ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ : ಮರಳು ಮಾಫಿಯಾಕ್ಕೆ ಪತ್ರಕರ್ತ ಸಂದೀಪ್ ಬಲಿ

By Mahesh
|
Google Oneindia Kannada News

ಇಂದೋರ್, ಮಾರ್ಚ್ 26 : ಮರಳು ಮಾಫಿಯಾಕ್ಕೆ 35 ವರ್ಷ ವಯಸ್ಸಿನ ಪತ್ರಕರ್ತ ಸಂದೀಪ್ ಶರ್ಮ ಬಲಿಯಾಗಿದ್ದಾರೆ. ಮರಳು ಗಣಿಗಾರಿಕೆ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಅಪೈತ್ರ ಮೈತ್ರಿ ಇದ್ದು, ಅಕ್ರಮ ಚಟುವಟಿಕೆಗೆ ಕುಮ್ಮಕ್ಕು ಸಿಗುತ್ತಿದೆ ಎಂಬುದರ ಬಗ್ಗೆ ತನಿಖಾ ವರದಿ ತಯಾರಿಸಲು ಸಂದೀಪ್ ಮುಂದಾಗಿದ್ದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆದರೆ, ಮಾಫಿಯಾದವರು ಭಿಂಡ್ ನಲ್ಲಿ ಸೋಮವಾರ ಬೆಳಗ್ಗೆ ಸಂದೀಪ್ ಅವರ ಮೇಲೆ ಟ್ರಕ್ ಹರಿಸಿ ಹತ್ಯೆಗೈಯ್ದಿದ್ದಾರೆ. ಮೋಟರ್ ಸೈಕಲ್ ನಲ್ಲಿ ಚಲಿಸುತ್ತಿದ್ದ ಸಂದೀಪ್ ಅವರನ್ನು ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು, ಅಪ್ಪಚ್ಚಿ ಮಾಡಲಾಗಿದೆ. ಈ ದೃಶ್ಯಗಳು ಸಿಸಿಟಿವಿಯೊಂದರಲ್ಲಿ ದಾಖಲಾಗಿದೆ.

ಮರಳು ಮಾಫಿಯಾದವರಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ರಕ್ಷಣೆ ಕೊಡಿ ಎಂದು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಂದೀಪ್ ಮನವಿ ಮಾಡಿದ್ದರು. ಈಗ ಸಂದೀಪ್ ಹತ್ಯೆ ಪ್ರಕರಣವನ್ನು ವಿಶೇಷ ತನಿಖಾ ದಳಕ್ಕೆ ವಹಿಸಲಾಗಿದ್ದು, ತನಿಖೆ ಜಾರಿಯಲ್ಲಿದೆ.

English summary
A 35-year-old journalist Sandeep Sharma investigative journalist who was probing possible links between the sand mafia and police officials was run over by a dumper in Madhya Pradesh's Bhind on Monday morning. He had earlier complained t police about a threat to his life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X