ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸೈನಿಕರಿಗೆ ಶಕ್ತಿ ತುಂಬುವುದೇ ನಿಜ ಮಾನವ ಧರ್ಮ'

By Madhusoodhan
|
Google Oneindia Kannada News

ನವದೆಹಲಿ, ಜುಲೈ 26 : ಕಾರ್ಗಿಲ್ ವಿಜಯದ ದಿನದ ಪ್ರಯುಕ್ತ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅಮರ್ ಜವಾನ್ ಸ್ಮಾರಕಕ್ಕೆ ನಮನ ಸಲ್ಲಿಕೆ ಮಾಡಿದರು.

ಸೇನೆಯ ಶೌರ್ಯವನ್ನು ಎಷ್ಟು ಹೊಗಳಿದರೂ ಸಾಕಾಗಲ್ಲ. ಅಂದು ಪಾಕಿಸ್ತಾನ ಕಾರಣವಿಲ್ಲದೇ ನಮ್ಮ ಮೇಲೆ ಬಂದಾಗ ಸೈನಿಕರು ತೋರಿದ ಕೆಚ್ಚೆದೆಯ ಹೋರಾಟ ಇತಿಹಾಸದಲ್ಲಿ ಅಜರಾಮರ ಎಂದು ಹೇಳಿದರು. ಕಾರ್ಗಿಲ್ ವಿಜಯದ ದಿನವನ್ನು ಇಡೀ ದೇಶದಲ್ಲಿ ರಾಷ್ಟ್ರೀಯ ಹಬ್ಬದ ತರಹ ಆಚರಿಸಬೇಕು ಎಂದು ಹೇಳಿದರು.[ವೀರ ಯೋಧರಿಗೆ ಟ್ವೀಟ್ ಲೋಕ ನಮನ]

ಸೈನಿಕರ ಬಗ್ಗೆ, ಅವರ ಕುಟುಂಬದ ಬಗ್ಗೆ ರಾಜೀವ್ ಚಂದ್ರಶೇಖರ್ ಅನೇಕ ವಿಚಾರಗಳನ್ನು ಜನರ ಮುಂದೆ ಇಟ್ಟರು. ಇಡೀ ದೇಶವೇ ಸೈನಿಕರ ಬೆಂಬಲಕ್ಕೆ ನಿಲ್ಲಬೆಕಾಗಿ ಬಂದಿರುವುದು ಇಂದಿನ ಅಗತ್ಯ ಎಂದು ಹೇಳಿದರು.

ಚಿತ್ರಗಳಲ್ಲಿ: ಕಾರ್ಗಿಲ್ ವೀರ ಯೋಧರಿಗೆ ನಮನ

ಸೈನಿಕರಿಗೆ ನಮನ

ಸೈನಿಕರಿಗೆ ನಮನ

ಹೂಗುಚ್ಛದ ಸಮೇತ ತೆರಳಿದ ರಾಜೀವ್ ಚಂದ್ರಶೇಖರ್ ವೀರ ಯೋಧರಿಗೆ ನಮನ ಸಲ್ಲಿಕೆ ಮಾಡಿದರು.

ರಾಜೀವ್ ಏನು ಬರೆದರು?

ರಾಜೀವ್ ಏನು ಬರೆದರು?

ಜುಲೈ 26 ದೇಶದ ಇತಿಹಾಸದಲ್ಲಿ ಎಂದು ಮರೆಯದ ದಿನ. ಪ್ರತಿಯೊಬ್ಬ ದೇಶಪ್ರೇಮಿ ಹೆಮ್ಮೆ ಪಡೆಬೇಕಾದ ದಿನ ಎಂದು ರಾಜೀವ್ ಬರೆದರು.

ಕಾರ್ಗಿಲ್ ವಿಜಯ

ಕಾರ್ಗಿಲ್ ವಿಜಯ

ಕಾಲು ಕೆದರಿಕೊಂಡು ಬಂದಿದ್ದ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ 17 ವರ್ಷಗಳು ಕಳೆದ ಸಂದರ್ಭ ರಾಜೀವ್ ಚಂದ್ರಶೇಖರ್ ಹುತಾತ್ಮ ಯೋಧರಿಗೆ ನಮನ ಸಲ್ಲಿಕೆ ಮಾಡಿದರು.

ದೇಶವೇ ಹಿಂದಿರಬೇಕು

ದೇಶವೇ ಹಿಂದಿರಬೇಕು

ಇಡೀ ದೇಶವೇ ಸದಾ ಸೈನಿಕರ ಹಿಂದೆ ಇರಬೇಕು. ಭದ್ರತೆ ಮತ್ತು ಸಮಗ್ರತೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದು ತಿಳಿಸಿದರು.

ಸೇನೆಯ ವಿರುದ್ಧ ಆರೋಪ ಸಲ್ಲ

ಸೇನೆಯ ವಿರುದ್ಧ ಆರೋಪ ಸಲ್ಲ

ದೇಶದ ಯಾವುದೋ ಒಂದು ಕಾಯ್ದೆ ಬಳಕೆ ಮಾಡಿಕೊಂಡು ಸೇನೆಯ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಚಂದ್ರಶೇಖರ್ ಹೇಳಿದರು.

ಕುಟುಂಬದವರನ್ನು ಸ್ಮರಿಸೋಣ

ಕುಟುಂಬದವರನ್ನು ಸ್ಮರಿಸೋಣ

ಕಾರ್ಗಿಲ್ ವಿಜಯಕ್ಕೆ ಕಾರಣರಾದ ಸೈನಿಕರ ಕುಟುಂಬದವರನ್ನು ಸ್ಮರಿಸೋಣ, ದೇಶದ ಬದ್ಧತೆಗಾಗಿ ಗಂಡನನ್ನು, ಮಗನನ್ನು, ಸಹೋದರನನ್ನು ಕಳೆದುಕೊಂಡ ಕುಟುಂಬಗಳ ನೆರವಿಗೆ ಧಾವಿಸೋಣ ಎಂದು ರಾಜೀವ್ ಕರೆ ನೀಡಿದರು.

English summary
On the occasion of Kargil Vijay Diwas, MP Rajeev Chandrasekhar paid homage to Kargil War Martyrs at Amar Jawan Jyoti, India Gate. He laid a wreath will be made of Marigold flowers and read "RAJEEV CHANDRASEKHAR, MP INDIA REMEMBERS" . INDIA REMEMBERS is a project launched on 14 July 2016 to institutionalise a National Day of Remembrance or Sainik Samriti Diwas to honour all Indian soldiers who have laid down their lives for the Nation, the veterans who have served and the soldiers who continue to serve today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X