ದಾವೆ ಕಳೇಬರಕ್ಕೆ ಹೆಗಲು ನೀಡಿದ ಸರಳ ಜೀವಿ ಶಿವರಾಜ್ ಸಿಂಗ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಭೋಪಾಲ್ (ಮಧ್ಯಪ್ರದೇಶ), ಮೇ 19: ನನ್ನ ಸ್ಮಾರಕಕ್ಕೆ ಹಣ ಖರ್ಚು ಮಾಡಬೇಡಿ, ಬದಲಾಗಿ ಆ ಜಾಗದಲ್ಲಿ ಒಂದಷ್ಟು ಮರ ಬೆಳೆಸಿ ಎಂದು ಸತ್ತ ಮೇಲೂ ತಾವು ಹಸಿರಿನ ಮೂಲಕ ಬದುಕುಳಿಯುವಂಥ ಆದರ್ಶದ ಮಾತುಗಳನ್ನಾಡಿದ ಕೇಂದ್ರ ಪರಿಸರ ಖಾತೆ ಸಚಿವ ಅನಿಲ್ ಮಾಧವ್ ದಾವೆ(60) ಅವರ ಅನಿರೀಕ್ಷಿತ ನಿಧನ ಮೋದಿಯವರಂಥ ಗಣ್ಯಾತಿ ಗಣ್ಯ ನಾಯಕರನ್ನೇ ಕ್ಷಣಕಾಲ ಕಂಪಿಸಿದೆ.

ಸಾಯುವ ಒಂದು ದಿನ ಮೊದಲು ಪ್ರಧಾನಿ ಮೋದಿಯವರೊಂದಿಗೆ ವಿವಿಧ ಹೊಸ ಯೋಜನೆಗಳ ಬಗಗೆ ಲೋಕಾಭಿರಾಮವಾಗಿ ಮಾತನಾಡಿದ ದಾವೆ, ಮರುದಿನ 'ಇಲ್ಲ' ಎಂದರೆ ಯಾರಿಗೆ ನಂಬಲಿಕ್ಕಾಗುತ್ತದೆ? ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗಂತೂ ಒಬ್ಬ ಸ್ನೇಹಿತರನ್ನು ಕಳೆದುಕೊಂಡ ದುಃಖ. ಆದ್ದರಿಂದಲೇ ನಿನ್ನೆ ನಡೆದ ದಾವೆ ಅವರ ಅಂತ್ಯಸಂಸ್ಕಾರದಲ್ಲಿ ಕುಟುಂಬದ ವ್ಯಕ್ತಿಯೆಂಬಂತೆಯೇ ಪಾಲ್ಗೊಂಡ ಚೌಹಾಣ್, ದಾವೆ ಅವರ ಕಳೇಬರವನ್ನು ಶವಸಂಸ್ಕಾರಕ್ಕೆಂದು ಹೊತ್ತೊಯ್ಯುತ್ತಿದ್ದವರೊಂದಿಗೆ ತಾವೂ ಹೆಗಲು ನೀಡಿದರು.[ಕೇಂದ್ರ ಪರಿಸರ ರಾಜ್ಯ ಸಚಿವ ಅನಿಲ್ ಮಾಧವ್ ದವೆ ನಿಧನ]

ತಾವು ಒಂದು ರಾಜ್ಯದ ಮುಖ್ಯಮಂತ್ರಿ ಎಂಬ ಹಮ್ಮನ್ನೆಲ್ಲ ಮರೆತು ಕಳೇಬರಕ್ಕೆ ಹೆಗಲಾಗಿ ಚೌಹಾಣ್ ಆದರ್ಶವಾದರೆ, ತಾನು ಸತ್ತ ಮೇಲೆ ಸ್ಮಾರಕ ಕಟ್ಟುವುದು ಬೇಡ, ಗಿಡ ನೆಡಿ ಎನ್ನುತ್ತ ದವೆ, ಅಸುನೀಗಿದ ಮೇಲೂ ಆದರ್ಶರಾದರು.

ಸರಳ ಬದುಕು ಎಂದರೆ ಇದೇ ತಾನೇ? ಅತ್ತ ಮಧ್ಯಪ್ರದೇಶದಲ್ಲಿ ದವೆ ಅಂತ್ಯಕ್ರಿಯೆಯ ನೋವು ಮಡುಗಟ್ಟಿದ್ದರೆ, ಇತ್ತ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ನೀಡಿದ್ದ ಗಲ್ಲುಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡುತ್ತಿದ್ದಂತೆಯೇ ಗುಜರಾತಿನ ಅಹಮದಾಬಾದಿನಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆಗೊಂಡಿತ್ತು.[ಜಾಧವ್ ಗಲ್ಲು ಶಿಕ್ಷೆಗೆ ತಡೆ; ಅಂತಾರಾಷ್ಟ್ರೀಯ ಕೋರ್ಟ್ ಐತಿಹಾಸಿಕ ತೀರ್ಪು]

ಕಳೇಬರಕ್ಕೆ ಹೆಗಲು ನೀಡಿದ ಮುಖ್ಯಮಂತ್ರಿ

ಕಳೇಬರಕ್ಕೆ ಹೆಗಲು ನೀಡಿದ ಮುಖ್ಯಮಂತ್ರಿ

ನಿನ್ನೆ (ಮೇ 18) ಅನಾರೋಗ್ಯದ ಕಾರಣ ಮೃತರಾದ ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದಾವೆ ಅವರ ಕಳೇಬರ ಹೊರುವುದಕ್ಕೆ ಹೆಗಲು ನೀಡಿದ ಚೌಹಾಣ್.

ಕುಲಭೂಷಣ್ ಜಾಧವ್

ಕುಲಭೂಷಣ್ ಜಾಧವ್

ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ವಿಧಿಸಿದ್ದ ಗಲ್ಲುಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಯೊಡ್ಡಿ ತೀರ್ಪು ನೀಡುತ್ತಿದ್ದಂತೆಯೇ ಗುಜರಾತಿನ ಅಹಮದಾಬಾದಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ ಜನರು.[ಜಾಧವ್ ನೇಣು ತಡೆ : ಕೋರ್ಟಿನ 10 ಪ್ರಮುಖ ಹೇಳಿಕೆ]

ಬಾಲಿವುಡ್ 'ಅಮ್ಮ'ನ ಅಂತಿಮ ದರ್ಶನಕ್ಕೆ ಬಂದ ಗಣ್ಯರು

ಬಾಲಿವುಡ್ 'ಅಮ್ಮ'ನ ಅಂತಿಮ ದರ್ಶನಕ್ಕೆ ಬಂದ ಗಣ್ಯರು

ನಿನ್ನೆ (ಮೇ 18) ಹೃದಯಾಘಾತದಿಂದ ಹತರಾದ ಬಾಲಿವುಡ್ ನ ಅಮ್ಮ ನಟಿ ಎಂದೇ ಖ್ಯಾತರಾಗಿದ್ದ ರೀಮಾ ಲಗೂ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ, ಅವರ ಅಂತಿಮ ದರ್ಶನ ಪಡೆದ ಬಾಲಿವುಡ್ ನಟರಾದ ಕಿರಣ್ ಕುಮಾರ್ ಮತ್ತು ರಿಷಿ ಕಫೂರ್ ಕಾಣಿಸಿಕೊಂಡಿದ್ದು ಹೀಗೆ.

ಪ್ರೇಮಸೌಧದ ಮುಂದೆ ಪ್ರಣಯ ಪಕ್ಷಿಗಳು

ಪ್ರೇಮಸೌಧದ ಮುಂದೆ ಪ್ರಣಯ ಪಕ್ಷಿಗಳು

ಪ್ರೇಮ ಸೌಧ ಎಂದೇ ಪ್ರಖ್ಯಾತಿ ಪಡೆದ, ಆಗ್ರಾದ ಜಗತ್ಪ್ರಸಿದ್ಧ ತಾಜ್ ಮಹಲ್ ಎದುರು ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ ಕೆನ್ನೆತ್ ಫರೀಡ್ ತಮ್ಮ ಪ್ರಿಯತಮೆಯೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.[ಬಾಲಿವುಡ್ ನ ನೆಚ್ಚಿನ ಅಮ್ಮ ನಟಿ ರೀಮಾ ಲಾಗೂ ಇನ್ನಿಲ್]

ಅಂಧರನ್ನೂ ಸೆಳೆವ ಅಂದದ ಮೂರ್ತಿ!

ಅಂಧರನ್ನೂ ಸೆಳೆವ ಅಂದದ ಮೂರ್ತಿ!

ಅಂತಾರಾಷ್ಟ್ರೀಯ ಮ್ಯೂಸಿಯಂ ದಿನದ ಹಿನ್ನೆಲೆಯಲ್ಲಿ ನಿನ್ನೆ(ಮೇ 18) ನಾಗ್ಪುರದ ಮ್ಯೂಸಿಯಂ ಒಂದರಲ್ಲಿ ಅಂಧ ಮಹಿಳೆಯರು ಶಿಲ್ಪವೊಂದನ್ನು ಮುಟ್ಟಿ, ಕಲ್ಪನೆಯಲ್ಲೇ ಅದರ ಕಲಾವೈಭವವನ್ನು ಸವಿಯುತ್ತಿರುವುದು.

ಕೇನ್ಸ್ ನಲ್ಲಿ ಡಿಂಪಲ್ ಬ್ಯೂಟಿ

ಕೇನ್ಸ್ ನಲ್ಲಿ ಡಿಂಪಲ್ ಬ್ಯೂಟಿ

ಬಾಲಿವುಡ್ ನ ಬಹುಬೇಡಿಕೆಯ ನಟಿ, ಹಾಲಿವುಡ್ ನಲ್ಲೂ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಫ್ರಾನ್ಸ್ ನ ಕಾನ್ಸ್ ನಲ್ಲಿ ನಡೆಯುತ್ತಿರುವ 70ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಬಾಲ್ಯ ಸ್ನೇಹಿತರ ಸಂಭ್ರಮ

ಬಾಲ್ಯ ಸ್ನೇಹಿತರ ಸಂಭ್ರಮ

ಅಂತಾರಾಷ್ಟ್ರೀಯ ನ್ಯಾಯಾಲಯ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ವಿಧಿಸಿದ್ದ ಗಲ್ಲುಶಿಕ್ಷೆಗೆ ತಡೆಯೊಡ್ಡಿ ತೀರ್ಪು ನೀಡುತ್ತಿದ್ದಂತೆಯೇ ಮುಂಬೈಯಲ್ಲಿರುವ ಕುಲಭೂಶಃಣ್ ಅವರ ಬಾಲ್ಯದ ಸ್ನೇಹಿತರು ಅವರ ಫೋಟೋದ ಮುಂದೆ ಸಿಹಿ ತಿಂದು ಸಂಭ್ರಮಿಸಿದರು.

ಮುರಿಯಿತು ಪೋರ್ಚುಗೀಸರ ಕಾಲದ ಸೇತುವೆ

ಮುರಿಯಿತು ಪೋರ್ಚುಗೀಸರ ಕಾಲದ ಸೇತುವೆ

ಗೋವಾದ ಕರ್ಕೊತರೆಮ್ ಎಂಬಲ್ಲಿ ನಿನ್ನೆ (ಮೇ 18) ಮುರಿದು ಬಿದ್ದ ಪೊರ್ಚುಗೀಸರ ಕಾಲದ ಸನ್ವರ್ದೆಮ್ ಸೇತುವೆಯಿಂದ ಸಂಭವಿಸಿದ ಅನಾಹುತದ ರಕ್ಷಣಾ ಕಾರ್ಯದ ಚಿತ್ರ ಇದು. ಘಟನೆಯಲ್ಲಿ ಓರ್ವ ವ್ಯಕ್ತಿ ಅಸುನೀಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Madhya Pradesh chief minister Shivraj singh Chouhan with BJP leaders shouldering the mortal remains of Union minister Anil Madhav Dave at airport in Bhopal on Thursday
Please Wait while comments are loading...