ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಜನಸಂಖ್ಯೆ ಹೆಚ್ಚಳ : ಶಿವಸೇನೆ ವಿವಾದಕಾರಿ ಹೇಳಿಕೆ

|
Google Oneindia Kannada News

ಮುಂಬೈ, ಆಗಸ್ಟ್ 29: ಇತ್ತೀಚಿಗೆ ಬಿಡುಗಡೆಯಾಗಿರುವ ಜನಗಣತಿ ವರದಿ ಬಗ್ಗೆ ಶಿವಸೇನೆ ವಿವಾದಕಾರಿ ಹೇಳಿಕೆ ನೀಡಿದೆ. ಮದರಸ ಮತ್ತು ಮಸೀದಿಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಹತ್ತಿಕ್ಕಬೇಕಾಗಿದೆ ಎಂದು ಶಿವಸೇನೆ ಆಗ್ರಹಿಸಿದೆ.

ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿರುವುದು ಗಂಭೀರ ವಿಚಾರ, ಇದೇ ರೀತಿ ಮುಸ್ಲಿಂ ಜನಸಂಖ್ಯೆ ಹೆಚ್ಚಾದರೆ ಭಾರತದಲ್ಲಿ ಮೊಘಲರ ದರ್ಬಾರ್ ಮತ್ತೆ ಶುರುವಾಗಲಿದೆ ಎಂದು ಶಿವಸೇನೆ ಹೇಳಿಕೆ ನೀಡಿರುವುದು ಈಗ ವ್ಯಾಪಕ ಚರ್ಚೆಗೆ ಒಳಗಾಗಿದೆ.

ಯಾವುದೇ ಜನಗಣತಿ ಬರಲಿ, ಭಾರತ ಹಿಂದೂ ರಾಷ್ಟವೇ. ಜನಗಣತಿಯ ವಿವರಗಳ ಪ್ರಕಾರ ಮುಸ್ಲಿಂ ಜನಸಂಖ್ಯೆ ಹೆಚ್ಚಿದ್ದು, ಇದು ಧರ್ಮ ರಾಜಕೀಯದ ಪರಿಣಾಮ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಲೇಖನ ಪ್ರಕಟವಾಗಿದೆ.

ಭಾರತದಲ್ಲಿ 96 ಕೋಟಿ ಹಿಂದೂಗಳು ಇದ್ದಾರೆ. ನಾವೆಲ್ಲಾ ಹಿಂದೂಗಳು ಒಟ್ಟಾಗಿ ಇಂತಹ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಮುಸ್ಲಿಂ ಸಮುದಾಯಗಳಲ್ಲಿ ಕುಟುಂಬ ಯೋಜನಾ ಪದ್ದತಿ ಜಾರಿಯಲ್ಲಿ ಇಲ್ಲದೇ ಇರುವುದೇ ಈ ಸಮಸ್ಯೆಗೆ ಕಾರಣ ಎಂದು ಸಾಮ್ನಾದಲ್ಲಿ ಪ್ರಕಟವಾಗಿದೆ.

ಹಾರ್ಥಿಕ್ ಪಟೇಲ್, ಮೋದಿಗಿಂತ ಜನಪ್ರಿಯ, ಮತ್ತೊಂದು ಸಂಪಾದಕೀಯದಲ್ಲಿ ಶಿವಸೇನೆ.. ಮುಂದೆ ಓದಿ..

ಹಿಂದೂ ನಮ್ಮ ಸಂಸ್ಕೃತಿ

ಹಿಂದೂ ನಮ್ಮ ಸಂಸ್ಕೃತಿ

ಭಾರತದಲ್ಲಿರುವ ಮುಸ್ಲಿಮರು ದೇಶದ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸಬೇಕು, ಪಾಕಿಸ್ತಾನದ ರೀತಿಯಲ್ಲಿ ನೋಡಬಾರದು. ಹಿಂದೂ ಎನ್ನುವುದು ಒಂದು ಜಾತಿಯಲ್ಲ, ಹಿಂದೂ ಧರ್ಮ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ಪವಿತ್ರ ಸಂಕೇತ - ಸಾಮ್ನಾದಲ್ಲಿನ ಸಂಪಾದಕೀಯ ಲೇಖನ.

ಹಾರ್ಥಿಕ್ ಪಟೇಲ್

ಹಾರ್ಥಿಕ್ ಪಟೇಲ್

ತನ್ನ ಸಾರ್ವಜನಿಕ ಭಾಷಣಕ್ಕೆ ಐದು ಲಕ್ಷ ಜನರನ್ನು ಸೇರಿಸುವ ತಾಕತ್ತನ್ನು ಈ ಯುವಕ ಹೊಂದಿದ್ದಾನೆ. ಸಾರ್ವಜನಿಕ ಸಭೆಗೆ ಜನ ಸೇರುವ ವಿಚಾರದಲ್ಲಿ ಪಟೇಲ್, ಪ್ರಧಾನಿ ಮೋದಿಯವರನ್ನೂ ಹಿಂದಿಕ್ಕಿದ್ದಾರೆ - ಸಾಮ್ನಾ ಸಂಪಾದಕೀಯ ಲೇಖನ.

ಗುಜರಾತ್ ಸಿಎಂ

ಗುಜರಾತ್ ಸಿಎಂ

ತಮ್ಮ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ, ಶಾಂತಿ ಕ್ರಮಬದ್ದವಾಗಿದೆ ಎಂದು ಸಿಎಂ ಆನಂದಿಬೆನ್ ಪಟೇಲ್ ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿರುವ ಗುಜರಾತಿ ಉದ್ಯಮಿಗಳು ಅಲ್ಲಿಗೆ ಹೋಗಿ ಹಾರ್ಥಿಕ್ ಪಟೇಲ್ ಹೋರಾಟವನ್ನು ಹತ್ತಿಕ್ಕಲಿ - ಸಾಮ್ನಾ ಸಂಪಾದಕೀಯ ಲೇಖನ.

ಶಿವಸೇನೆ ಹೇಳಿಕೆಯ ಬಗ್ಗೆ ಹೀಗೊಂದು ಟ್ವೀಟ್

ಬಾಳಾಠಾಕ್ರೆಯನ್ನು ದಾವೂದ್ ಇಬ್ರಾಹಿಂ ಹೊಗಳಿದರೂ ಅವನನ್ನು ಶಿವಸೇನೆ ಹೊಗಳಲಾರಂಭಿಸುತ್ತದೆ.

ಮತ್ತೊಂದು ಟ್ವೀಟ್

ಬಾಳಾಸಾಹೇಬ್ ಅವರು ಎಂದೂ ಜಾತಿ ಮೀಸಲಾತಿ ಪರವಾಗಿ ಮಾತನಾಡಿದವರಲ್ಲ

ಶಿವಸೇನೆಯನ್ನು ಗಂಭೀರವಾಗಿ ಪರಿಗಣಿಸಬೇಡಿ

ಶಿವಸೇನೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ. ಎಲ್ಲಾ ಠಾಕ್ರೆಗಳು, ಬಾಳ್ ಠಾಕ್ರೆ ಆಗಲು ಸಾಧ್ಯವಿಲ್ಲ.

English summary
Mughal rule will return to India, if Muslim population continues to grow Shiv Sena controversial editorial in Samna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X