ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸಂಸದೆ ಕಿರಣ್ ಖೇರ್‌ಗೆ ಬ್ಲಡ್ ಕ್ಯಾನ್ಸರ್

|
Google Oneindia Kannada News

ನವದೆಹಲಿ, ಏಪ್ರಿಲ್ 1: ಚಂಡೀಗಢ ಬಿಜೆಪಿ ಸಂಸದೆ ಕಿರಣ್‌ ಖೇರ್‌ಗೆ ರಕ್ತದ ಕ್ಯಾನ್ಸರ್ ಇರುವ ಕುರಿತು ಅವರ ಪತಿ ಅನುಪಮ್ ಖೇರ್ ಮಾಹಿತಿ ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಕುರಿತು ತಿಳಿಸಿರುವ ನಟ ಅನುಪಮ್ ಖೇರ್, ಪತ್ನಿಗೆ ರಕ್ತದ ಕ್ಯಾನ್ಸರ್ ಇರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ.

ವೈದ್ಯರ ಸಲಹೆಯಂತೆ ಈಗಾಗಲೇ ಸೂಕ್ತ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಅವಳು ಹೋರಾಟಗಾರ್ತಿಯಾಗಿದ್ದು, ಮೊದಲಿಗಿಂತಲೂ ಹೆಚ್ಚು ಗಟ್ಟಿಯಾಗಿ ಹೊರಬರುತ್ತಾಳೆ ಎನ್ನುವ ನಂಬಿಕೆ ಇದೆ.

 MP Kirron Kher Suffering From Blood Cancer, Undergoing Treatment In Mumbai

ಆಕೆ ಸಾಕಷ್ಟು ಜನರ ಪ್ರೀತಿ ಪಾತ್ರಳಾಗಿದ್ದು, ನಿಮ್ಮ ಪ್ರೀತಿಯಿಂದಲೇ ಆಕೆ ಗುಣಮುಖಳಾಗುತ್ತಾಳೆ, ಹೀಗೆಯೇ ನಿಮ್ಮ ಪ್ರೀತಿ ತೋರಿಸುತ್ತಿರಿ, ಆಕೆ ಚೇತರಿಕೆಯ ಹಾದಿಯಲ್ಲಿದ್ದು, ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಚಿರ ಋಣಿಯಾಗಿದ್ದೇನೆ ಎಂದು ಬರೆದಿದ್ದಾರೆ.

ಕಿರಣ್ ಖೇರ್ ಅಪರೂಪದ ರಕ್ತದ ಕ್ಯಾನ್ಸರ್ (myeloma)ದಿಂದ ಬಳಲುತ್ತಿದ್ದಾರೆ, ಸಧ್ಯ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ವರ್ಷ ನವೆಂಬರ್ 11ರಂದು ಅವರ ಎಡಕಾಲು ಮೂಳೆ ಮುರಿದಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯ ನಂತರ ಅವರಿಗೆ ಅಪರೂಪದ ಬ್ಲಡ್ ಕ್ಯಾನ್ಸರ್ ಇರುವುದು ತಿಳಿದುಬಂದಿತ್ತು.

ಈ ರೋಗವು ಬಳಿಕ ಬಲಗಾಲು, ಕೈಗಳಿಗೂ ಹರಡುತ್ತಿತ್ತು. ಹೀಗಾಗಿ ಡಿಸೆಂಬರ್ 4 ರಂದು ಮುಂಬೈಗೆ ಚಿಕಿತ್ಸೆಗೆಂದು ತೆರಳಿದ್ದರು. ನಾಲ್ಕು ತಿಂಗಳ ಚಿಕಿತ್ಸೆ ಬಳಿಕ ಇದೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿರಿಸುವುದಿಲ್ಲ, ಆಗಾಗ ಆಸ್ಪತ್ರೆಗೆ ಬಂದುಹೋಗಬೇಕಾಗುತ್ತದೆ ಎಂದಿದ್ದಾರೆ.

Recommended Video

ಇಂದಿನಿಂದ ಸಾರಿಗೆ ನೌಕರರ ಚಳುವಳಿ ಆರಂಭ, ಏ.7ಕ್ಕೆ ಬಸ್‌ ಸಂಚಾರ ಸ್ಥಗಿತ | Oneindia Kannada

2014ರಲ್ಲಿ ಕಿರಣ್ ಖೇರ್ ರಾಜಕೀಯ ಪ್ರವೇಶಿಸಿದ್ದರು. ಅವರು ಇಂಡಿಯಾಸ್ ಗಾಟ್ ಟಾಲೆಂಟ್‌ನ ಜಡ್ಜ್ ಕೂಡ ಆಗಿದ್ದರು.

English summary
The Bharatiya Janata Party’s MP from Chandigarh and renowned actress Kirron Kher is suffering from multiple myeloma, a type of blood cancer, and is currently undergoing treatment in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X