ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀರಿಕೊಂಡ ತಾಯಿಯ ಎದೆಹಾಲು ಕುಡಿಯಲು ಯತ್ನಿಸುತ್ತಿದ್ದ ಮಗು

ದುರ್ಘಟನೆಗಳು, ಮನಸ್ಸು ಕಲಕುವ ಸನ್ನಿವೇಶಗಳು ಬಹಳ ಕಾಲ ಕಾಡುತ್ತಲೇ ಇರುತ್ತವೆ. ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದರ ವರದಿ ಇದು. ಓದುತ್ತಿದ್ದರೆ ಕಣ್ಣು ತೇವವಾಗುವಂತಿದೆ. ಅಮ್ಮ ಎನ್ನುವ ಅದ್ಭುತ ಮತ್ತೆಮತ್ತೆ ಸಾಬೀತಾಗುತ್ತಲೇ ಇರುತ್ತದೆ

By ವಿಕಾಸ್ ನಂಜಪ್ಪ
|
Google Oneindia Kannada News

ಭೋಪಾಲ್, ಮೇ 25: ಆ ಮಹಿಳೆಯ ಶವ ರೈಲ್ವೆ ಹಳಿಯ ಪಕ್ಕದಲ್ಲಿ ಬಿದ್ದಿತ್ತು. ಆಕೆಯ ಒಂದು ವರ್ಷದ ಮಗುವಿಗೆ ಹಸಿವಾಗುತ್ತಿತ್ತೋ ಏನೋ ಎದೆಹಾಲು ಕುಡಿಯಲು ಪ್ರಯತ್ನಿಸುತ್ತಿತ್ತು. ಇಂಥ ಹೃದಯ ಕರಗಿಸುವ ವರದಿಯೊಂದು ಮಧ್ಯಪ್ರದೇಶದ ದಾಮೋದಿಂದ ಆಗಿದೆ. ತನ್ನ ತಾಯಿ ಬದುಕಿಲ್ಲ ಎಂಬುದು ಗೊತ್ತಿಲ್ಲದ ಮಗು ಎದೆ ಹಾಲು ಕುಡಿಯುವುದಕ್ಕೆ ಪ್ರಯತ್ನಿಸುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.

ಬುಧವಾರ ಬೆಳಗ್ಗೆ ಮಗು ಹಾಗೂ ಆ ತಾಯಿಯನ್ನು ರೈಲ್ವೆ ಹಳಿಯ ಬಳಿ ನೋಡಿದ ಸ್ಥಳೀಯರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವರೆಗೆ ಮಹಿಳೆ ಸಾವಿಗೆ ಕಾರಣ ಏನು ಅನ್ನೋದು ತಿಳಿದುಬಂದಿಲ್ಲ. ಆದರೆ ಪ್ರಾಥಮಿಕ ತನಿಖೆ ಪ್ರಕಾರ, ಆಕೆ ರೈಲಿನಿಂದ ಕೆಳಗೆ ಬಿದ್ದಿರಬಹುದು ಅಥವಾ ಯಾರಾದರೂ ಹೊಡೆದು ಹಾಕಿರಬಹುದು.[ಮುಂಬೈನಲ್ಲಿ ಮದುವೆ ನೋಡಿ, ಮನುಷ್ಯತ್ವ ಅಂದರೆ ಇದೇ ಅಲ್ಲವೆ?]

MP: As mother lay dead along railway track, baby ties to breastfeed

ಆಕೆಯ ಹಿಂಭಾಗದಿಂದ ತಲೆಗೆ ಹೊಡೆದು, ಮೃತಪಟ್ಟಿರುವುದು ಗೊತ್ತಾಗುತ್ತಿದೆ. ಸ್ಥಳೀಯ ನಿವಾಸಿಗಳು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಮಕ್ಕಳ ಕಲ್ಯಾಣ ಕಾರ್ಯಕರ್ತರಿಗೆ ಈ ಬಗ್ಗೆ ತಿಳಿಸಲಾಗಿದೆ. ಇನ್ನು ರೈಲ್ವೆ ಪೊಲೀಸರು ಹೇಳುವ ಪ್ರಕಾರ, ಜನರು ನೋಡುವ ಮುನ್ನವೇ ಆಕೆ ಮೃತಪಟ್ಟಿದ್ದಾರೆ.['ಕೋಡ್ ಬ್ಲ್ಯೂ' ಘೋಷಣೆ ಮಾಡಿದ ಆ ಕ್ಷಣ ನಡೆದಿತ್ತು ಪವಾಡ!]

ಮಗುವಿಗೆ ಯಾವುದೇ ಗಾಯವಾಗಿಲ್ಲ ಆದ್ದರಿಂದ ಅದನ್ನು ಉಳಿಸುವ ಸಲುವಾಗಿಯೇ ಅವುಚಿಕೊಂಡಿರುವ ಸಾಧ್ಯತೆ ಇದೆ. ಆಕೆಗೆ ಗಾಯವಾದ ಸಂದರ್ಭದಲ್ಲಿ ಪ್ರಜ್ಞೆ ಇತ್ತು ಎಂಬುದು ತಿಳಿಯುತ್ತದೆ. ಏಕೆಂದರೆ ಬಿಸ್ಕೆಟ್ ಪಾಕೆಟ್ ತೆಗೆದು ಮಗುವಿಗೆ ಕೊಟ್ಟಿದ್ದಾರೆ. ಎದೆಹಾಲು ಕುಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.[ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!]

ಆ ಮಗುವನ್ನು ತಾಯಿಯಿಂದ ಬೇರೆ ಮಾಡುವಾಗ ವಿಪರೀತ ಅತ್ತಿದೆ. ಈ ದೃಶ್ಯ ಕಂಡವರಿಗೆ ಮನಸ್ಸು ಕರಗಿದೆ. ಇಲ್ಲಿಗೆ ಎಲ್ಲವೂ ಮುಗಿದಿಲ್ಲ. ಸರಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ನಿಯಮಗಳ ಪ್ರಕಾರ ಹತ್ತು ರುಪಾಯಿ ಪ್ರವೇಶ ಶುಲ್ಕ ನೀಡಬೇಕು. ಆ ಮಗು ಹೇಗೆ ಕೊಡೋದಿಕ್ಕೆ ಸಾಧ್ಯ? ಅಲ್ಲಿನ ವಾರ್ಡ್ ಬಾಯ್ ತರುಣ್ ತಿವಾರಿ ಆ ದುಡ್ಡನ್ನು ನೀಡಿದ್ದಾರೆ.

ಆ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಆಕೆಯ ಪರ್ಸ್ ನಲ್ಲಿ ಜ್ಯುವೆಲರಿ ಮಳಿಗೆಯೊಂದರ ವಿಳಾಸ ಸಿಕ್ಕಿದೆಯಂತೆ. ಆ ಮಹಿಳೆಯ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿಕೊಂಡಿದ್ದಾರೆ.

English summary
As she lay dead along a railway track at Madhya Pradesh, her 1 year old baby who was hungry tried to breastfeed. This heart rendering story comes from Damoh in Madhya Pradesh. Residents discovered this toddler trying to breastfeed as his mother lay dead near a railway track.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X