ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೈ' ಪಕ್ಷವನ್ನು ಕಾಡುತ್ತಿದೆ ಬಿಜೆಪಿ 'ಕಮಲ'

By Mahesh
|
Google Oneindia Kannada News

ಮಧ್ಯಪ್ರದೇಶ, ಅ.29: ಕಮಲ, ಭಾರತದ ರಾಷ್ಟ್ರೀಯ ಪುಷ್ಪ. ಜತೆಗೆ ಭಾರತೀಯ ಜನತಾ ಪಕ್ಷದ ಅಧಿಕೃತ ಚಿನ್ಹೆ ಕೂಡಾ. ಆದರೆ, ಮುಂಬರುವ ಮಧ್ಯಪ್ರದೇಶ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಕೆಸರಿನಲ್ಲಿ ಅರಳುವ 'ಕಮಲ' ಇರುವ ಕೆರೆಗಳನ್ನು ನಾಶ ಪಡಿಸಲು ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿರುವ ಕೆರೆ, ತೊರೆ, ಕೊಳಗಳಲ್ಲಿ ಕಂಡು ಬರುವ ಕಮಲ ಜನರ ಕಣ್ಣಿಗೆ ಬೀಳದಂತೆ ಮಾಡಲು ಕಾಂಗ್ರೆಸ್ ಸಜ್ಜಾಗಿದೆ ಎಂಬ ಸುದ್ದಿ ಮಂಗಳವಾರ ಬಹಿರಂಗಗೊಂಡಿದೆ.

ಇತ್ತೀಚೆಗೆ ಹೊರ ಬಿದ್ದಿರುವ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಗಮಿಸಿದರೆ ಮಧ್ಯ್ರಪ್ರದೇಶ ಕಾಂಗೆಸ್ ತೆಗೆದುಕೊಂಡಿರುವ ಈ ವಿಚಿತ್ರ ಕ್ರಮ ಅಚ್ಚರಿ ಎನಿಸುವುದಿಲ್ಲ. ಶಿವರಾಜ್ ರಾಜ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಮಧ್ಯಪ್ರದೇಶದಲ್ಲಿ ತನ್ನ ಅಧಿಕಾರ ಸ್ಥಾಪಿಸುವುದು ಖಚಿತ ಎಂದು ಸಮೀಕ್ಷೆಗಳು ಸಾರಿವೆ.

Ahead of assembly polls, BJP's 'Lotus' gives MP Congress a nightmare!

ಚುನಾವಣೆ ಇನ್ನೊಂದು ತಿಂಗಳು ಬಾಕಿ ಇರುವಂತೆ ರಾಜ್ಯದಲ್ಲಿರುವ ಕೆರೆಗಳಲ್ಲಿ ಕಾಣಿಸಿಕೊಳ್ಳುವ ಕಮಲಗಳನ್ನು ಮುಚ್ಚಿಡುವಂತೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದೆ.

ಚುನಾವಣೆ ಮುಗಿಯುವ ತನಕ ಮತದಾರರ ಕಣ್ಣಿಗೆ ಕಮಲ ಪುಷ್ಪ ಕಾಣಿಸಿದಂತೆ ಮಾಡಿ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ. ಕಮಲ ಪುಷ್ಪ ಹೊಂದಿರುವ ಕೆರೆಗಳಿಗೆ ಹೊದಿಕೆ ಹಾಕಲು ಹೇಗೆ ಸಾಧ್ಯ ಎಂಬುದು ನಮಗೆ ತಿಳಿದಿಲ್ಲ ಅದರೆ, ನಮ್ಮ ಮನವಿಗೆ ಸೂಕ್ತ ಪರಿಹಾರ, ಸಲಹೆ ನೀಡಿ ಎಂದು ಆಯೋಗವನ್ನು ಕಾಂಗ್ರೆಸ್ ಕೇಳಿಕೊಂಡಿದೆ.

ಕಾಂಗ್ರೆಸ್ ಮನವಿ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ವಿಶ್ವಾಸ್ ಸಾರಾಂಗ್, 'ಇದು ಕಾಂಗ್ರೆಸ್ಸಿಗರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಹಾಗೂ ಹೇಗೆ ಸ್ವಂತಿಕೆ ಇಲ್ಲದ ಪಕ್ಷವಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಇವರ ವಾದ ಹೇಗಿದೆ ಎಂದರೆ ಇನ್ಮುಂದೆ ಕಾಂಗ್ರೆಸ್ ಬೆಂಬಲಿಸುವ ಜನರು ತಮ್ಮ ಹಸ್ತ(ಕಾಂಗ್ರೆಸ್ ಪಕ್ಷದ ಗುರುತು) ವನ್ನು ಮುಚ್ಚಿಟ್ಟುಕೊಂಡು ಓಡಾಟಬೇಕಾಗುತ್ತದೆ' ಎಂದು ನಗೆಯಾಡಿದ್ದಾರೆ.

ಚಳಿಗಾಲದ ಸಂದರ್ಭದಲ್ಲಿ ಇಲ್ಲಿನ ಬುಂಡೆಲ್ ಖಂಡ್ ಪ್ರದೇಶ ಹಾಗೂ ಮಾಳ್ವಾದ ಮಹಾಕೌಶಾಲ್ ನ ಜಲಾಗಾರದಲ್ಲಿ ಕಮಲ ಪುಷ್ಪಗಳು ಯಥೇಚ್ಛವಾಗಿ ಅರಳುವ ಮೂಲಕ ಕಣ್ಮನ ಸೆಳೆಯುತ್ತವೆ.

ಇತ್ತೀಚೆಗೆ ಪಾಟ್ನಾದಲ್ಲಿ ನಡೆದ ಹೂಂಕಾರ್ ಮೆರವಣಿಗೆಯಲ್ಲಿ 'ಕಮಲ' ದ ಮಹತ್ವದ ಬಗ್ಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದರು. 'ದೇಶದ ಜನತೆ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಮೇಲೆ ಯಾರು ಎಷ್ಟೇ ಕೆಸರು ಎರಚಿದರೂ ತೊಂದರೆಯಿಲ್ಲ ಕೆಸರಿನಿಂದಲೇ ಕಮಲ ಅರಳಿ ನಳನಳಿಸಲಿದೆ' ಎಂದಿದ್ದರು.

English summary
Lotus, the beautiful flower, is India's national flower, besides being the party symbol of the Bharatiya Janata Party (BJP). But ahead of the crucial assembly elections in Madhya Pradesh, the opposition Congress is irked by the presence of lotus flowers in the poll-bound state, a report said on Tuesday(Oct.29).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X