತರ ಒಟ್ಟು ಆಸ್ತಿ ಮೌಲ್ಯವೇಷ್ಟು? ದೇಶದ ನೂರು ಮಂದಿ ಅತಿ ದೊಡ್ಡ ಸಿರಿವಂತರ ಬಳಿಯಿರುವ ಒಟ್ಟು ಆಸ್ತಿ ಮೌಲ್ಯ 381 ಬಿಲಿಯನ್ ಡಾಲರ್ (ಅಂದಾಜು 25.5 ಲಕ್ಷ ಕೋಟಿ ರೂಪಾಯಿಗಳು).

English summary
Industrialist Mukesh Ambani was today named India's richest person for a ninth year in a row with a sharp increase in networth to USD 22.7 billion, while Sun Pharma Dilip Shanghvi was ranked a distant second with a wealth of USD 16.9 billion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X