ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧೋನಿ ಪತ್ನಿ ಸಾಕ್ಷಿಗೆ ಪ್ರಾಣ ಬೆದರಿಕೆ? ಆರ್ಮ್ಸ್ ಲೈಸೆನ್ಸ್ ಗೆ ಅರ್ಜಿ!
ರಾಂಚಿ, ಜೂನ್ 20: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಅವರಿಗೆ ಪ್ರಾಣ ಬೆದರಿಕೆ ಇದೆ. ಆದ್ದರಿಂದ ಅವರು ಆರ್ಮ್ಸ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಜಾರ್ಖಂಡ್ ನ ರಾಂಚಿಯ ಮೂಲಗಳು ತಿಳಿಸಿವೆ.
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಅವರು, ತಾವು ಮನೆಯಲ್ಲಿ ಹೆಚ್ಚು ಕಾಲ ಒಬ್ಬಳೇ ಇರುತ್ತೇನೆ. ನನಗೆ ಪ್ರಾಣಬೆದರಿಕೆ ಇದೆ. ಆದ್ದರಿಂದ ನನಗೆ ಆರ್ಮ್ಸ್ ಲೈಸೆನ್ಸ್ ನೀಡಬೇಕೆಂದು ರಾಂಚಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಅರ್ಜಿ ಸಲ್ಲಿಸಿದ್ದಾರೆ.
2010 ರಲ್ಲಿ ಎಂ ಎಸ್ ಧೋನಿಯವರು ಸಹ ರಾಂಚಿ ಜಿಲ್ಲಾಡಳಿತದಿಂದ ಆರ್ಮ್ ಲೈಸೆನ್ಸ್ ಪಡೆದು, ನಂತರ 9mm ಪಿಸ್ತೂಲ್ ಖರೀದಿಸಿದ್ದರು.
"ಆಯುಧವನ್ನು ನಾನು ನನ್ನ ರಕ್ಷಣೆಗೆ ಮಾತ್ರ ಬಳಸುತ್ತೇನೆ. ಇನ್ಯಾವುದೇ ದುರುದ್ದೇಶದಿಂದಲ್ಲ" ಎಂದು ಸಹ ಸಾಕ್ಷಿ ಅರ್ಜಿಯಲ್ಲಿ ಬರೆದಿದ್ದಾರೆ. ಅವರಿಗೆ ಆರ್ಮ್ಸ್ ಲೈಸೆನ್ಸ್ ನೀಡಬೇಕೋ ಬೇಡವೋ ಎಂಬುದನ್ನು ರಾಂಚಿ ಜಿಲ್ಲಾಡಳಿತ ನಿರ್ಧರಿಸಲಿದೆ.
Comments
ms dhoni mahendra singh dhoni ranchi jharkhand licence threat ಎಂ ಎಸ್ ಧೋನಿ ಮಹೇಂದ್ರ ಸಿಂಗ್ ಧೋನಿ ರಾಂಚಿ ಜಾರ್ಖಂಡ್ ಲೈಸೆನ್ಸ್ ಬೆದರಿಕೆ
English summary
Mahendra Singh Dhoni's wife Sakshi has applied for an arms licence citing threat to her life. She has asked the authorities in Jharkhand's capital Ranchi to grant her a licence.